ಭವಿಷ್ಯ

ನಿಮ್ಮ ಮನೆ ಅಥವಾ ನಿಮ್ಮ ಮನೆಯ ಸುತ್ತ ಮುತ್ತ ಈ ವಸ್ತುಗಳು ಕಂಡು ಬಂದ್ರೆ ಸ್ವಲ್ಪ ಹುಷಾರಾಗಿರಿ ಅದು ನಿಮ್ಮ ಬಡತನ ಹಾಗೂ ಅಷ್ಟ ಕಷ್ಟಗಳಿಗೆ ಕಾರಣವಾಗುತ್ತದೆ ಅಂತ ಹೇಳುತ್ತೆ ಜ್ಯೋತಿಷ್ಯಶಾಸ್ತ್ರ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವಸ್ತುಗಳು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಸುತ್ತಮುತ್ತ ಇದ್ದರೆ ಅವು

ಬಡತನಕ್ಕೆ ಕಾರಣವಾಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ 

 

 

ಶ್ರೀಮಂತರಾಗುವ ಕನಸನ್ನು ಎಲ್ಲರೂ ಸಹ ಕಾಣುತ್ತಾರೆ ಕೆಲವೊಮ್ಮೆ ಕಷ್ಟಪಟ್ಟರೂ ಕೈಗೆ ಬಂದ ಹಣ ಸಿಗುವುದಿಲ್ಲ ಇದರಿಂದ ಸದಾ ಬಡತನ ಕಾಡುತ್ತದೆ. ಇದಕ್ಕೆ ವಾಸ್ತು ದೋಷ ಅಥವಾ ಮನೆಯ ಸುತ್ತಮುತ್ತಲಿನ ಈ ವಸ್ತುಗಳು ಸಹ ಕಾರಣವಾಗಬಹುದು. ಮನೆಯ ಆರ್ಥಿಕ ದುಸ್ಥಿತಿಗೆ ಕಾರಣವಾಗುವ ಹಾಗೂ ಶಾಂತಿಯನ್ನು ನೆಮ್ಮದಿಯನ್ನು ಹಾಳು ಮಾಡುವ ಇಂತಹ ವಸ್ತುಗಳು ಮನೆಯ ಆಸುಪಾಸಿನಲ್ಲಿದ್ದರೆ ತಕ್ಷಣ ಅವುಗಳನ್ನು ಹುಡುಕಿ ತೆಗೆದು ಹಾಕಿ.

 

1.ಪಾರಿವಾಳದ ಗೂಡು.

 

 

ಪಾರಿವಾಳದ ಗೂಡು ನಿಮ್ಮ ಮನೆಯ ಅಂಗಡಿ ಅಥವಾ ಆಸು ಪಾಸಿನಲ್ಲಿ ಪಾರಿವಾಳದ ಗೂಡುಗಳಿದ್ದರೆ ಅದನ್ನು ತೆಗೆದು ಹಾಕಿ. ಇದು ಮನೆಯ ಅಸ್ಥಿರತೆಗೆ ಕಾರಣವಾಗುತ್ತದೆ. ಬಡತನ ಕಾಡಲು ಕಾರಣವಾಗುತ್ತದೆ.

 

2.ಮನೆಯ ಗೋಡೆಯಲ್ಲಿ ಬಿರುಕು.

 

 

ನಿಮ್ಮ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ.ಇದು ಬಡತನವನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ ಅಂತಹ ಮನೆಯಲ್ಲಿ ವಾಸಿಸುವ ಮನಸ್ಸುಗಳಲ್ಲಿ ಸಹ ಬಿರುಕನ್ನು ಮೂಡಿಸುತ್ತದೆ. ಮನೆಯಲ್ಲಿ ನೆಮ್ಮದಿ ಎನ್ನುವುದು ಇರುವುದೇ ಇಲ್ಲ .

 

3. ಜೇಡರ ಬಲೆ.

 

 

ನಿಮ್ಮ ಮನೆಯಲ್ಲಿ ಜೇಡರ ಹುಳು ಬಲೆ ಅಥವಾ ಮನೆಯನ್ನು ಕಟ್ಟಿದ್ದರೆ ಅದನ್ನು ಕಂಡ ತಕ್ಷಣ ತೆಗೆದು ಹಾಕಿ. ಮುಂದೆ ಎಂದೂ ಸಹ ಅದು  ನಿಮ್ಮ ಮನೆಯಲ್ಲಿ ಅವುಗಳನ್ನು ಅಥವಾ ಜೇಡರ ಮನೆಯನ್ನು ಕಟ್ಟದಂತೆ ನೋಡಿಕೊಳ್ಳಿ .

 

4.ಒಣಗಿದ ಎಲೆಗಳು.

 

 

ಮನೆಯ ಮುಂದಿರುವ ಗಿಡ ಮತ್ತು ಮರಗಳಿಂದ ಒಣಗಿದ ಎಲೆಗಳು ಸಾಮಾನ್ಯವಾಗಿ ಬೀಳುತ್ತಿರುತ್ತವೆ. ತಕ್ಷಣ ಅವುಗಳನ್ನು ಸ್ವಚ್ಛಗೊಳಿಸಿ. ಮನೆಯ ಆವರಣದಿಂದ ಅವುಗಳನ್ನು ತೆಗೆದು ಹಾಕಿ. ಇದು ಕೂಡ ಆರ್ಥಿಕವಾಗಿ ನಷ್ಟಕ್ಕೆ ಕಾರಣವಾಗಬಹುದು.

 

5.ಜೇನು ಗೂಡು .

 

 

ಜೇನು ಗೂಡಿನಲ್ಲಿರುವ ಜೇನು ತುಪ್ಪ ತಿನ್ನಲು ಮಾತ್ರ ಬಹಳ ರುಚಿ ಹಾಗೆ ಆರೋಗ್ಯಕ್ಕೂ ಕೂಡ ಇದು ಬಹಳ ಒಳ್ಳೆಯದು. ಆದರೆ ಮನೆ ಅಥವಾ ಅಂಗಡಿ ಬಳಿ ಜೇನು ಗೂಡು ಕಟ್ಟಿದ್ದನ್ನು ನೋಡಿದರೆ ಅದು ಅಶುಭ  ಎಂದು ಪರಿಗಣಿಸಲಾಗಿದೆ . ಹಣ ವಿಪರೀತವಾಗಿ ಖರ್ಚಾಗುವ ಲಕ್ಷಣವನ್ನು ಇದು ಸೂಚಿಸುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top