ಸಿನಿಮಾ

ಹುಡುಗಿಯರ ಹೃದಯ ಕಳ್ಳ ಸೂರ್ಯ ಬಗ್ಗೆ ಸುದೀಪ್ ಹೀಗಂದ್ರು

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತದ ಇತರ ಚಿತ್ರರಂಗಗಳಲ್ಲೂ ಅಭಿನಯಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡದ ಕಿಚ್ಚ ಸುದೀಪ್ ಇದೀಗ ಹಾಲಿವುಡ್ ಪ್ರವೇಶ ಮಾಡಿರುವುದು ನಮ್ಮೆಲ್ಲರಿಗೂ ಗೊತ್ತೇ ಇದೆ ಇನ್ನು ಇಷ್ಟೊಂದು ಬಿಸಿಯಾಗಿರುವ ಕಿಚ್ಚ ಸುದೀಪ್ ಅವರು ಸದಾ ಅಭಿಮಾನಿಗಳೊಂದಿಗೆ ಸ್ನೇಹದೊಂದಿಗೆ ಬೆರೆಯುತ್ತಾರೆ. ಸದಾ ಟ್ವಿಟ್ಟರ್ ನಲ್ಲಿ ಸುದ್ದಿಯಲ್ಲಿರುವ ಕಿಚ್ಚ ಸುದೀಪ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

 

 

ಈಗ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಅವರು ತಮಿಳು ನಟ ಸಿಂಗಂ ಖ್ಯಾತಿಯ ಸೂರ್ಯ ರವರ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ. ಟ್ವಿಟ್ ನಲ್ಲಿ ”ಸೂರ್ಯ ರವರು ಗ್ರೇಟ್ ವ್ಯಕ್ತಿ ಮತ್ತು ನನ್ನ ಆತ್ಮೀಯ ಗೆಳೆಯ” ಎಂದು ಹೊಗಳಿದ್ದಾರೆ.

 

ಅಷ್ಟಕ್ಕೂ ಸುದೀಪ್ ಯಾಕೆ ಸೂರ್ಯ ಅವರನ್ನು ಈಗ ಹೊಗಳಿದ್ದು ಎಂಬುದಕ್ಕೂ ಒಂದು ಕಾರಣವಿದೆ. ನಟ ಸೂರ್ಯ ಅಭಿನಯ ಮಾಡಿದ್ದ ಚಿತ್ರ ‘ಸಿಂಗಂ-2’ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಒಂದೇ ವೇದಿಕೆಯಲ್ಲಿ ಕಿಚ್ಚ ಹಾಗು ಸುದೀಪ್ ಒಟ್ಟಾಗಿದ್ದರು. ಈ ವಿಡಿಯೋವನ್ನ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಸುದೀಪ್ ಅವರಿಗೆ ಶೇರ್ ಮಾಡಿದ್ದರು. ಈ ವಿಡಿಯೋ ನೋಡಿದ ಕಿಚ್ಚ ಸುದೀಪ್ ಸಂತೋಷ ಗೊಂಡಿದ್ದಾರೆ.

 

 

ಈ ವಿಡಿಯೋ ನೋಡಿ ಸಂತೋಷದಿಂದ ಶೇರ್ ಮಾಡಿರುವ ಸುದೀಪ್ ” ಈ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಥ್ಯಾಂಕ್ ಯೂ ಫ್ರೆಂಡ್. ಸೂರ್ಯ ಅವರ ಗ್ರೇಟ್ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ. ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ನಿಜಕ್ಕೂ ಅದ್ಭುತ” ಎಂದು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top