ಸಮಾಚಾರ

ಡೈವ್‌ ಹೊಡೆದು, ಇನ್ನೇನು ಮಿಸ್‌ ಆಗುತ್ತಿದ್ದ ಕ್ಯಾಚ್‌ನ್ನು ಕನ್ನಡಿಗ ಮನೀಶ್ ಪಾಂಡೆ ಹೀಗೆ ಹಿಡಿದರು

ಐಪಿಎಲ್‌ನ 10 ನೇ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್ ಹಾಗು ಕೋಲ್ಕತ್ತಾ ಪಂದ್ಯದಲ್ಲಿ ಕನ್ನಡಿಗ ಮನಿಷ್‌ ಪಾಂಡೆ ಸಖತ್‌ ಫೀಲ್ಡಿಂಗ್‌ ಮಾಡುವ ಮೂಲಕ ಮಿಂಚಿದ್ದಾರೆ ಎಂದು ತಿಳಿದು ಬಂದಿದೆ.

 

ಸನ್‌ ರೈಸರ್ಸ್‌ ಹೈದರಾಬಾದ್ ಪರವಾಗಿ ಆಡುತ್ತಿರುವ ಮನಿಷ್‌ ಪಾಂಡೆ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಫೀಲ್ಡಿಂಗ್‌ ಮಾಡುವ ಮಾಡಿದ್ದಾರೆ. ಅದರಲ್ಲೂ ಡೈವ್‌ ಹೊಡೆಯುತ್ತಲೇ ಮಿಸ್‌ ಮಾಡಿದ ಕ್ಯಾಚ್‌ನ್ನು ಹಿಡಿದು ಅಲ್ಲಿ ನೆರದಿದ್ದ ಕ್ರಿಕೆಟ್‌ ಅಭಿಮಾನಿಗಳನ್ನು ನಿಬ್ಬೆರಗೊಳಿಸಿದ್ದಾರೆ.

 

ಕೋಲ್ಕತಾ ತಂಡದ ಆಟಗಾರ ಸ್ಟಾನ್ಲೇಕ್ ಎಸೆದ ಬಾಲ್‌ನ್ನು ನೀತೀಶ್‌ ರಾಣಾ ಕಟ್‌ ಮಾಡಿದ್ದಾರೆ. ಮನಿಷ್‌ ಪಾಂಡೆ ಈ ಕ್ಯಾಚ್‌ನ್ನು ಹಿಡಿದರು. ಆದ್ರೆ ಮನಿಷ್‌ ಪಾಂಡೆ ಡೈವ್‌ ಹೊಡೆಯುತ್ತಲೇ ಮಿಸ್‌ ಮಾಡಿದ ಕ್ಯಾಚ್‌ನ್ನು ಹಾಗೇಯೇ ಹಿಡಿಯುತ್ತಾರೆ. ಈ ಕ್ಯಾಚ್‌ ನೋಡಿದ ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೊಂಡಿದ್ದರು.

 

 

ಈಗ ಮನೀಶ್ ಪಾಂಡೆ ಅದ್ಬುತ ಕ್ಯಾಚ್ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಎಲ್ಲರು ಮನೀಶ್ ಪಂದೆ ಸಾಹಸಮಯಿ ಕ್ಯಾಚ್ ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top