ಅರೋಗ್ಯ

ಅಪೆಂಡಿಕ್ಸ್ ಅನ್ನೋ ಮಹಾ ಮಾರಿ ಬರ್ದೇ ಇರೋ ಹಾಗೆ ತಡೆಯೋ 8 ಪವರ್ ಫುಲ್ ಮನೆಮದ್ದುಗಳು..

ಅಪೆಂಡಿಕ್ಸ್ ಅನ್ನೋ ಮಹಾ ಮಾರಿ ಬರ್ದೇ ಇರೋ ಹಾಗೆ ತಡೆಯೋ 8 ಪವರ್ ಫುಲ್ ಮನೆಮದ್ದುಗಳು..

ಅಪೆಂಡಿಕ್ಸ್ ಎಂಬುದು ದೊಡ್ಡ ಕರುಳಿನ ಭಾಗದಲ್ಲಿ ಹೊರಗೆ ಹಬ್ಬಿರುವ ಬೆರಳಿನ ರೀತಿಯ ಒಂದು ಸಣ್ಣ ಚೀಲದಂತಹ ಭಾಗ ,ಇದು ಕಿಬ್ಬೊಟ್ಟೆಯ ಬಲಭಾಗದ ಕೆಳಗೆ ಇರುತ್ತದೆ, ಅಪೆಂಡಿಕ್ಸ್ ನಲ್ಲಿ ಹುಟ್ಟುವ ಲೋಳೆ ಪದಾರ್ಥ ಕರುಳನ್ನು ಖಾಲಿ ಮಾಡಿ ಅಪೆಂಡಿಸೀಲ್ ಗೋಡೆಯ ಪದರದ ಅಡ್ಡಿಯಿಂದ ಅಪೆಂಡಿಕ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಈ ಪ್ರಕ್ರಿಯಲ್ಲಿ ಉಳಿದುಕೊಳ್ಳುವ ಘನ ವಸ್ತುವು ಬ್ಯಾಕ್ಟೀರಿಯಾ ಅಪಾಯವನ್ನು ಹೆಚ್ಚಿಸಿ ಅಪೆಂಡಿಕ್ಸ್ ಸೋಂಕು ಬರುವ ಹಾಗೆ ಮಾಡುತ್ತದೆ, ಊದಿ ಕೊಳ್ಳಲು ಶುರುಮಾಡುತ್ತದೆ, ಅಪೆಂಡಿಸೀಲ್ ಸುತ್ತಲೂ ಕೀವುಗಟ್ಟಿ ಮುದ್ದೆಯ ರೀತಿ ಉಂಟಾಗುತ್ತದೆ.

ಅಪೆಂಡಿಸೈಟಿಸ್­ನ ಮುಖ್ಯ ಲಕ್ಷಣಗಳೇನು ?

ಜ್ವರ , ಸುಸ್ತು ,ತಲೆ ಸುತ್ತು ,ವಾಂತಿ ,ವಾಕರಿಕೆ , ಹಸಿವಾಗದೆ ಇರುವುದು ,ಕಿಬ್ಬೊಟ್ಟೆ ನೋವು ,ಊತ ಮತ್ತು ಮಲಬದ್ಧತೆ

ಅಪೆಂಡಿಸೈಟಿಸ್­ ಬರದೇ ಇರೋ ಹಾಗೆ ತಡೆಯೋದು ಹೇಗೆ ?

ಹೆಸರುಕಾಳು

ಅಪೆಂಡಿಸೈಟಿಸ್ ತಡೆಯೋಕೇ ಅತ್ಯುತ್ತಮ ಮನೆಮದ್ದು ಹೆಸರುಕಾಳು ,ಹೆಸರುಕಾಳು ಮೊಳಕೆ ಕಟ್ಟಿಸಿ ಅಥವಾ ನೀರಿನಲ್ಲಿ ನೆನೆಹಾಕಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಎರಡು ಚಮಚ ಸೇವನೆ ಮಾಡಿ .

ನಿಂಬೆ ರಸ

ನಿಂಬೆ ರಸವನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಕುಡಿದರೆ ಒಳ್ಳೆಯದು ಇದು ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತೆ , ಅಷ್ಟೇ ಅಲ್ಲದೆ ಉರಿಊತದ ಸಮಸ್ಯೆ ತಡೆಯುತ್ತೆ .

ನೀರು ಹೆಚ್ಚಾಗಿ ಸೇವಿಸಿ

ಉಗುರು ಬೆಚ್ಚಗಿನ ನೀರು ಶರೀರದ ಕಷ್ಮಲಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ ಇದರಿಂದ ಕರುಳಿನ ವಿಷ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಎರಡು ಮೂರು ಎಸಳನ್ನು ದಿನವೂ ತಿನ್ನುತ್ತಾ ಬಂದರೆ ದೇಹದ ಉರಿಯೂತದ ಶಮನವಾಗುತ್ತದೆ , ಅಷ್ಟೇ ಅಲ್ಲದೆ ಬ್ಯಾಕ್ಟೀರಿಯಾ ಹಾಗು ವೈರಸ್ ಬರದಂತೆ ತಡೆಯುತ್ತದೆ.

ಮಜ್ಜಿಗೆ

ದಿನಕ್ಕೆ ಒಂದೆರಡು ಲೋಟ ಮಜ್ಜಿಗೆಗೆ ಸ್ವಲ್ಪ ಕೊತ್ತಂಬ್ಬರಿ ಸೊಪ್ಪು ಮತ್ತು ಉಪ್ಪನ್ನು ಬೆರೆಸಿ ತಿಂದರೆ ತುಂಬಾ ಒಳ್ಳೆಯದು ಇದು ನಿಮ್ಮ ಕರುಳಿನಲ್ಲಿ ಬೆಳೆಯುವ ಸೋಂಕನ್ನು ತಡೆಯುತ್ತದೆ ,

ಮೆಂತ್ಯ

ಮೆಂತ್ಯವನ್ನು ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಕುಡಿದರೆ ಅಪೆಂಡಿಕ್ಸ್ ಬಿಡುಗಡೆ ಮಾಡುವ ಲೋಳೆಯಂತ ವಸ್ತುವು ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಅಪೆಂಡಿಕ್ಸ್ ಗೋಡೆಯ ಮೇಲೆ ಉಂಟಾಗುವ ಸೋಂಕನ್ನು ತಡೆಯುತ್ತದೆ.

ನಾರಿನ ಪದಾರ್ಥ ಸೇವನೆ ಮಾಡಿ

ಹೆಚ್ಚು ನಾರಿನಂಶ ಇರುವ ಹಣ್ಣು ತರಕಾರಿಗಳನ್ನು ಸೇವನೆ ಮಾಡಿ ಇದು ಮಲಬದ್ದತೆಯಂತ ಸಮಸ್ಯೆಗಳನ್ನು ದೂರ ಇಡುತ್ತದೆ

ಹರಳೆಣ್ಣೆ

ಅಪೆಂಡಿಕ್ಸ್‌‌ ನಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ತಡೆಯಲು ಕೆಳ ಹೊಟ್ಟೆಯ ಮಸಾಜ್ ಮಾಡಿ , ಬೇಕಾದರೆ ಸ್ವಲ್ಪ ಅರಿಶಿನ ಅಥವಾ ಪಚ್ಚ ಕರ್ಪೂರ ಸೇರಿಸಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top