ತಿಂಡಿ ತೀರ್ಥ

ರುಚಿ ರುಚಿಯಾದ ಬಾಯಿಯಲ್ಲಿ ನೀರು ಬರುವಂತೆ ಮಾಡುವ ಮಟನ್ ಘೀ ರೋಸ್ಟ್ ಹೇಗೆ ಮಾಡಬೇಕು ಎಂದು ನೋಡಿ ,ಮಾಡಿ ತಿಂದು ಆಸ್ವಾದಿಸಿ

ಬೇಕಾಗುವ ಪದಾರ್ಥಗಳು

ತುಪ್ಪ – 3 ಚಮಚ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿಣ – ಅರ್ಧ ಚಮಚ
ಮಟನ್ – 1 ಕೆಜಿ
ಉಪ್ಪು – ರುಚಿಗೆ ತಕ್ಕಷ್ಟು
ಕಾಶ್ಮೀರಿ ಮೆಣಸಿನ ಕಾಯಿ – 4-5
ದನಿಯಾ – 1 ಚಮಚ
ಮೆಣಸು – 1 ಚಮಚ
ಸೋಂಪು – 1 ಚಮಚ
ಜೀರಿಗೆ – 2 ಚಮಚ
ಚಕ್ಕೆ – 1
ಲವಂಗ – 4
ಕೆಂಪು ಮೆಣಸಿನ ಕಾಯಿ – 6

 

 

ಮಾಡುವ ವಿಧಾನ…

ಮೊದಲು ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ತುಪ್ಪ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಉಪ್ಪು, ಮಟನ್ ಹಾಕಿ, ನೀರು ಹಾಕಿ 4-5 ಕೂಗು ಕೂಗಿಸಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಕಾಶ್ಮೀರಿ ಮೆಣಸಿಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

 

ನಂತರ ದನಿಯಾ, ಮೆಣಸು, ಸೋಂಪು, ಜೀರಿಗೆ, ಚಕ್ಕೆ, ಲವಂಗ, ಕೆಂಪು ಮೆಣಸಿನ ಕಾಯಿಯನ್ನು ಹುರಿದುಕೊಳ್ಳಬೇಕು.

 

ಮಿಕ್ಸಿ ಜಾರ್ ತೆಗೆದುಕೊಂಡು ಹುರಿದುಕೊಂಡ ಎಲ್ಲಾ ಸಾಮಾಗ್ರಿಗಳನ್ನು, ಬೆಳ್ಳುಳ್ಳಿ ದೊಡ್ಡ 2 ಎಸಳು, ಶುಂಠಿ ಚಿಕ್ಕದು, ನಿಂಬೆಹಣ್ಣಿನ ರಸ ಹಾಗೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಪ್ರೆಷರ್ ಕುಕ್ಕರ್ ಮುಚ್ಚಳ ತೆಗೆದು ಬೆಂದಿರುವ ಮಟನ್ ನಲ್ಲಿ ಉಳಿದ ನೀರನ್ನು ತೆಗೆದು ಪಾತ್ರೆಯೊಂದಕ್ಕೆ ಹಾಕಿಟ್ಟುಕೊಳ್ಳಬೇಕು.

 

ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ ರುಬ್ಬಿಕೊಂಡ ಮಿಶ್ರಣ, ಅರ್ಧ ಬಟ್ಟಲು ಮೊಸರು, ಮಟನ್ ನಿಂದ ತೆಗೆದ ನೀರು, ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಬೇಕು. ನಂತರ ಬೆಂದ ಮಟನ್ ಹಾಕಿ 5-10 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಘೀ ರೋಸ್ಟ್ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top