ಸಮಾಚಾರ

ಕಾಸ್ಟಿಂಗ್ ಕೌಚ್ ಕಾಟಕ್ಕೆ ಕಂಗನಾ ರನೌತ್ ಕೂಡಾ ಕಂಗಾಲಾಗಿದ್ದಳು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಟ್ಟು ನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ. ತಮಿಳು ಚಿತ್ರರಂಗದಲ್ಲಿ ಇಂಥಾದ್ದರ ವಿರುದ್ಧ ಹೋರಾಡಲಾರದೆ ಅನೇಕ ನಟಿಯರು ಸವನ್ನು ಅಪ್ಪಿಕೊಂಡಿದ್ದಾರೆ. ಕೆಲವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷಿಗಳಲ್ಲಿ ನಟಿಸುತ್ತಿರೋ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಟ್ಟಿದ್ದಾರೆ.

 

 

ಬಾಲಿವುಡ್‌ನಲ್ಲಿ ಬೋಲ್ಡ್ ಆಂಡ್ ಬ್ಯೂಟಿಫುಲ್ ಎಂದೇ ಹೆಸರಾಗಿರುವಾಕೆ ಕಂಗನಾ ರನಾತ್. ಯಾರಿಗೂ ಕೇರು ಮಾಡದ ಸ್ವಭಾವದ ಈ ಹುಡುಗಿಯೇ ಆರಂಭಿಕ ಕಾಲದಲ್ಲಿ ಕಾಮುಕರ ಬಾಧೆಗೊಳಗಾಗಿದ್ದಳು. ಆರಂಭದಲ್ಲಿ ಅವಕಾಶಕ್ಕಾಗಿ ಹುಡುಕಾಡುತ್ತಿದ್ದಾಗ ಈಕೆ ತನು ವೆಡ್ಸ್ ಮನು ಅಂತೊಂದು ಚಿತ್ರದ ಆಡಿಷನ್‌ಗೆ ಹೋಗಿದ್ದಾಗ ಕಾಸ್ಟ್ ಕೌಚಿಂಗ್ ಭೂತ ಎದುರಾಗಿತ್ತಂತೆ. ಇದರ ನಿರ್ದೇಶಕ ಮಹಾಶಯ ಆಡಿಷನ್ ಮುಗಿದಾದ ನಂತರ ನೇರವಾಗಿಯೇ ಕಂಗನಾಳನ್ನು ಮಂಚಕ್ಕೆ ಆಹ್ವಾನಿಸಿದ್ದನಂತೆ. ಆ ಕ್ಷಣ ಶಾಕ್ ಆದರೂ ಆಕೆ ನಿರ್ದೇಶಕನಿಗೇ ಶಾಕು ಕೊಟ್ಟು ಪಾರಾಗಿದ್ದಳಂತೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಚಿತ್ರದಲ್ಲಿ ಮಮತಾ ಕುಲಕರ್ಣಿ ನಾಯಕಿಯಾಗಿ ನಟಿಸಿದ್ದಳು. ಆರಂಭದಿಂದಲೂ ರಾಜಕುಮಾರ ಮಮತಾ ಮೇಲೊಂದು ಕಣ್ಣು ಮಡಗಿ ಕಿಚಾಯಿಸುತ್ತಲೇ ಇದ್ದ. ಅದೇ ಸಂದರ್ಭದಲ್ಲಿ ಚೀನಾ ಗೋಡೆಯ ಬಳಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ರಾಜ್‌ಕುಮಾರ್ ನೇರವಾಗಿಯೇ ಚೇಷ್ಟೆ ಶುರು ಮಾಡಿದ್ದ,. ನಂತರ ಶೂಟಿಂಗ್ ಪ್ಯಾಕಪ್ ಆದೇಟಿಗೆ ಮಮತಾಳನ್ನು ಆ ರಾತ್ರಿ ಮಂಚಕ್ಕೆ ಬರುವಂತೆ ಒತ್ತಾಯಿಸಿದ್ದ. ಇದನ್ನು ಸ್ಥಳದಲ್ಲಿಯೇ ಂತಿeಭಟಿಸಿದ್ದ ಮಮತಾ ರಂಪಾಟ ನಡೆಸಿದ್ದಳು. ಇದರಿಂದ ಮಾನ ಮರ್ಯಾದೆ ಹೋಗುವ ಭಯಕ್ಕೆ ಬಿದ್ದ ಆತ ದೊಡ್ಡವರ ಕೈ ಕಾಲು ಹಿಡಿದು ಮಮತಾಳನ್ನು ತಣ್ಣಗಾಗಿಸಿದ್ದನಂತೆ. ಇನ್ನುಳಿದಂತೆ ಪ್ರೀತಿ ಜೈನ್, ಸಾಕ್ಷಿ ಕಪೂರ್ ಸೇರಿದಂತೆ ಒಂದಷ್ಟು ನಟಿಯರು ಈ ಬಾಧೆಗೀಡಾದ ಸಂತ್ರಸ್ತೆಯರೇ.

 

 

ಮಲೆಯಾಳ ಚಿತ್ರರಂಗದಲ್ಲಿಯೂ ನಟಿಯರನ್ನು ಮಾನಸಿಕವಾಗಿ ಹಿಂಸಿಸುವ ಈ ದಂಧೆ ಇದ್ದೇ ಇದೆ. ತಮಿಳುನಾಡಲ್ಲಿ ಕೆಲ ನಿರ್ದೇಶಕರು ಮತ್ತು ನಿರ್ಮಾಪಕರು ಹೆಣ್ಣುಗಳನ್ನು ಮಂಚಕ್ಕೆ ಕೆಡವಿಕೊಳ್ಳಲೆಂದೇ ಚಿತ್ರ ಮಾಡಿದವರಂತೆ ವರ್ತಿಸುಇತ್ತಾರೆ. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲಿಯೂ ಇದೇ ಹಾವಳಿ. ಇದರಿಂದಾಗಿಯೇ ನಟಿಯರು ಆಗಾಗ ತಮಿಳುನಾಡಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾರೆ. ಆದರೆ ತಮ್ಮ ಚಿತ್ರರಂಗದ ಮರ್ಯಾದೆ ಹೋಗುತ್ತದೆ ಎಂಬ ಂತಿeಷ್ಠೆಗೆ ಬಿದ್ದು ಎಲ್ಲರೂ ಸೇರಿ ಇಂಥಾ ಪ್ರಕರಣಗಳನ್ನು ಮುಚ್ಚಿ ಹಾಕುತ್ತಾರೆ. ಇಂಥಾದ್ದರಿಂದ ಮಾನಸಿಕ ಹಿಂಸೆಗಳನ್ನೆಲ್ಲ ಅದೆಷ್ಟೋ ನಟಿಯರು ಅವುಡುಗಚ್ಚಿ ಸಹಿಸಿಕೊಂಡಿದ್ದಾರೆ. ಆದರೆ ತೆಲುಗಿನಲ್ಲಿ ಶ್ರೀ ರೆಡ್ಡಿ ಂತಿeಭಟನೆಯ ಹಾದಿ ಹಿಡಿದಿದ್ದಾಳೆ. ಈಕೆಯ ಸ್ಫೂರ್ತಿಯಿಂದ ಎಲ್ಲ ಭಾಷೆಗಳ ನಟಿಯರೂ ಕಾಸ್ಟ್ ಕೌಚಿಂಗ್ ವಿರುದ್ಧ ಸಮರ ಸಾರಿದರೆ ಈ ಕಾಯಿಲೆಯನ್ನು ಕೊಂಚ ಮಟ್ಟಿಗಾದರೂ ವಾಸಿ ಮಾಡಲಾದೀತು!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top