ಸಿನಿಮಾ

ಯಶ್, ರಷ್ಮಿಕಾರನ್ನು ಈ ಕಾರಣಕ್ಕೆ ಹಾಡಿ ಹೊಗಳಿದ ಶಿವರಾಜಕುಮಾರ್

ಸ್ಯಾಂಡಲ್ ವುಡ್’ನಲ್ಲಿ ಅತಿ ಹೆಚ್ಚು ಬ್ಯುಸಿಯಾಗಿರುವ ನಟ ಎಂದರೆ ಅದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್. ಸಾಲು ಸಾಲು ಚಿತ್ರಗಳು ತಮ್ಮ ಮುಂದೆ ಇದ್ದರೂ ಬಿಡುವು ಮಾಡಿಕೊಂಡು ಆಗಾಗ ಕಿರುತೆರೆ ಶೋಗಳನ್ನು ಕೂಡ ನಡೆಸಿಕೊಡುವ ಶಿವಣ್ಣ ಈಗ ಮತ್ತೊಂದು ವಿಭಿನ್ನ ಟಿವಿ ಷೋ ಆದ “ನಂ 1 ಯಾರಿ ವಿತ್ ಶಿವಣ್ಣ” ದಲ್ಲಿ ಸಾರಥ್ಯ ವಹಿಸಿದ್ದಾರೆ.

 

 

ನಂ 1 ಯಾರಿ ವಿತ್ ಶಿವಣ್ಣ ಷೋ ನಲ್ಲಿ ಪ್ರತಿ ಭಾನುವಾರ ಇಬ್ಬರು ಸಿನಿಮಾ ನಟ ನಟಿಯರು ಆಗಮಿಸುತ್ತಾರೆ .ಈ ಷೋ ದಲ್ಲಿ ಸೆಲೆಬ್ರಿಟಿ ಜೋಡಿಗಳು ತಮ್ಮ ಬಗ್ಗೆ ಮುಕ್ತವಾಗಿ ಅನೇಕ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಶಿವಣ್ಣ ಕೇಳಿರುವ ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರ ನೀಡುತ್ತಾರೆ.

 

 

ಈ ಹಿಂದಿನ ವಾರ ನಂ 1 ಯಾರಿ ವಿತ್ ಶಿವಣ್ಣ ಷೋ ನಲ್ಲಿ ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ ಭಾಗವಹಿಸಿದ್ದರು. ಶಿವಣ್ಣ ಕೇಳಿದ ಅನೇಕ ಪ್ರಶ್ನೆಗಳಿವೆ ಬೋಲ್ಡ್ ಆಗಿ ಈ ನಟಿ ಮಣಿಯರು ಉತ್ತರ ನೀಡಿದರು. ಮುಕ್ತವಾಗಿ ತಮ್ಮ ವಿಚಾರವನ್ನು ಇಬ್ಬರು ನಟಿಯರು ಹಂಚಿಕೊಂಡರು.

 

 

ಇನ್ನು ಕಾರ್ಯಕ್ರಮದ ಅಂತ್ಯದ ವೇಳೆ ನಟಿ ಶ್ರುತಿ ಹರಿಹರನ್ ಶಿವಣ್ಣ ಅವರಿಗೆ ಸ್ಯಾಂಡಲ್ ವುಡ್ ಚಿತ್ರರಂಗವನ್ನು ಮತ್ತೊಂದು ಮಟ್ಟಕ್ಕೆ ಬೆಳೆಸಬಹುದಾದ ನಟ ಯಾರು ಎಂದು ಪ್ರಶ್ನೆ ಮಾಡಿದರು ಈಗ ಶಿವಣ್ಣ ಉತ್ತರಿಸಿ ಯಶ್ ಗೆ ಆ ಸಾಮರ್ಥ್ಯ ಇದೆ ಎಂದು ಹೇಳಿದರು. ಅಷ್ಟಕ್ಕೇ ಸುಮ್ಮನಾಗದ ಶ್ರುತಿ ಹರಿಹರನ್ ಭವಿಷ್ಯದ ನಟಿ ಯಾರು ಎಂಬ ಪ್ರಶ್ನೆ ಕೇಳಿದರು. ಆಗ ಶಿವಣ್ಣ ರಶ್ಮಿಕಾ ಮಂದಣ್ಣ ಎಂದು ಉತ್ತರಿಸಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top