ಹೆಚ್ಚಿನ

ಚುನಾವಣೆ ದಿನವೇ ಆರ್.ಸಿ.ಬಿ ಪಂದ್ಯ, ಮತದಾನ ಪ್ರಮಾಣ ಇಳಿಕೆ ಸಾಧ್ಯತೆ

ಎಲ್ಲರು ಕಾತುರದಿಂದ ಎದುರು ನೋಡುತ್ತಿದ್ದ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಣೆ ಈಗ ಹೊರಬಿದ್ದಿದೆ. ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕವನ್ನು ಪ್ರಕಟಣೆ ಮಾಡಲಾಗಿದೆ. ಮೇ 12 ರಂದು ಮತದಾನ ನಡೆಯಲಿದೆ ಎಂದು ತಿಳಿದು ಬಂದಿದೆ. ಮೇ 28 ರಂದು 224 ಸದಸ್ಯರ ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯಲಿದೆ, ಅದರೊಳಗೆ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.

 

 

ಆದರೆ ಮೇ 12 ರಂದು ಮತದಾನ ನಡೆಯುವ ದಿನದಂದೇ ಐಪಿಎಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಮೇ 12 ರಂದು ಬೆಂಗಳೂರಿನಲ್ಲಿ ರಾತ್ರಿ 8 ಗಂಟೆಗೆ ಡೆಲ್ಲಿ ವಿರುದ್ಧ ಆರ್.ಸಿ.ಬಿ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಮತ್ತು ಪಂಜಾಬ್ ಹಾಗೂ ಕೋಲ್ಕತ್ತಾ ಪಂದ್ಯ ಇಂದೋರ್ ನಲ್ಲಿ ನಡೆಯಲಿದೆ. ಇದು ಮತ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

 

 

ಬೆಂಗಳೂರು ಸೇರಿದಂತೆ ನಗರವಾಸಿಗಳು ಮತದಾನ ಮಾಡುವುದು ಕಡಿಮೆ ಇನ್ನು ಅಂದೇ ಐಪಿಎಲ್ ಪಂದ್ಯ ಇಟ್ಟರೆ ಮುಗಿತು ಕೆಲವರು ಮತಗಟ್ಟೆಗೆ ಹೋಗೋದೇ ಇಲ್ಲ. ಇನ್ನು ದೂರದ ಊರಿಗೆ ಹೋಗಿ ಮತದಾನ ಮಾಡುವವರು ಅವತ್ತು ಅವರಿಗೆ ಐಪಿಎಲ್ ಪಂದ್ಯದ ಟಿಕೆಟ್ ಸಿಕ್ಕರೆ ಅವರು ಕೂಡ ಮತದಾನ ಮಾಡದೇ ಬೆಂಗಳೂರಿನಲ್ಲೇ ಉಳಿದುಕೊಂಡು ಬಿಡುತ್ತಾರೆ. ಸಾವಿರಾರು ಕರ್ನಾಟಕದ ಮತದಾರರು ಅಂದು ಮತದಾನ ಮಾಡದೇ ಇರುವ ಸಾಧ್ಯತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

 

 

ಸಾಮಾಜಿಕ ಜಾಲತಾಣದ ಚರ್ಚೆಯ ಪ್ರಕಾರ ಐಪಿಎಲ್ ಪಂದ್ಯವನ್ನು ಅಂದಿನ ಮುಂದೂಡಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top