ರಾಜಕೀಯ

12 ಜನ ಹಾಲಿ ಶಾಸಕರಿಗೆ ತಪ್ಪಿತು ಕಾಂಗ್ರೆಸ್ ಟಿಕೆಟ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿನ್ನೆ ರಾತ್ರಿ ಅಳೆದು ತೂಗಿ ಕೊನೆಗೂ ಕಾಂಗ್ರೆಸ್ ಕೊನೆಗೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ. ನಿನ್ನೆ ಬಿಡುಗಡೆ ಆದ ಪಟ್ಟಿಯಲ್ಲಿ 224 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕಡೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಸರು ಬಿಡುಗಡೆ ಆಗಿದೆ. ಆದ್ರೆ ಕೆಲೆವೆಡೆ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿದೆ ಎನ್ನಲಾಗಿದೆ.

 

 

ಕೆಲ ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್:
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬ್ಯಾಡಗಿಯಿಂದ ಶಾಸಕ ಬಸವರಾಜ್ ಶಿವಣ್ಣ ಅವರನ್ನು ಕೈ ಬಿಟ್ಟಿದ್ದಾರೆ, ಎಸ್‍ಆರ್ ಪಾಟೀಲ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನ ಮಾಡಲಾಗಿದೆ.

 

 

ಹಾನಗಲ್ ಕ್ಷೇತ್ರದಿಂದ ಹಾಲಿ ಶಾಸಕ ಮನೋಹರ್ ತಹಶೀಲ್ದಾರ್ ಬದಲು ಶ್ರೀನಿವಾಸ್ ಮಾನೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಇನ್ನು ಮಾಯಕೊಂಡ ವಿಧಾನಸಭಾ ಮತಕ್ಷೇತ್ರದಿಂದ ಶಿವಮೂರ್ತಿ ನಾಯಕ್ ಬದಲು ಬಸವರಾಜು, ತರೀಕೆರೆ ಕ್ಷೇತ್ರದಿಂದ ಶ್ರೀನಿವಾಸ್ ಬದಲು ಎಸ್ ಎಂ ನಾಗರಾಜ್, ತಿಪಟೂರು ಕ್ಷೇತ್ರದಿಂದ ಷಡಕ್ಷರಿ ಬದಲು ನಂಜಮರಿ, ಜಗಳೂರು ಕ್ಷೇತ್ರದಿಂದ ರಾಜೇಶ್ ಅವರ ಬದಲು ಎ ಎಲ್ ಪುಷ್ಪಾ, ಬಾದಾಮಿ ಕ್ಷೇತ್ರದಿಂದ ಚಿಮ್ಮನಕಟ್ಟಿ ಬದಲು ದೇವರಾಜ್ ಪಾಟೀಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

 

 

ಕಲಬುರಗಿ ಗ್ರಾಮೀಣ ಭಾಗದಲ್ಲಿ ಹಾಲಿ ಶಾಸಕರಾಗಿರುವ ರಾಮಕೃಷ್ಣ ರವರ ಬದಲಾಗಿ ವಿಜಯ್‍ಕುಮಾರ್, ವಿಜಯಪುರದಿಂದ ಮಕ್ಬುಲ್ ಬಾಗವಾನ್ ಬದಲಾಗಿ ಹಮೀದ್ ಮುಶ್ರಿಫ್, ಬಳ್ಳಾರಿಯಲ್ಲಿ ಎನ್‍ವೈ ಗೋಪಾಲಕೃಷ್ಣ ಬದಲಾಗಿ ನಾಗೇಂದ್ರ, ಕೊಳ್ಳೇಗಾಲ ಮತಕ್ಷೇತ್ರದಿಂದ ಜಯಣ್ಣ ಹಾಲಿ ಶಾಸಕ ರವರ ಬದಲಿಗೆ ಎ.ಆರ್.ಕೃಷ್ಣಮೂರ್ತಿ ಹಾಗೂ ಸಿರಗುಪ್ಪದಿಂದ ನಾಗರಾಜ್ ಬದಲು ಮುರಳಿಕೃಷ್ಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top