ಉಪ್ಪಯುತ್ತ ಮಾಹಿತಿ

ವಿಪರೀತವಾಗಿ ಸುಳ್ಳು ಹೇಳೋರ್ನ ಕಂಡು ಹಿಡಿಯೋಕೆ ಈ 6 ಮಾರ್ಗ ಸಾಕು

ಸುಳ್ಳುಗಾರರನ್ನು ಕಂಡು ಹಿಡಿಯಲು ಇರುವ 6 ಅತ್ಯುತ್ತಮ ಮಾರ್ಗಗಳು

 

ಯಾರಾದರೂ ನಿಮಗೆ ಸುಳ್ಳು ಹೇಳುತ್ತಿರುವುದನ್ನು ಕಂಡು ಹಿಡಿಯುವುದು ತುಂಬಾ ಕಷ್ಟದ ಸಂಗತಿ . ಹೆಚ್ಚಿನ ಸಂದರ್ಭಗಳಲ್ಲಿ, ನೀವು ಇನ್ನೊಬ್ಬರ ಪ್ರಾಮಾಣಿಕತೆಯನ್ನು ಅನುಮಾನಿಸಿದಾಗ, ಸಾವಿರಾರು ಯೋಚನೆಗಳು ನಮ್ಮ ಮನಸ್ಸಿನಲ್ಲಿ ನಡೆಯುತೀರುತ್ತವೆ.
ಅದೃಷ್ಟವಶಾತ್, ನಾವು ಸುಳ್ಳನ್ನು, ಸುಳ್ಳುಗಾರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವಾಗ ಅನೇಕ ಚಿಹ್ನೆಗಳು ಕಂಡುಬರುತ್ತವೆ .

 

ಅತ್ಯಂತ ಅನುಭವಿ ಮತ್ತು ಕುತಂತ್ರದ ಸುಳ್ಳುಗಾರರನ್ನು ಸಹ ಬಹಿರಂಗಪಡಿಸುವ ಹತ್ತು ಅಂಶಗಳು ಇಲ್ಲಿವೆ.

 

1.ದೇಹ ಭಾಷೆ:

 

ಯಾರಾದರೂ ನಿಮಗೆ ಸುಳ್ಳು ಹೇಳುತಿದ್ದರೆ ಎಂಬ ಅನುಮಾನವಿದ್ದರೆ, ಸುಳ್ಳುಗಾರರು ತಮ್ಮ ಕೈಗಳನ್ನು ಮರೆಮಾಡುತ್ತಾರೆ (ತಮ್ಮ ಕೈಗಳನ್ನು ಒಟ್ಟಿಗೆ ಹಿಡಿದುಕೊಂಡಿರುತ್ತಾರೆ, ಕೈಗಳನ್ನು ತಮ್ಮ ಜೇಬಲ್ಲಿ ಇಟ್ಟಿಕೊಂಡಿರುತ್ತಾರೆ ಮತ್ತು ಸುಳ್ಳನ್ನು ಹೇಳಿದಾಗ ನೇರವಾಗಿ ಕುಳಿತುಕೊಳ್ಳಲು ಕಷ್ಟ ಪಡುತ್ತಾರೆ ಮತ್ತು ಹೆಚ್ಚಾಗಿ ತಮ್ಮ ಪಾದ ಭಯ ದಿಂದ ನಡುಗುತಿರುತ್ತದೆ . ನೀವು ಪ್ರಶ್ನೆಗಳನ್ನು ಕೇಳುತ್ತಿರುವಾಗ ಅವರ ತುಟಿ ಒಣಗುತಿರುತ್ತದೆ, ಈ ಎಲ್ಲ ನಿಮಗೆ ಸತ್ಯವನ್ನು ಹೇಳುತ್ತಿಲ್ಲವೆಂದು ಸೂಚಿಸುತ್ತದೆ.

 

2. ಉಸಿರಾಡುವಿಕೆ.

 

ಯಾರಾದರೂ ಸುಳ್ಳುಹೇಳುವಾಗ, ಅವರು ಹೆಚ್ಚು ಉಸಿರಾಡುತ್ತಾರೆ ಮತ್ತು ಅವರ ಧ್ವನಿಯು ಕಡಿಮೆ ಆಗಿರುತ್ತದೆ , ಏಕೆಂದರೆ ಅವರ
ಹೃದಯ ಜೋರಾಗಿ ಬಡಿದುಕೊಳ್ಳುತಿರುತ್ತದೆ.

 

3.ವಿಪರೀತ ಬೆವರುವುದು.

ಸುಳ್ಳುಗಳನ್ನು ಹೇಳುವ ಅತ್ಯಂತ ಅನುಭವಿ ಸುಳ್ಳುಗಾರರು ಸಹ ವಿಪರೀತ ಬೆವರುತ್ತಾರೆ . ಮತ್ತು ನಾವು ಸುಳ್ಳು ಹೇಳುವಾಗ,, ಬೆವರು ನೈಸರ್ಗಿಕ ಒತ್ತಡ ಪ್ರತಿಕ್ರಿಯೆಯಾಗಿದೆ. ಆದ್ದರಿಂದ ಸುಳ್ಳನ್ನು ಪತ್ತೆಹಚ್ಚಲು ಇದು ಬಹಳ ಸುಲಭ .

 

4.ಕಣ್ಣನ್ನು ನೋಡಿ:

ಸುಳ್ಳುಗಾರನು ನಿಮ್ಮನ್ನು ನೋಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ, ನೀವು ಕಣ್ಣಿನ ಸಂಪರ್ಕವನ್ನು ಮಾಡಿದರು ಸಹ ಸುಳ್ಳುಗಾರನು ಕಣ್ಣಿನ ಸಂಪರ್ಕವನ್ನು ಮಾಡುವುದಿಲ್ಲ.

 

5. ವೇಗವಾದ ದ್ವನಿ:

ಯಾರಾದರೂ ಸುಳ್ಳುಹೇಳುವಾಗ ಅವರು ಹೇಳುವುದನ್ನು ಸ್ವಷ್ಟತೆ ಇಲ್ಲದೆ ವೇಗವಾದ ದ್ವನಿಯಲ್ಲಿ ಮಾತನಾಡುತ್ತಾರೆ .

 

6.ವಿಷಯ ಬದಲಾಯಿಸುತ್ತಾರೆ:

ಸುಳ್ಳನ್ನು ಹೇಳುವಲ್ಲಿ ಪ್ರತಿಯೊಬ್ಬರೂ ದುರ್ಬಲ ಮತ್ತು ಅನಾನುಕೂಲತೆಯನ್ನು ಅನುಭವಿಸುತ್ತಾರೆ. ಒಬ್ಬ ವ್ಯಕ್ತಿಯು ಅನುಭವಿ ಸುಳ್ಳುಗಾರನಾಗಿದ್ದರೂ, ಅವರು ಒಳಗೆ ಭಯ ಪಡುತ್ತಿರುತ್ತಾರೆ. ವಿಷಯವನ್ನು ಬದಲಿಸಲು ಪ್ರಯತ್ನಿಸುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top