ವಿಶೇಷ

ಪ್ರತಿ ಸಣ್ಣ ವಿಷಯಕ್ಕೂ ಜೀವನ ಸರಿ ಇಲ್ಲ ಅಂತ ಗೊಣಗಾಡೋರು ಈ 7 ವಿಷಯಗಳು ನಿಮ್ಮ ಮನಸ್ಸಿಗೆ ಹಾಕೊಂಡ್ರೆ ಖುಷಿಯಾಗಿ ಇರ್ತೀರಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬದುಕಿನಲ್ಲಿ ಈ ಕೆಲವು ಮುಖ್ಯವಾದ  ಸಂಗತಿಗಳನ್ನು ಎಂದಿಗೂ ಸಹ ಮನುಷ್ಯರಾದ ನಾವು ಮರೆಯಬಾರದು.ಯಾಕೆ ? ಎಂದರೆ ಇದನ್ನು ಒಮ್ಮೆ ಓದಿ ನಿಮಗೆ ಆರ್ಥವಾಗುತ್ತದೆ.

 

 

 

1. ಇನ್ನೊಬ್ಬರೊಡನೆ ಸುಮ್ಮನೆ ನಾವು ವಿನಾಕಾರಣ ಜಗಳ ಮಾಡಲು ಹೋಗಬಾರದು. ಯಾಕೆಂದರೆ ಇನ್ನೆಲ್ಲೋ ಒಬ್ಬ ಮನುಷ್ಯನಿಗೆ ಮಾತನಾಡಲು ಸಹ ಬರುವುದಿಲ್ಲ .

 

2. ನೀವು ತಿನ್ನುವ ಆಹಾರ ರುಚಿಯಾಗಿಲ್ಲ . ಉಪ್ಪು ಕಡಿಮೆಯಿದೆ, ಕಾರ ಜಾಸ್ತಿಯಿದೆ ಎಂದು ದೂರಬೇಡಿ. ಯಾಕೆಂದರೆ ಕೆಲವರಿಗೆ ಒಂದು ಹೊತ್ತಿನ ಊಟವೂ ಸಹ ತಿನ್ನಲು ಸಿಗುವುದಿಲ್ಲ .

 

 

3. ನಿಮ್ಮ ಜೀವನ ಸಂಗಾತಿಯ ಬಗ್ಗೆ ಎಂದಿಗೂ ಸಹ ಸಹನೆಯನ್ನು ಕಳೆದುಕೊಳ್ಳಬೇಡಿ. ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿ ಇರುತ್ತಾನೆ. ಅಂಥವರನ್ನು ನೋಡಿ ನೀವು ಒಮ್ಮೆ ಯೋಚಿಸಿ. ಅವರನ್ನು ನೋಡಿದರೆ ನೀವೇ ಅದೃಷ್ಟವಂತರು ಎಂದು ನಿಮ್ಮನ್ನು ನೀವೇ ಸಮಾಧಾನ ಮಾಡಿಕೊಳ್ಳಬೇಕು.

 

 

4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ, ಯಾಕೆಂದರೆ ಈ ಭೂಮಿಯ ಮೇಲೆ ಅನೇಕ ಜನರಿದ್ದಾರೆ. ಅವರಿಗೆ ನೆಲೆಸಲು ಒಂದು ಮನೆ ಕೂಡ ಇರುವುದಿಲ್ಲ. ಅಂಥವರನ್ನು ನೋಡಿ ನೀವು ಸಮಾಧಾನ ಪಟ್ಟುಕೊಳ್ಳಿ.

 

 

5. ನಿಮ್ಮ ಮಕ್ಕಳ ಮೇಲೆ ಎಂದಿಗೂ ಸಹ ಕೋಪ ಮಾಡಿಕೊಳ್ಳಬೇಡಿ ತಾಳ್ಮೆ ಇರಲಿ ಯಾಕೆಂದರೆ ಅದೆಷ್ಟೋ ದಂಪತಿಗಳಿಗೆ ಈ ಜಗತ್ತಿನಲ್ಲಿ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ .

 

6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ. ಯಾಕೆಂದರೆ ಈ ಭೂಮಿಯ ಮೇಲೆ ಅದೆಷ್ಟೋ ಜನ ಯುವಕರಿದ್ದಾರೆ ಅವರು ಪದವಿಯನ್ನು ಗಳಿಸಿದರೂ ಸಹ ಅವರಿಗೆ ಎಷ್ಟೇ ಓದಿದರೂ ಸಹ ಅವರಿಗೆ ಮಾಡಲು ಕೆಲಸವೇ ಸಿಕ್ಕಿರುವುದಿಲ್ಲ. ಮನೆಯಲ್ಲೇ ಕುಳಿತಿರುತ್ತಾರೆ ಹುಡುಕಿ ಬೇಸತ್ತು ಹೋಗಿರುತ್ತಾರೆ. ಅಂಥವರನ್ನು ನೋಡಿ ನಿಮಗೆ ಕೆಲಸವಿದೆ ಎಂದು ಸಮಾಧಾನ ಪಟ್ಟುಕೊಳ್ಳಿ .

 

 

7. ನಿಮ್ಮ ಜೀವನವನ್ನು ಎಂದಿಗೂ ಕೂಡ ಶಪಿಸುತ್ತಾ ಇರಬೇಡಿ. ಯಾಕೆಂದರೆ ಆದೇಷ್ಟೋ  ಮಂದಿಗೆ ಯೌವನದಲ್ಲೇ ಹಾಸಿಗೆ ಹಿಡಿದು ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಮತ್ತು ರಸ್ತೆ ಅಪಘಾತಗಳಿಂದ ಅವರ ದೇಹದ ಅಂಗಾಂಗಗಳನ್ನು ಕಳೆದುಕೊಂಡು  ಶಕ್ತಿ ಹೀನರಾಗಿ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಸಹ ಆಗದೆ, ಈ ಭೂಮಿಯ ಮೇಲೆ ಜೀವಿಸುತ್ತಿರುತ್ತಾರೆ. ಅಂಥವರನ್ನು ನೋಡಿ ನೀವು ಒಮ್ಮೆ ಯೋಚಿಸಬೇಕು.

 

 

ಜೀವನವೆಂಬುದು ಒಂದು ಸುಂದರವಾದ ಉಡುಗೊರೆ .ಅದರಲ್ಲೂ ಈ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿರುವುದೇ ಒಂದು ಭಾಗ್ಯ ಅಥವಾ ಪುಣ್ಯವೇ ಸರಿ. ಅಂತಹ ಮನುಷ್ಯ ಜೀವನದಲ್ಲಿ ಹುಟ್ಟಿ ನಿಮ್ಮ ಜೀವನವನ್ನು ವ್ಯರ್ಥ ಆಲಾಪಗಳಲ್ಲಿ ಅದನ್ನು ಹಾಳು ಮಾಡಿಕೊಳ್ಳಬೇಡಿ .ಬದುಕಿನಲ್ಲಿ ಏನೂ ಸರಿ ಇಲ್ಲ ಎನ್ನುತ್ತಿದ್ದರೆ ಒಮ್ಮೆ ಯೋಚಿಸಿ ನೀವಿನ್ನು  ಬದುಕಿದ್ದೀರಿ ನಿಮಗಿಷ್ಟವಾದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗೆ ಇದೆ.

ಪ್ರತಿಯೊಂದು ನಿಮಿಷವೂ, ಪ್ರತಿಯೊಂದು ಗಳಿಗೆಯೂ ಸಹ ಈ ಭೂಮಿಯ ಮೇಲೆ ನಿಮ್ಮ ಜೀವನದಲ್ಲಿ ಅತ್ಯಮೂಲ್ಯವಾದದ್ದು. ಒಂದು ಬಾರಿ ಕಳೆದು ಹೋದ ಸಮಯ ಮತ್ತೆ ಹಿಂತಿರುಗಿ ಬರುವುದಿಲ್ಲ . ಆದ್ದರಿಂದ ನಿಮ್ಮ ಈ ಅತ್ಯಮೂಲ್ಯವಾದ ಸಮಯ ಮತ್ತು ಜೀವನವನ್ನು ಉತ್ತಮವಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಜೀವನದಲ್ಲಿ ಏನನ್ನಾದರೂ ಸಾಧಿಸಿ.

ಸುಮ್ಮನೆ ಚಿಂತೆ ಮಾಡುತ್ತಾ ಕುಳಿತು ಕೊಳ್ಳಬೇಡಿ. ನಿಮ್ಮ ಜೀವನವನ್ನು ಸ್ವತಃ ನೀವೇ ಹಾಳು ಮಾಡಿಕೊಳ್ಳಬೇಡಿ. ಚಿಂತೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಮಯ ಹಾಳಾಗುವುದಷ್ಟೇ ಅಲ್ಲದೆ,  ನೆಮ್ಮದಿಯೂ ಸಹ ಹಾಳಾಗುತ್ತದೆ. ಅದರಿಂದ ಆಚೆ ಬನ್ನಿ, ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top