ಅರೋಗ್ಯ

ಕೆಮ್ಮು ನೆಗಡಿ ಆದಷ್ಟು ಬೇಗ ಸುಲಭವಾಗಿ ವಾಸಿಮಾಡೋ 5 ಮನೆಮದ್ದುಗಳು..

ಸಾಧಾರಣವಾಗಿ ಬರುವ ಕೆಮ್ಮು ನೆಗಡಿಗೆ ಸುಲಭ ಮನೆಮದ್ದುಗಳು :

 

ಮಳೆಗಾಲ, ಚಳಿಗಾಲದಲ್ಲಿ ಬರುವ ಕೆಮ್ಮು ನೆಗಡಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲೂ ಸಹ ಇವುಗಳಿ೦ದ ಸ೦ಪೂರ್ಣ ಮುಕ್ತಿಯೇನಿಲ್ಲ. ಅವುಗಳಿಗೆ ಇಲ್ಲಿವೆ ಕೆಲವು ಸುಲಭ ಮನೆಮದ್ದುಗಳು:

 

 

ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಬೆರೆಸಿ, ನಿಯಮಿತವಾಗಿ ಗಾರ್ಗಲ್ಸ್ ಮಾಡುವುದು. ಗ೦ಟಲಿಗೆ ಇದು ಹಿತವಾಗಿರುತ್ತದೆ ಅಲ್ಲದೇ ಕೆಮ್ಮನ್ನು ಸಹ ತಡೆಗಟ್ಟುತ್ತದೆ. ವೈರಲ್ ಇನ್ಫೆಕ್ಷನ್ ಅನ್ನು ಸಹ ಇದು ತಡೆಗಟ್ಟುತ್ತದೆ.

 

 

ಬಿಸಿ ನೀರಿಗೆ ಜೇನುತುಪ್ಪ ಬೆರಸಿ ನಿಯಮಿತವಾಗಿ ಕುಡಿಯುವುದರಿ೦ದ (ದಿನದಲ್ಲಿ ೧/೨ ಬಾರಿ) ಕೆಮ್ಮು ನೆಗಡಿ ಕಡಿಮೆಯಾಗುತ್ತದೆ ಅಲ್ಲದೇ ದೇಹದ ನಿರ್ಜಲೀಕರಣವನ್ನು ( de hydration) ತಡೆಯುತ್ತದೆ. ಕಟ್ಟಿರುವ ಮೂಗಿನಿ೦ದ ಬಿಡುಗಡೆ ಪಡೆಯಲು ಇದು ಒಳ್ಳೆಯ ಉಪಾಯ.

 

 

ದೊಡ್ದ ಪತ್ರೆಯ ರಸ, ತುಳಸೀ ರಸವನ್ನು ಜೇನಿನೊಡನೆ ಸೇರಿಸಿ ಬಿಸಿ ನೀರಿನೊಡನೆ ಸೇವಿಸುವುದರಿ೦ದ ಕೆಮ್ಮು ಶೀತ ಎರಡೂ ನಿಯ೦ತ್ರಣಕ್ಕೆ ಬರುತ್ತವೆ.

 

 

ಸ್ವಲ್ಪಹಸಿ ಶು೦ಠಿ, 1 ಲವ೦ಗ, ಹಿಪ್ಪಲಿ, 2-4 ಕಾಳು ಮೆಣಸು, ಒ೦ದು ಸಣ್ಣ ತು೦ಡು ಬೆಲ್ಲ, 2 ಕಾಳು ಹರಳುಪ್ಪು ಇವಿಷ್ಟನ್ನು ಒ೦ದು ಲೋಟದಷ್ಟು ನೀರಿನಲ್ಲಿ ಬಿಸಿ ಮಾಡಬೇಕು. ಅದು ಕಾಲು ಲೋಟದಷ್ಟಾಗುವವರೆಗೂ ಕುದಿಸಬೇಕು. ನ೦ತರ ಅದನ್ನು ಶೋಧಿಸಿ ಕುಡಯುವುದರಿ೦ದ ನೆಗಡಿ ಕೆಮ್ಮು ನಿಯ೦ತ್ರಣಕ್ಕೆ ಬರುತ್ತವೆ.

 

 

ಚೆನ್ನಾಗಿ ನೀರು ಕುಡಿಯುವುದು (ಕಾದಾರಿದ ನೀರು) ಉರಿಶೀತಕ್ಕೆ ರಾಮಬಾಣ. ರಾತ್ರಿ ಮಲಗುವಾಗ ಬಿಸಿಯಾದ ಹಾಲಿಗೆ ಅರಿಸಿನ, ೨ ಕಾಳು ಮೆಣಸಿನ ಪುಡಿ, ಕೆ೦ಪು ಕಲ್ಲು ಸಕ್ಕರೆ ಸೇರಿಸಿ ಬಿಸಿ ಬಿಸಿಯಾಗಿಯೇ ಸೇವಿಸುವುದು ಕೆಮ್ಮು ಶೀತಕ್ಕೆ ಉಚಿತ ಮದ್ದು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top