ಅರೋಗ್ಯ

ಚಿಕ್ಕ ವಯಸ್ಸಿಗೆ ಬರೋ ಬಿಳಿ ಕೂದಲು ನಿವಾರಿಸೋಕೆ ಆಯುರ್ವೇದದ ಈ ಮದ್ದು ಬಳಸಿದ್ರೆ ಸಾಕು ..

ಇಂದಿನ ಒತ್ತಡದ ಜೀವನಶೈಲಿ, ಬದುಕಿನ ಜಂಜಾಟಗಳಲ್ಲಿ ಹರೆಯದರಲ್ಲಿಯೇ ಕೂದಲು ಬಿಳಿಯಾಗುತ್ತಿರುವುದು ಕೂಡ ಒಂದು ದೊಡ್ಡ ಸಮಸ್ಯೆ
ಅಷ್ಟೇ ಅಲ್ಲದೆ ಅನುವಂಶಿಕ ಖಾಯಿಲೆಯಾಗಿ , ರಾಸಾಯನಿಕ ಶಾಂಪೂ ಬಳಕೆ , ರಾಸಾಯನಿಕ ಕೇಶವರ್ಧಕಗಳನ್ನು ಬಳಸುವುದು , ಅಪೌಷ್ಟಿಕತೆ , ಮಾನಸಿಕ ಒತ್ತಡ ಸಹ ನೆರೆ ಕೂದಲಿಗೆ ಕಾರಣವಾಗುತ್ತದೆ .

 

 

ಆಯುರ್ವೇದದಲ್ಲಿ ಸೂಚಿಸಿರುವಂತೆ ಕೆಲವು ಬಾರಿ ಪರಿಣಾಮಕಾರಿ ಮನೆ ಮದ್ದುಗಳಿವು :

 

ಬಾಳೆ ಗಿಡದ ಮಧ್ಯಭಾಗದ ದಿಂಡನ್ನು ಕತ್ತರಿಸಿಕೊಳ್ಳಿ , ಒಂದು ಗೇಣಿನಷ್ಟು ಅಳತೆ ಇರಬೇಕು ,
ಬುಡವು ಹೆಚ್ಚು ಬಲಿತಿರುತ್ತದೆ ಮತ್ತು ಚಿಗುರು ಇನ್ನೂ ಎಳೆಯದಿರುತ್ತದೆ ಇದರಲ್ಲಿ ಬೇಕಾಗಿರುವ ಅಂಶಗಳು ಇರುವುದಿಲ್ಲ , ಆದ್ದರಿಂದ ಮಧ್ಯ ಭಾಗವನ್ನು ತೆಗೆದುಕೊಳ್ಳಬೇಕು .

 

 

ನಂತರ ಬಾಳೆ ದಿಂಡನ್ನು ಚೆನ್ನಾಗಿ ಕತ್ತರಿಸಿಕೊಂಡು ಅರ್ಧ ಲೀಟರ್ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸ ಬೇಕು .

 

ನೀರು ಬತ್ತುವ ತನಕ ಕುದಿಸಿ ನಂತರ ತಂಪು ಮಾಡಿ
ನಂತರ ಶೋಧಿಸಿ ಸ್ನಾನ ಮಾಡುವ ಹಿಂದಿನ ದಿನ ರಾತ್ರಿ ಹಚ್ಚಿ ಮಾರನೇ ದಿನ ಸ್ನಾನ ಮಾಡಬೇಕು .

 

 

Garuga pinnata , ಗರುಗದ ಸೊಪ್ಪು

 

 

ಆಲ

 

ಗರುಗದ ಸೊಪ್ಪು , ಕರಿಬೇವಿನ ಸೊಪ್ಪು ಆಲದ ಎಳೆಯ ಕೊಂಬೆ ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ,ತಂಪು ಮಾಡಿ
ನಂತರ ಶೋಧಿಸಿ ಸ್ನಾನ ಮಾಡುವ ಹಿಂದಿನ ದಿನ ರಾತ್ರಿ ಹಚ್ಚಿ ಮಾರನೇ ದಿನ ಸ್ನಾನ ಮಾಡಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top