ಅರೋಗ್ಯ

ಚರ್ಮದ ಕಾಂತಿ ಹೆಚ್ಚಿಸಲು ಅತಿ ಹೆಚ್ಚು ಬಳಸುವ 5 ಸುಲಭ ಮನೆಮದ್ದುಗಳು..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚರ್ಮದ ಕಾಂತಿ ಹೆಚ್ಚಿಸಲು ಮನೆಮದ್ದುಗಳು:

 

 

ದಿನನಿತ್ಯದ ಜಂಜಾಟಗಳಲ್ಲಿ ನಮ್ಮ ಚರ್ಮದ ಬಣ್ಣ ಮಾಸಿ ಹೋಗಿರುವುದರ ಕಡೆಗೆ ಗಮನ ಹರಿಸುವುದಕ್ಕೆ ಆಗುವುದಿಲ್ಲ. ನಿಯಮಿತವಾಗಿ ಕೆಲವು ಮನೆಯಲ್ಲೇ ದೊರಕುವ ವಸ್ತುಗಳನ್ನು ಬಳಸಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಇಲ್ಲಿವೆ ಕೆಲವು ಸುಲಭೋಪಾಯಗಳು:

 

1 . ಬೆಂದ ಆಲೂಗೆಡ್ಡೆ

 

ಬೆಂದ ಆಲೂಗೆಡ್ಡೆಯ ಒಂದು ತುಂಡನ್ನುಸ್ಮ್ಯಾಶ್ ಮಾಡಿ ಚಿಟಿಕೆ ಅರಿಸಿನ  ಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ, 10 ನಿಮಿಷಗಳ ನಂತರ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.

 

2. ಅಕ್ಕಿ ಹಿಟ್ಟು , ಮೊಸರು

 

ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟು, ಒಂದು ಟೀ ಸ್ಪೂನ್ ಮೊಸರು ಚಿಟಿಕೆ ಅರಿಸಿನ ಮತ್ತು ಉಪ್ಪು ಬೆರಸಿ ಮುಖಕ್ಕೆ ಹಚ್ಚಿ (ಪ್ಯಾಕ್ ನಂತೆ ಹಾಕಿಕೊಳ್ಳುವುದು) 10 ನಿಮಿಷಗಳ ನಂತರ ಮುಖ ತೊಳೆಯುವುದು ಒಳ್ಳೆಯ ಪರಿಣಾಮ ಬೀರುತ್ತದೆ.

 

3. ಮೆಂತ್ಯೆ

 

ಒಂದು ಟೀ ಸ್ಪೂನ್ ಮೆಂತ್ಯೆ ಹಿಂದಿನ ದಿನವೇ ನೆನಸಿ ಇಡುವುದು. ಅದನ್ನು ಮರುದಿನ ಅದೇ ನೀರಿನಲ್ಲಿ ನುಣ್ಣಗೆ ಅರೆದು ಒಂದು ಹನಿ ಜೇನುತುಪ್ಪ ಮಿಶ್ರಿಸಿ ಮುಖ, ಕುತ್ತಿಗೆಗೆ ಪ್ಯಾಕ್ ಹಾಕುವುದು. 30 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೇ ಚರ್ಮದ ಸುಕ್ಕು ಕಡಿಮೆಯಾಗುವುದು.

 

4. ಪಪ್ಪಾಯ

 

ಪಪ್ಪಾಯ ಹಣ್ಣಿನ ತಿರುಳನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ, 10 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದು. ಇದು ಸ್ಕ್ರಬ್ ನ ರೀತಿ ಕೆಲಸ ಮಾಡುತ್ತದೆ. ಮುಖ ಒರೆಸಿದ ನಂತರ ನೀವು ಬಳಸುವ ಯಾವುದೇ ಕೋಲ್ಡ್ ಕ್ರೀಮ್ ಚೆನ್ನಾಗಿ ಹಚ್ಚುವುದು ಹೆಚ್ಚಿನ ಪರಿಣಾಮ ಬೀರುತ್ತದೆ.

 

5. ಕ್ಯಾರ್ರೆಟ್

 

ಬೆಂದ ಕ್ಯಾರ್ರೆಟ್ ಅರೆದು, ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ, ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.

ಈ ಮನೆಮದ್ದುಗಳನ್ನು ನಿಯಮಿತವಾಗಿ ಪಾಲನೆ ಮಾಡುವುದು ಉತ್ತಮ ಪರಿಣಾಮ ಕೊಡುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top