ಅರೋಗ್ಯ

ಅಮ್ಮ ಅಂದ್ರೆ ಏನು ? ಅಮ್ಮಂಗೆ ಸ್ವಲ್ಪ ಪ್ರೀತಿ ಕೊಡಿ ಬೆಟ್ಟದಷ್ಟು ಪ್ರೀತಿ ವಾಪಾಸ್ ಗ್ಯಾರಂಟಿ ..

ಅಮ್ಮ ಅಂದ್ರೆ ಏನು ? ಹೃದಯ ತಣಿಸೋ ಅದ್ಭುತ ಮಾತು ಅಮ್ಮ ..

 

# 1. ಬೆಳಗ್ಗೆ ಬೇಗ ಎದ್ದು ತನ್ನ ಇಷ್ಟ ಕಷ್ಟಗಳನ್ನ ಬಿಟ್ಟು ಬೇಗ ಎದ್ದು ನೀವು ಸ್ಕೂಲ್ ಹೋಗೋಕೆ ಮುಂಚೆ ನಿಮಗೆ ಇಷ್ಟವಾದ ತಿಂಡಿ ಮಾಡಿ , ಮಧ್ಯಾಹ್ನಕ್ಕೆ ಬಾಕ್ಸ್ ಪ್ಯಾಕ್ ಮಾಡೋಳೆ ಅಮ್ಮ , ಬೆಳಗ್ಗೆ 8 ಕ್ಕೆ ಏನ್ ತಿಂತಿರಾ ಮಧ್ಯಾಹ್ನ 1 ಕ್ಕೆ ಏನ್ ತಿಂತಿರಾ ಅಂತ ಗೊತ್ತಿರುತ್ತೆ ಅವಳಿಗೆ .

 

# 2. ಒಬ್ಬ ತಾಯಿ ಯಾವಾಗಲೂ ಪ್ರತಿಯೊಬ್ಬರ ಹಿತಾಸಕ್ತಿಗಳನ್ನು ತನ್ನದೇ ಅನ್ಕೊಂಡು ಈಡೇರಿಸೋಳು ,

ನಿಮಗೆ ಇಷ್ಟವಾದ ಸಾರು , ನಿಮ್ಮಪ್ಪನಿಗೆ ಇಷ್ಟ ಆದ ತಿಂಡಿ ,ನಿಮ್ಮ ತಂಗಿಗೆ ಇಷ್ಟವಾದ ಸಿಹಿ ಹೀಗೆ .. ಇದೆಲ್ಲದರ ಮಧ್ಯೆ ತನ್ನ ಇಷ್ಟ ಕಷ್ಟಗಳನ್ನ ಮರ್ತೆ ಬಿಡ್ತಾಳೆ ಅವಳೇ ತಾಯಿ .

# 3. ಅಮ್ಮ ತನ್ನ ಶಕ್ತಿಯನ್ನು ತೋರಿಸಲು ನಿರ್ಧರಿಸಿದಾಗ ಹ್ಮ್ಮ್ ಕಾಳಿ ಗೊತ್ತಲ್ಲ ಹಾಗೆ ಅವ್ಳು ಶಾಂತಿಯಾಗಿದ್ರೆ ಸಹನಾ ಮೂರ್ತಿ ತನ್ನ ಕುಟುಂಬಕ್ಕೆ ತೊಂದ್ರೆ ಆದ್ರೆ ಉಗ್ರ ಕಾಳಿ .

 

# 4. ಭಾರತೀಯ ತಾಯಿಯ ಆಲೋಚನೆಗಳೆಂದರೆ ಅವರ ಮಕ್ಕಳ ಬಗ್ಗೆನೇ ಇರುತ್ತೆ , ಊಟ ಆಯ್ತಾ ? ತಿಂಡಿ ಆಯ್ತಾ ? ಹೆಣ್ಮಕ್ಳಗೆ ಮದುವೆ ಆಗಿದ್ರೆ ಮಗಳು ತಿಂದಲೇ ? ಸುಖವಾಗಿದ್ದಾಳಾ ? ಹೀಗೆ ..

# 5. ತಾಯಂದಿರು ತಮ್ಮ ಪ್ರೀತಿಯನ್ನು ತೋರಿಸುವ ಮಾರ್ಗ ಅಂದ್ರೆ ಹೆಚ್ಚು ಊಟ ಬಡಿಸೋದು , ಮನೆಯಿಂದ ಸ್ವಲ್ಪ ದಿನ ದೂರ ಇದ್ರೆ ಸಾಕು ಅಯ್ಯೋ ಮಗು ಸೊರ್ಗೊಗಿದೆ ಅಂತ ಊಟ ಬಡ್ಸಿದ್ದೆ ಬಡ್ಸಿದ್ದು , ಅಮ್ಮ ಬರಿ 2 ಪೂರಿ ಹಾಕಿ ನಾಲ್ಕು ತಿನ್ನೋಕೆ ಆಗಲ್ಲ ಅಂದ್ರೆ ನಿಮ್ ಗತಿ ಏನ್ ಆಗಿರುತ್ತೆ ಗೊತ್ತೇ 2 ಪೂರಿ ಸೈಜ್ ನೋಡಿದ್ರೆ 4 ಪೂರಿ ಸೈಜ್ ಇರುತ್ತೆ .

 

 

# 6. ಯಾವುದೇ ಎರಡನೇ ಆಲೋಚನೆಗಳಿಲ್ಲದೆ ನಿಮಗಾಗಿ ವ್ರತ ಉಪವಾಸ ಮಾಡ್ತಾಳೆ ಆದರೆ ತನಗಾಗಿ ಬೇಡ್ಕೊಳ್ಳೋದೇ ಕಡಿಮೆ ಅದಕ್ಕೆ ಹೇಳೋದು ಅಮ್ಮ ಅಂತ .

 

#7. ನಾವೇ ತಪ್ಪು ಮಾಡಿದ್ರು ನಮ್ಮ ವಹಿಸ್ಕೊಂಡು ಬರೋ ಒಂದು ಜೀವ ಅಮ್ಮ ,ವಹಿಸ್ಕೊಂಡು ಬಂದು ಬುದ್ದಿಹೇಳೋ ರೀತಿನೇ ಸೂಪರ್ .

 

# 8. ಬೇಕಾಗಿರೋದೆಲ್ಲ ಕೊಡ್ತಾಳೆ , ಪ್ರಪಂಚದಲ್ಲೆಲ್ಲಾ ಇರೋ ಕಷ್ಟಗಳಿಗೆ ಅಮ್ಮ ನ ತೋಳು , ಮಡಿಲುಗಳೇ ಸಾಂತ್ವನ ಹೇಳ್ತಾವೆ , ನಮಗೆ ಯಾರ್ ಹತ್ರನು ಹೇಳ್ಕೊಳ್ಳೋಕಾಗದೆ ಇರೋ ತೊಂದ್ರೆಗೆಲ್ಲ ಅಮ್ಮನೇ ಮದ್ದು .

 

 

#9 . ಅಮ್ಮನಿಗೆ ಗೊತ್ತು ನಮ್ಮನ್ನ ಹೇಗೆ ಸಂತೋಷ ಪಡಿಸಬೇಕು ಅಂತ ಅದಕ್ಕೆ ತಾನು ಕೂಡಿಟ್ಟಿರೋ ದುಡ್ಡಲ್ಲಿ ಹೊಸ ಬಟ್ಟೆ , ಚೈನ್ ವಾಚ್ ಕೊಡ್ಸೋದು .

 

# 10. 3 ಜನಕ್ಕೆ ಅಂತ ಅಡುಗೆ ಮಾಡಿರ್ತಾಳೆ ಆದರೆ ಮನೆಗೆ ಯಾರೋ ಬಂದ್ಬಿಡ್ತಾರೆ ಆಗ ಅಮ್ಮ ಊಟ ಬಿಟ್ಟು “ನಂದು ಆಗಲೇ ಊಟ ಆಯಿತು ” ಅಂತ ಹೇಳಿ ಉಳಿದವರಿಗೆ ಊಟ ಹಾಕ್ತಾಳೆ .

 

 

# 11. ನಿಮ್ಮ ಎಲ್ಲ ಸಮಸ್ಯೆಗಳಿಗೆ ತಾಯಂದಿರ ಹತ್ರ ಪರಿಹಾರವಿದೆ. ನೀವು ಒಂದೇ ಕೋಣೆಯಲ್ಲಿ ಅಥವಾ ಅದೇ ರಾಜ್ಯ ಅಥವಾ ಅದೇ ದೇಶದಲ್ಲಿ ಇರ್ಬೇಕು ಅಂತಿಲ್ಲ ಒಂದು ಫೋನ್ ಕಾಲ್ ಮಾಡಿದ್ರೆ ಸಾಕು .

 

 

ಇಷ್ಟೆಲ್ಲಾ ಮಾಡೋ ಅಮ್ಮನ್ನ ಚೆನ್ನಾಗಿ ನೋಡ್ಕೊಳ್ಳಿ ಯಾಕಂದರೆ ಅಮ್ಮ ಒಂದೇ ಸಾರಿ ಸಿಗೋದು ..
ಸ್ವಲ್ಪ ಪ್ರೀತಿ ಕೊಡಿ ಬೆಟ್ಟದಷ್ಟು ಪ್ರೀತಿ ವಾಪಾಸ್ ಗ್ಯಾರಂಟಿ ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top