ಅರೋಗ್ಯ

ಎಕ್ಕದ ಗಿಡ ಬರಿ ಪೂಜೆಗಷ್ಟೇ ಅಲ್ಲ, ಅದು ಈ ರೋಗಗಳನ್ನೂ ಬೇಗ ವಾಸಿಮಾಡುತ್ತದೆ!!

ಎಕ್ಕದ ಗಿಡ ಬರಿ ಪೂಜೆಗಷ್ಟೇ ಅಲ್ಲ, ಅದು ಈ ರೋಗಗಳನ್ನೂ ಬೇಗ

ವಾಸಿಮಾಡುತ್ತದೆ!!

 

 

ಎಕ್ಕವನ್ನು ಅರ್ಕವೆಂದೇ ಕರೆಯುವುದು, ನಮ್ಮಗಳ ಆಡುಭಾಷೆಯಲ್ಲಿ ಎಕ್ಕ ಎಂದು ಕರೆಯುತ್ತೇವೆ.ಅರ್ಕ ಎಂದರೆ, ಪೂಜನೀಯವೆಂದರ್ಥ.ಹಿಂದೂ ಸಂಸ್ಕೃತಿ ಪ್ರಕಾರ ಕೆಲವು ಮರ ಗಿಡಗಳಿಗೆ ಪವಿತ್ರ ಸ್ಥಾನವಿದೆ.ಈ ಎಕ್ಕ ಗಿಡಕ್ಕೆ ದೇವ ವೃಕ್ಷ ಎಂಬ ಭಾವನೆ ಇರುವುದರಿಂದ ಭಾರತದಲ್ಲಿ ಇದನ್ನು ಪೂಜಿಸಲಾಗುತ್ತದೆ.ಎಕ್ಕದಲ್ಲಿ ಎರಡು ವಿಧ ಬಿಳಿ ಹಾಗೂ ಕಪ್ಪು ಎಕ್ಕ. ಬಿಳಿ ಎಕ್ಕ ಬಹಳ ಶ್ರೇಷ್ಠವೆಂದು ಪ್ರತೀತಿ. ಎಕ್ಕವನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ದೇವರ ಪೂಜೆಗೆ ಶ್ರೇಷ್ಠವಾದ ಈ ಎಕ್ಕದ ಗಿಡದ ಬೇರು, ತೊಗಟೆ, ಎಲೆ, ಹೂ ಔಷಧಿಗಳಿಗೆ ಬಳಸುತ್ತಾರೆ: ಇದರಿಂದಾಗುವ ಪ್ರಯೋಜನಗಳನ್ನ ಈ ಕೆಳಗೆ ಓದಿ ತಿಳಿದುಕೊಳ್ಳಿ.

 

 

1.ಕೀಳುನೋವಿಗೆ ರಾಮಬಾಣ:

 

ಎಕ್ಕದ ಗಿಡದ ಎಲೆಗಳನ್ನು ಕೆಂಡದ ಮೇಲೆ ತಾಗಿಸಿ ನೋವು ಇರುವ ಕಡೆ ಶಾಖ ಕೊಟ್ಟರೆ ಸ್ವಲ್ಪ ದಿನಗಳಲ್ಲಿ ಕೀಳು ನೋವು ಗುಣಮುಖವಾಗುತ್ತದೆ.

 

2.ಮೂಲವ್ಯಾದಿ ನಿವಾರಣೆ:

 

‘ಮೂಲವ್ಯಾಧಿ,’ ಯಿಂದ ಬಳಲುವವರು ಎಕ್ಕದ ಗಿಡದ ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಮೊಳಕೆಗಳಿಗೆ ಹೆಚ್ಚುವುದರಿಂದ ಬೇಗ ಗುಣವಾಗುತ್ತದೆ.

 

3.ಹಲ್ಲು ನೋವಿನ ನಿವಾರಣೆ:

 

ಎಕ್ಕದ ಗಿಡದ ಕಾಂಡವನ್ನು ಹಲ್ಲುಜ್ಜಲು ಬಳಸಿದರೆ ‘ಹಲ್ಲುನೋವು’ ಬಹುಬೇಗ ಮಾಯವಾಗುತ್ತದೆ

 

4.ಗಾಯವನ್ನು ವಾಸುಮಾಡುತ್ತೆ

 

ಚರ್ಮದ ಮೇಲೆ ಆಗಿರುವ ಸಣ್ಣ ಪುಟ್ಟ ಗಾಯಗಳಿಗೆ ಎಕ್ಕದ ಗಿಡದ ಹಾಲನ್ನು ಹಚ್ಚಿದರೆ ಗಾಯವು ಬಹುಬೇಗ ವಾಸಿಯಾಗುತ್ತದೆ.

 

5.ಕಾಲಿಗೆ ಮುಳ್ಳು ಚುಚ್ಚಿಕೊಂಡಾಗ ಎಕ್ಕದ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ- ಇದು ಜನರಲ್ಲಿ ರೂಡಿಯಲ್ಲಿದೆ.

 

6.ಚೇಳು ಕಚ್ಚಿದಾಗ:

 

ಚೇಳು ಕಚ್ಚಿದಾಗ ಔಷದಿಮಾಡಲು ಎಕ್ಕದ ಗಿಡದ ಎಲೆ ಮತ್ತು ಹಾಲನ್ನು ಬಳಸಿಕೊಳ್ಳಲಾಗುತ್ತದೆ.

 

ಎಕ್ಕದ ಗಿಡದಲ್ಲಿರುವ ಹಾಲಿನಂತಹ ದ್ರವ ಕಣ್ಣಿಗೇನಾದರು ಬಿದ್ದರೆ ಕಣ್ಣು ಹೋಗುತ್ತೆ ಎಂಬುದು ರೂಡಿಯಲ್ಲಿದೆ., ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ.ಇದರಿಂದ ನೀವು ಎಚ್ಚರವಹಿಸಬೇಕು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top