ದೇವರು

ಸಾಕ್ಷಾತ್ ಶಿವನನ್ನೇ ಪ್ರತಿನಿಧಿಸೋ 6 ಸಂಕೇತಗಳನ್ನು ಪೂಜೆ ಮಾಡಿದ್ರೆ ಶಿವನನ್ನೇ ಪೂಜೆ ಮಾಡಿದಷ್ಟು ಪುಣ್ಯ ಪಡ್ಕೊಬಹುದು ,ಅವು ಏನನ್ನು ಸೂಚಿಸುತ್ತವೆ ಗೊತ್ತೆ

ಸಾಕ್ಷಾತ್ ಶಿವನ ಆರು ಸಂಕೇತಗಳು ಯಾವುವು ? ಆವು ಏನನ್ನು ಸೂಚಿಸುತ್ತವೆ ಎಂದು ನಿಮಗೆ ಗೊತ್ತೇ ?

ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಜ್ಯೋತಿರ್ಲಿಂಗ ಎಂಬುದು ಎಲ್ಲ ದೇವತೆಗಳ ಆಲಯವಿದ್ದಂತೆ. ಎಲ್ಲ ಜಲ ಚರಾಚರಗಳು ಅಂತಿಮವಾಗಿ ಇದರಲ್ಲೇ ಲೀನವಾಗುತ್ತವೆ. ಲಿಂಗ ಸಾಕ್ಷಾತ್ ಶಿವನ ಪ್ರತೀಕ. ಅದು ಬ್ರಹ್ಮಾಂಡದ ಸಂಕೇತ ಕೂಡ.ಸತ್ ಮತ್ತು ಅಸತ್ ತತ್ತ್ವಗಳು ಹುಟ್ಟಿಕೊಳ್ಳುವುದಕ್ಕೆ ಮೊದಲು ಅನಾದಿ, ಅನಂತ, ಬ್ರಹ್ಮಾಂಡ ಲಿಂಗ ರೂಪದಲ್ಲಿ ಇತ್ತೆಂದು ಶೃತಿ, ಸ್ಮೃತಿಗಳು ಉಲ್ಲೇಖಿಸಿವೆ.

 

 

 

ಬ್ರಹ್ಮಾಂಡ ಜ್ಯೋತಿರ್ಲಿಂಗ ರೂಪದಲ್ಲಿದೆ. ಪ್ರಾರಂಭದಲ್ಲಿ ಹಿರಣ್ಯಗರ್ಭ ಜನ್ಮ ತಳೆದನಂತೆ. ಸಮಸ್ತ ಜೀವಿಗಳಿಗೆ ಆತನೇ ದೇವರು. ಈ ಭೂಮಿ ಮತ್ತು ಸ್ವರ್ಗವನ್ನು ಸೃಷ್ಟಿಸಿ ಅವುಗಳನ್ನು ರಕ್ಷಿಸುವವನು ಈತನೆ ಎನ್ನುತ್ತದೆ ಋಗ್ವೇದ. ಜ್ಯೋತಿರ್ಲಿಂಗದ ಪರಿಪೂರ್ಣ ರೂಪವೇ ಹಿರಣ್ಯಗರ್ಭ.

 

1.ಶಿವನ ತ್ರಿಶೂಲ.

 

 

ಶಿವನ ಎಡಗಡೆಯ ಕೈಯಲ್ಲಿ ಫಳಗುಟ್ಟುವ ತ್ರಿಶೂಲವಿದೆ. ತ್ರಿವಿದ್ಯೆಗಳಿಗೂ ಅದು ಸಂಕೇತವಾಗಿದೆ. ದೈಹಿಕ, ಆಧ್ಯಾತ್ಮಿಕ ಮತ್ತು ಭೌತಿಕ ಪಾಪಗಳನ್ನು ನಿವಾರಿಸುವ ಸಾಧನ. ಧ್ಯಾನದ ಉತ್ಕಟ ಅವಸ್ಥೆಯನ್ನು, ಸಮಾಧಿ ಸ್ಥಿತಿಯನ್ನು ತಲುಪಲು ಅದು ಸಹಕಾರಿಯಾಗಿದೆ .ಜಾಗೃತ ,ಸ್ವಪ್ನ, ನಿದ್ರಾ ಮತ್ತು ಸುಷುಪ್ತಿ, ಈ ನಾಲ್ಕು ಅವಸ್ಥೆಗಳನ್ನು ದಾಟಿ ಕೊನೆಯದಾದ ತುರೀಯಾವಸ್ಥೆ ತಲುಪಲು ಅದು ಮಾರ್ಗದರ್ಶಿಯಾಗಿದೆ. ಶಿವನು ಅಂಧಕಾರ ರಾಕ್ಷಸನನ್ನು ಸಂಹರಿಸಲು ಬಳಸಿದ್ದು ಇದೇ ಆಯುಧವೇ.

2.ಶಿವನ ವಿಭೂತಿ.

ಹಣೆ ,ಎದೆ ,ತೋಳುಗಳ ಮೇಲೆ ಅಡ್ಡಲಾಗಿ ಎಳೆದಿರುವ ಭಸ್ಮದ ಮೂರು ಪಟ್ಟಿಗಳು ಶೈವ ಪಂಥೀಯರ ಪ್ರಮುಖ ಲಾಂಛನವಾಗಿದೆ. ಈ ಮೂರು ಪಟ್ಟಿಗಳು ಇಚ್ಛಾ, ಕ್ರಿಯಾ ಮತ್ತು ಜ್ಞಾನಶಕ್ತಿಗಳ ಸಂಕೇತವಾಗಿವೆ. ಹಾಗೆ ಪರಬ್ರಹ್ಮನ ಸಂಜ್ಞೆಯಾಗಿರುವ “ಓಂ” ನ ಸಂಕೇತ ಕೂಡ ಆಗಿದೆ .

ಈ ಲಾಂಛನ ಮೂರು ವೇದಗಳ ಋಗ್ವೇದ ,ಯಜುರ್, ಸಮಾ ವೇದಗಳನ್ನು ಪ್ರತಿನಿಧಿಸುತ್ತವೆ. ಹಣೆ, ಎದೆ ತೋಳುಗಳಿಗೆ ವಿಭೂತಿ ಪಟ್ಟಿ ಬಳಿದು ಕೊಳ್ಳುವುದರಿಂದ ಶಿವನು ಸುಪ್ರೀತನಾಗುತ್ತಾನೆ. ಮಹಾಪಾಪಗಳಿಂದಲೂ ಮುಕ್ತಿ ಪಡೆಯಲು ಇದೊಂದು ಸುಲಭ ಹಾಗೂ ಸರಳ ಮಾರ್ಗ ಎನ್ನುತ್ತದೆ ಪುರಾಣ.

 

 

ಈ ಹಿಂದೆ ವೈದಿಕ ವಿಧಿ ವಿಧಾನಗಳಿಗೆ ಅನುಗುಣವಾಗಿ ಹೋಮಕುಂಡದಲ್ಲಿ ಕಾಷ್ಟ, ಸಂವಿಧಾನಗಳು ಹಾಗೂ ಇತರ ಯಜ್ಞ ದ್ರವ್ಯಗಳಿಗೆ ಬಿಲ್ವ ಪತ್ರೆ ಸುಟ್ಟು ವಿಭೂತಿ ತಯಾರಿಸುತ್ತಿದ್ದರು. ಚಿತೆಯಿಂದ ನೇರವಾಗಿ ಭಸ್ಮ ಸಂಗ್ರಹಿಸಿ ಮೈಗೆಲ್ಲ ಬಳಿದುಕೊಂಡು ಶಿವನನ್ನು ಮೆಚ್ಚಿಸುತ್ತಿದ್ದರು.

ಚಿತಾ ಭಸ್ಮ ಶಿವನ ನೆಚ್ಚಿನ ಅಂಗರಾಗ ಎಂದು ನಂಬುತ್ತಾರೆ. ದೇವರ ಪೂಜೆಗೆ ಸ್ನಾನ ಕಡ್ಡಾಯ. ಆದರೆ ಶಿವನ ಪೂಜೆಗೆ ವಿಭೂತಿ ಬಳಿದುಕೊಂಡರೆ ಯಾವ ಸ್ನಾನವೂ ಬೇಕಿಲ್ಲವಂತೆ. ವಿಭೂತಿ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಆದರೆ ಈಗ ಮಾರುಕಟ್ಟೆಯಲ್ಲಿ ಇರುವ ವಿಭೂತಿಯಲ್ಲಿ ಈ ಅನುಭೂತಿ ಇಲ್ಲ .

3.ರುದ್ರಾಕ್ಷಿ.

ಶಿವನ ಕೊರಳಲ್ಲಿ ರುದ್ರಾಕ್ಷಿಮಾಲೆ ಅತ್ಯಂತ ಪ್ರಭಾವಶಾಲಿಯಾಗಿದೆ. ನಿಮಗೆ ಲಿಂಗ ಧರಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ, ಒಂದು ರುದ್ರಾಕ್ಷಿಯನ್ನು ಕೊರಳಿಗೆ ಹಾಕಿಕೊಂಡರೂ ಶಿವ ತೃಪ್ತನಾಗುತ್ತಾನೆ. ರುದ್ರಾಕ್ಷಿ ಬಹುಮುಖಿ, ಒಂದೊಂದು ಮುಖಕ್ಕೂ ಒಂದೊಂದು ಅರ್ಥವಿದೆ .

ಒಂದು ಮುಖವಿದ್ದರೆ ಶಿವ.

ಎರಡು ಮುಖವಿದ್ದರೆ ಶಿವ ಮತ್ತು ಶಕ್ತಿ ಅಂದರೆ ಅರ್ಧನಾರೀಶ್ವರ.

ಮೂರು ಮುಖವಿದ್ದರೆ ಅಗ್ನಿ.

ನಾಲ್ಕು ಮುಖವಿದ್ದರೆ ಬ್ರಹ್ಮ.

ಐದು ಮುಖವಿದ್ದರೆ ಮಹಾದೇವ.

ಆರು ಮುಖವಿದ್ದರೆ ಕಾರ್ತಿಕ.

 

 

ಏಳು ಮುಖ ಇದ್ದರೆ ಸಪ್ತ ಮಾತೃಕೆ.

ಎಂಟು ಮುಖಗಳಿದ್ದರೆ ಅಷ್ಟ ಲಕ್ಷ್ಮೀ.

ಒಂಬತ್ತು ಮುಖಗಳಿದ್ದರೆ ನವದುರ್ಗೆ.

ಹತ್ತು ಮುಖಗಳಿದ್ದರೆ ಯಮ.

ಹನ್ನೊಂದು ಮುಖವಿದ್ದರೆ ಏಕಾದಶ ರುದ್ರಾಕ್ಷಿ.

ಹನ್ನೆರಡು ಮುಖವಿದ್ದರೆ ದ್ವಾದಶ ಆದಿತ್ಯರು.

ಹದಿಮೂರು ಮುಖಗಳು ಸಾಕ್ಷಾತ್ ವಿಷ್ಣು ಎನ್ನುವ ನಂಬಿಕೆ ಇದೆ.

ರುದ್ರಾಕ್ಷಿಯಲ್ಲಿ ಅಸಾಧಾರಣ ಔಷಧೀಯ ಗುಣಗಳಿವೆ. ಅವುಗಳ ಧಾರಣೆಯಿಂದ ರಕ್ತದ ಒತ್ತಡ ಮತ್ತು ಇತರೆ ಹೃದಯ ಸಂಬಂಧಿ ವ್ಯಾಧಿಗಳ ನಿವಾರಣೆ ಸಾಧ್ಯವಾಗುತ್ತದೆ. ಆಯುರ್ವೇದವೂ ಕೂಡ ಇದನ್ನೇ ಹೇಳುತ್ತದೆ .

4.ಬಿಲ್ವ ಪತ್ರೆ .

ಶಿವರಾತ್ರಿಯಂದು ಬೇಡರ ಕಣ್ಣಪ್ಪ ತನಗೆ ಅರಿವಿಲ್ಲದೆ ಬಿಲ್ವಪತ್ರೆ ಮರದ ಮೇಲೆ ಏರಿ ಕುಳಿತು ರಾತ್ರಿ ಪೂರ್ತಿ ಒಂದೊಂದೇ ಎಲೆ ಕಿತ್ತು ಶಿವನ ಮೇಲೆ ಹಾಕಿದ್ದಕ್ಕೆ ಶಿವನು ಸಂತೃಪ್ತನಾಗಿದ್ದಾನೆ. ಆದಿಲಕ್ಷ್ಮಿ ಕೂಡ ಬಿಲ್ವ ಮರದಲ್ಲಿ ನೆಲೆಸಿರುತ್ತಾಳೆ. ಹಾಗಾಗಿ ಒಂದು ಎಲೆಯನ್ನು ನೆಲಕ್ಕೆ ಬೀಳಿಸದೆ, ಶಿವ ಪಾರ್ವತಿಯರನ್ನು ಪೂಜಿಸಿದರೆ ಶುಭ ಎನ್ನುತ್ತದೆ ಸ್ಕಂದ ಪುರಾಣ.

 

 

ಬಿಲ್ವದ ಮೂರು ದಳಗಳಲ್ಲಿ ಸತ್ಯ, ರಜಾ ಮತ್ತು ತಮೋ ಗುಣಗಳು ನೆಲೆಸಿರುತ್ತವೆ. ಬಿಲ್ವ ವೃಕ್ಷದ ಬೇರು, ಕಾಂಡ, ತೊಗಟೆ, ಎಲೆ, ಹೂವು, ಕಾಯಿ ಎಲ್ಲವೂ ಅತ್ಯಮೂಲ್ಯ ಔಷಧೀಯ ಗುಣಗಳನ್ನು ಹೊಂದಿವೆ. ಹಾವಿನ ಕಡಿತಕ್ಕೂ ಕೂಡ ರಾಮಬಾಣ ಈ ಬಿಲ್ವಪತ್ರೆ.

5.ನಂದಿ.

 

ಶಿವನ ಎದುರು ನಂದಿ ಸದಾ ಕಾವಲು ಕಾಯುತ್ತಾ ಇರುತ್ತಾನೆ. ನಂದಿ ಇಲ್ಲದ ಶಿವನ ದೇವಾಲಯಗಳು ಇಲ್ಲ ಎಂದು ಹೇಳಬಹುದು. ಭಕ್ತರು ಬಂದಿರುವುದನ್ನು ಶಿವನಿಗೆ ಹೇಳುವುದು ನಂದಿಯೇ ಎಂಬ ನಂಬಿಕೆ ಈಗಲೂ ಸಹ ಭಕ್ತರ ಮನಸ್ಸಿನಲ್ಲಿ ಇದೆ .

6.ನಾಗರ ಹಾವು.

 

 

ದೇಹದಲ್ಲಿ ಅಡಗಿರುವ ಕುಂಡಲಿನಿ ಶಕ್ತಿಯ ಪ್ರತೀಕ ಶಿವನ ಕೊರಳಿನಲ್ಲಿರುವ ನಾಗರಹಾವು. ಸಾಧಕರೊಬ್ಬರಿಗೆ ಆಧ್ಯಾತ್ಮಿಕ ನೆಲೆಯಲ್ಲಿ ತನ್ನ ಲಕ್ಷ್ಯವನ್ನು ತಲುಪಲು ಮೊದಲು  ಈ ಶಕ್ತಿ ಜಾಗೃತರಾಗಿರಬೇಕೆಂದು ಹೇಳುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top