ಭವಿಷ್ಯ

ಎಷ್ಟೇ ಟ್ರೈ ಮಾಡ್ತಿದ್ರು ನಿದ್ದೆ ಸರಿಯಾಗಿ ಬರ್ತಿಲ್ಲ ಅನ್ನೋರು ಶಾಸ್ತ್ರಗಳ ಪ್ರಕಾರ ಈ ಪದ್ದತಿಗಳನ್ನ ಅನುಸರಿಸಿ ಸರಿ ಮಾಡ್ಕೋಳ್ಳಿ ನೆಮ್ಮದಿಯಾಗಿ ಮಲಗಿ

ಮಲಗುವ ಮುನ್ನ ಈ ಕೆಲಸಗಳನ್ನು ದಿನನಿತ್ಯ ಮಾಡಿ ಸುಖವಾದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ.

 

 

ಅದೃಷ್ಟ ನಮ್ಮ ಜೊತೆಗಿರಬೇಕು ನಮ್ಮನ್ನು ಸುಖಮಯ ಜೀವನಕ್ಕೆ ಅದು ನಾಂದಿ ಹಾಡಬೇಕು ಅಂದ್ರೆ ನಾವು ಪ್ರತಿನಿತ್ಯ ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಬೇಕು. ನಮ್ಮ ನಿತ್ಯದ ಬದುಕಿನಲ್ಲಿ ನಿದ್ರೆಗೆ ಅತ್ಯಂತ ಮಹತ್ವ ಇದೆ .ಈ ಕೆಲಸಗಳನ್ನು ತಪ್ಪದೇ ಮಾಡಲೇಬೇಕು. ದಿನ ನಿತ್ಯ ಬಳಲಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ. ಮಾರನೇ  ದಿನದ ಎಲ್ಲಾ ಕೆಲಸಗಳಿಗೂ ನಮ್ಮ ದೇಹದಲ್ಲಿ ನಿದ್ರೆಯಿಂದಲೇ  ಚೈತನ್ಯ ತುಂಬಿಕೊಂಡು ಬರುತ್ತೆ. ಆದರೆ ನಿದ್ರೆ  ಮಾಡುವ ಸಮಯದಲ್ಲಿ ನಾವು ಮಾಡುವ ಚಿಕ್ಕ ಚಿಕ್ಕ ಸಣ್ಣ ಪುಟ್ಟ ಕೆಲಸಗಳು ನಮ್ಮನ್ನು ಅದೃಷ್ಟದ  ಹಾದಿಗೆ ಕರೆದೊಯ್ಯುತ್ತವೆ. ಜೊತೆಗೆ ನಿದ್ರೆ  ಮಾಡಲು ಕೂಡ ಸಹಕರಿಸಿ ನಮ್ಮ ಶರೀರಕ್ಕೆ ವಿಶ್ರಾಂತಿ, ದೇಹಕ್ಕೆ ಆರೋಗ್ಯ ಇವೆಲ್ಲವನ್ನೂ ಒದಗಿಸುತ್ತವೆ.

ಇನ್ನು ಮಲಗುವ ಮುನ್ನ ಬಟ್ಟೆ ಒಂದರಲ್ಲಿ ಸೊಂಪನ್ನ ಹಾಕಿಕೊಂಡು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ  ನೋಡಿ ಅದರಿಂದ ನಿಮಗೆ ಕೆಟ್ಟ ಕನಸುಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲವಂತೆ.

 

 

ಒಂದು ತಾಮ್ರದ ತಂಬಿಗೆಯೊಂದರಲ್ಲಿ ನೀವು ನೀರನ್ನು ತುಂಬಿಕೊಂಡು, ನಿಮ್ಮ ತಲೆಯ ಸಮೀಪದಲ್ಲಿ ಇಟ್ಟುಕೊಂಡು ಮರುದಿನ ಬೆಳಿಗ್ಗೆ ಎದ್ದು ಆ ನೀರನ್ನು ಗಿಡಗಳಿಗೆ ಹಾಕಿದರೆ ಅದೃಷ್ಟ ನಿಮ್ಮ ಹಿಂದೆಯೇ ಬರುತ್ತದಂತೆ. ನಿಮ್ಮದೇ ಆಗುತ್ತದೆ ಅದೃಷ್ಟ.

ಮಲಗುವ ಮುನ್ನ ಒಳ್ಳೊಳ್ಳೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು  ಹಿರಿಯರು ಕೂಡ ಹೇಳುತ್ತಾರೆ. ಮಲಗುವ ಮುನ್ನ ಒಳ್ಳೊಳ್ಳೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ  ಅದರಿಂದ ನಮಗೆ ಮಾನಸಿಕವಾದ ಒತ್ತಡ ಕಡಿಮೆ ಆಗುತ್ತದೆ, ಯಾವಾಗಲೂ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಿ ಕೊಳ್ಳಬೇಕು, ಆಗ ನೆಮ್ಮದಿಯ ನಿದ್ರೆ ಹಾಗೂ ಸುಖಮಯ ನಿದ್ರೆ ನಿಮ್ಮದಾಗುತ್ತದೆ.

 

 

ಇತ್ತೀಚೆಗೆ ನಾವು  ನೋಡುತ್ತೇವೆ  ಮಲಗುವ ಮುನ್ನ ನಮ್ಮ ಮೊಬೈಲ್ ನಮ್ಮ ತಲೆಯ ಹತ್ತಿರವೇ ಇರುತ್ತದೆ. ಆದರೆ  ಮಲಗುವ ಮುನ್ನು ನಿಮ್ಮ ಮೊಬೈಲ್ ಸ್ವಿಚ್ ಆಫ್  ಮಾಡಿ, ಹತ್ತು ನಿಮಿಷ ಧ್ಯಾನ ಮಾಡಿ ನೋಡಿ ಯಾವುದೆಲ್ಲ ಚಮತ್ಕಾರಗಳಾಗುತ್ತವೆ ಎಂದು.  ನಿಮ್ಮ ಮೊಬೈಲ್ ಆನ್ನು ಸ್ವಿಚ್ ಆಫ್  ಮಾಡಿ ಹತ್ತು ನಿಮಿಷ ಧ್ಯಾನ ಮಾಡಿಕೊಂಡು ಇದರಲ್ಲಿ ನಿಮ್ಮ ಏಕಾಗ್ರತೆ ಮತ್ತು ಮೆದುಳಿನ ಶಕ್ತಿ ದ್ವಿಗುಣವಾಗುತ್ತದೆ. ನಿಮ್ಮ ಸುತ್ತಮುತ್ತ ಇರುವ ಯಶಸ್ವಿ ವ್ಯಕ್ತಿಗಳೆಲ್ಲ ನಿಮ್ಮನ್ನು ಅಳವಡಿಸಿಕೊಂಡು ಮುಂದೆ ಸಾಗುವಂತೆ ಮಾಡುತ್ತದೆ.

 

 

ಹಾಗೆಯೇ ಬಿಸಿ ನೀರಿನಿಂದ ನಿಮ್ಮ ಪಾದಗಳನ್ನು ತೊಳೆದುಕೊಂಡು ನಂತರ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಮತ್ತು  ಕರ್ಪೂರ ಮಿಶ್ರಣ  ಮಾಡಿಕೊಂಡು ಇಮ್ಮಡಿಗಳಿಗೆ ಹಚ್ಚಿಕೊಳ್ಳಿ ಹೀಗೆ  ಮಾಡುವುದರಿಂದ  ನಿಮ್ಮ ನಿದ್ರೆಗೆ ಯಾವುದೇ ಭಂಗ ಬರುವುದಿಲ್ಲ. ಮತ್ತೆ ಮತ್ತೆ ಎಚ್ಚರಿಕೆ ಆಗುವುದಿಲ್ಲ. ಸುಖಮಯವಾದ ನಿದ್ದೆ ನಿಮ್ಮದಾಗುತ್ತದೆ.

ಮತ್ತೊಂದು ಉಪಾಯ ಏನೆಂದರೆ ಮಲಗುವ ಮುನ್ನ ಒಂದು  ಮೀಟರ್ ಓಡಾಡುವುದನ್ನು ಮಾಡುವುದು  ಇದು ಉತ್ತಮ ಅಂತ ಹೇಳ್ತಾರೆ ತಜ್ಞರು. 15 ನಿಮಿಷಗಳ ಕಾಲ ನಡೆದಾಡಿದರೆ ನಿಮಗೆ ಬೇಗ ನಿದ್ರೆ  ಆವರಿಸುತ್ತದೆ.

 

 

ಸಾಧ್ಯವಾದಲ್ಲಿ ಮಲಗುವ ಮುನ್ನ ವಿಷ್ಣು ಮಂತ್ರವನ್ನು ಜಪಿಸಿಕೊಳ್ಳಿ ,ಇಲ್ಲವೇ ರಾಮ ಮಂತ್ರವನ್ನು ಜಪಿಸಿಕೊಳ್ಳಿ. ನಿಮ್ಮ ಇಷ್ಟ ದೇವರ ಮಂತ್ರವನ್ನು ಮನನ ಮಾಡಿಕೊಂಡು ಜಪಿಸಿಕೊಂಡು ಮಲಗಿದರೆ  ಸುಖಮಯ ನಿದ್ರೆಯಲ್ಲಿ ಒಳ್ಳೊಳ್ಳೆ  ಕನಸುಗಳು ನಿಮಗೆ ಬರುತ್ತವೆ. ಹಾಗೆಯೇ  ಅದೃಷ್ಟ ಕೂಡ ನಿಮ್ಮೊಂದಿಗೆ ನಿಮ್ಮನ್ನೇ ಹಿಂಬಾಲಿಸಿಕೊಂಡು ಬಂದು ಬಿಡುತ್ತೆ. ಹೀಗೆ ಸುಲಭವಾದ ಅನೇಕಾನೇಕ ಮಾರ್ಗಗಳನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದಾರೆ ಆ ಮಾರ್ಗದಲ್ಲಿ ನಾವು ನಡೆದರೆ ನಮ್ಮ ಜೀವನ ಯಾವುದೇ ಒತ್ತಡಕ್ಕೆ ಸಿಲುಕುವುದಿಲ್ಲ . ಯಾವ ರೀತಿಯ ತೊಂದರೆಗಳು ಬರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top