ಅರೋಗ್ಯ

ಈ ಆಯುರ್ವೇದದ ಪರಿಹಾರ ಉಪಯೋಗಿಸಿಕೊಂಡು ಅವಾಗಾವಾಗ ಹೆಣ್ಮಕ್ಕಳಲ್ಲಿ ಬರೋ ತಲೆ ಸುತ್ತಿನ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಿ

ಆಗಾಗ ಹೆಣ್ಮಕ್ಕಳಲ್ಲಿ ಬರುವ ತಲೆ ಸುತ್ತಿನ ಸಮಸ್ಯೆಗೆ ಆಯುರ್ವೇದದ ಪರಿಹಾರಗಳು ..

 

ಹೆಣ್ಮಕ್ಕಳಲ್ಲಿ ತಲೆ ಸುತ್ತು ಕಾಣಿಸಿಕೊಳ್ಳಲು ನೂರಾರು ಕಾರಣಗಳಿವೆ ಮುಖ್ಯವಾಗಿ ರಕ್ತ ಹೀನತೆ , ಮಾನಸಿಕ ಒತ್ತಡ , ಹೆಚ್ಚಿನ ರಕ್ತದ ಒತ್ತಡ ಈ ಸಮಸ್ಯೆಗಳಿರುವವರಲ್ಲಿ 100 ಕ್ಕೆ 60 ಮಂದಿ ತಲೆ ಸುತ್ತಿನ ಸಮಸ್ಯೆ ಎದುರಿಸುತ್ತಿರುತ್ತಾರೆ .

 

 

ತಲೆ ಸುತ್ತಿನ ಸಮಸ್ಯೆಗೆ ಆಯುರ್ವೇದದ ಪರಿಹಾರಗಳು

ಹಸುವಿನ ಹಾಲಿಗೆ ಜೀರಿಗೆ ಪುಡಿಯನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಹಣೆಗೆ ಹಚ್ಚಿ ಮುಕ್ಕಾಲು ಗಂಟೆಯ ನಂತರ ತೊಳೆಯಬೇಕು .

 

 

ಅರ್ಧ ಚಮಚ ಜೀರಿಗೆ ಪುಡಿ ಮತ್ತು ಅರ್ಧ ಚಮಚ ಧನಿಯಾ ಪುಡಿಯನ್ನು ಒಂದು ಲೋಟ ಬಿಸಿರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು ಇದರಿಂದ ತಲೆಸುತ್ತು ಕಡಿಮೆಯಾಗುತ್ತದೆ .

 

 

ಏಲಕ್ಕಿಯನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ , ಅರ್ಧ ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿ ಕುಡಿಯಬೇಕು

 

ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಒಂದು ಗಂಟೆಯ ನಂತರ , ಕಿವುಚಿ ಕುಡಿಯಬೇಕು .

 

ತಲೆ ಸುತ್ತಿನ ಸಮಯದಲ್ಲಿ ಹುಳಿ ಆಹಾರ ಸೇವನೆ ಮಾಡಬಾರದು ಮತ್ತು ಹೊಟ್ಟೆ ಖಾಲಿ ಬಿಡಬಾರದು ,ಪಿತ್ತ ಹೆಚ್ಚಿಸುವ ಆಹಾರ ತಿನ್ನಬಾರದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top