ಸಿನಿಮಾ

‘ಪ್ರೀಮಿಯರ್ ಪದ್ಮಿನಿ’ ಮೇಲೆ ನವರಸ ನಾಯಕನ ಅದ್ದೂರಿ ಸವಾರಿ

ಕನ್ನಡದ ಖ್ಯಾತ ನಟ ನವರಸ ನಾಯಕ ಜಗ್ಗೇಶ್‌ ಈಗ ಪ್ರೀಮಿಯರ್‌ ಪದ್ಮಿನಿ ಕಾರು ಏರಿದ್ದಾರೆ. ಈ ಪಯಣದಲ್ಲಿ ತಮ್ಮೊಂದಿಗೆ ರೋಜಾ ಖ್ಯಾತಿಯ ಮಧುಬಾಲಾ ಅಭಿನಯ ಮಾಡಲಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಪಾತ್ರದ ಮುಖೇನ ಸದ್ದು ಮಾಡುತ್ತಿರುವ ಜಗ್ಗೇಶ್‌, ಈಗ ಪ್ರೀಮಿಯರ್‌ ಪದ್ಮಿನಿ ಎಂಬ ವಿಶಿಷ್ಟ ಟೈಟಲ್‌ವುಳ್ಳ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಇದುವರೆಗೂ ನಟಿಸದೇ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.. ಮೊದಲು ‘ಪ್ರೀಮಿಯರ್ ಪದ್ಮಿನಿ’ ಎಂಬ ಹೆಸರಿನ ಕಾರುಗಳು ಎಲ್ಲೆಡೆ ನೋಡುವುದಕ್ಕೆ ಸಿಗುತ್ತಿದ್ದವು. ಆದರೆ, ಹೊಸ ಕಾರುಗಳ ಭರಾಟೆಯಲ್ಲಿ `ಪ್ರೀಮಿಯರ್ ಪದ್ಮಿನಿ’ ಕಳೆದೇ ಹೋಗಿದೆ. ಈಗ ಅದೊಂದು ಚಿತ್ರ ಹೆಸರಾಗಿದೆ. ಈ ಚಿತ್ರವನ್ನು ನಟಿ-ನಿರ್ದೇಶಕಿ-ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿದ್ದು, ಅವರ ಪತಿ ರಮೇಶ್ ಇಂದಿರಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾಗೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚನೆ ಮಾಡಿದ್ದಾರೆ.

 

 

ಇದೊಂದು ಕೌಟುಂಬಿಕ ಡ್ರಾಮಾ ಆಗಿದ್ದು, ಜಗ್ಗೇಶ್ ಜೊತೆಗೆ ಮಧು, ಸುಧಾರಾಣಿ, ಸಿಹಿಕಹಿ ಗೀತಾ ಮುಂತಾದವರು ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾ ಗೆ ಅರ್ಜುನ್ ಜನ್ಯ ಸಂಗೀತ ಹಾಗು ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಕಾರ್ಯ ಎಪ್ರಿಲ್ 18ರಂದು ಆರಂಭ ಆಗಲಿದೆ, ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರದ ಶೂಟಿಂಗ್ ಕೆಲಸ ನಡೆಯಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top