ಸಮಾಚಾರ

ಚಪ್ಪಲಿ ಏಟು ವಿವಾದ: ವಿಷಾದ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್!

ಉನ್ನಾವ್ ದಲ್ಲಿನ ಪುಟ್ಟ ಕಂದಮ್ಮನ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಡೆಸಿದ್ದ “ಅವನು ಯೋಗಿ ಆದಿತ್ಯಾನಾಥ್ ಅಲ್ಲ, ಡೋಂಗಿ ಆದಿತ್ಯಾನಾಥ್, ಅವರು ಮತ್ತೆ ಏನಾದ್ರೂ ಮತ್ತೆ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ” ಎಂಬ ಭಾವೋದ್ವೇಗದ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

 

 

ಪುಟ್ಟ ಕಂದಮ್ಮಳ ಅತ್ಯಾಚಾರ ಆರೋಪಿಗಳ ಪರವಾಗಿ ಯೋಗಿ ಸರ್ಕಾರ ಆರೋಪಿಗಳ ರಕ್ಷಣೆಗೆ ನಿಂತಿರೊದ್ರಿಂದ ಅವರ ವಿರುದ್ಧ ಮಾತನಾಡುವಾಗ ಆವೇಶದಿಂದ ಈ ಮಾತುಗಳು ಬಂದಿವೆ. ನನ್ನ ಮಾತುಗಳಲ್ಲಿ ಪ್ರಮಾದವಾಗಿದ್ದರೆ ವಿಷಾದಿಸುತ್ತೇನೆ. ಆದರೆ ಉತ್ತರ ಪ್ರದೇಶದಲ್ಲಿ ಕಾನೂನು ದುರ್ಬಳಕೆಯಾಗ್ತಿರೋದು ನಿಜಕ್ಕೂ ಗಂಭೀರ ವಿಚಾರ ಎಂದು ದಿನೇಶ್ ಗುಂಡೂರಾವ್ ಟ್ವೀಟ್‌ ಮಾಡಿದ್ದಾರೆ.

 

 

ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಶನಿವಾರ ಮೋಂಬತ್ತಿ ಬೆಳಗಿಸಿ ಪ್ರತಿಭಟನೆ ಉದ್ದೇಶಿಸಿ ದಿನೇಶ್ ಗುಂಡೂರಾವ್ ಮಾತನಾಡಿದರು. ಈ ವೇಳೆ ತಮ್ಮ ಭಾಷಣದುದ್ದಕ್ಕೂ ಸಿಎಂ ಆದಿತ್ಯನಾಥ್ ರನ್ನು ಏಕವಚನದಲ್ಲೇ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್ ” ಅವನು ಯೋಗಿ ಆದಿತ್ಯನಾಥ್ ಅಲ್ಲ, ಬೋಗಿ ಆದಿತ್ಯನಾಥ್, ಡೋಂಗಿ ಆದಿತ್ಯನಾಥ್, ಕಳ್ಳ ಸನ್ಯಾಸಿ.. ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾನೆ. ಅಂಥ ಕೆಟ್ಟ ವ್ಯಕ್ತಿ ಕರ್ನಾಟಕಕ್ಕೆ ಬಂದರೆ ನಮ್ಮ ನೆಲದ ಪವಿತ್ರಕ್ಕೆ ಕಳಂಕವಾಗುತ್ತದೆ.

 

 

ಆತ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವನು‌ ನಾಲಾಯಕ್. ಪ್ರಧಾನಿ ನರೇಂದ್ರ ‌ಮೋದಿ ತಕ್ಷಣ ಅವನನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಬಿಸಾಕಬೇಕು’ ಎಂದೂ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ‘ತನ್ನ ಪಕ್ಷದ ಶಾಶಕ ಅತ್ಯಾಚಾರ ಮಾಡಿದರೂ ಉತ್ತರ ಪ್ರದೇಶ ಅವನಿಗೆ ಯೋಗಿ ರಕ್ಷಣೆ ನೀಡಿದ್ದಾನೆ., ಆ ಶಾಸಕನ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ತಂದೆಯನ್ನು ಜೈಲಿಗೆ ಹಾಕಿಸಿದ್ದಾನೆ. ಆದರೆ ನ್ಯಾಯಾಲಯ ಹೇಳಿದ ಮೇಲೆ ಸಿಬಿಐ ಶಾಸಕನನ್ನು ಬಂಧಿಸಲಾಗಿದೆ.’ ಎಂದು ವಾಗ್ದಾಳಿ ನಡೆಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top