ರಾಜಕೀಯ

ರಾಜಾಜಿನಗರ ಚುನಾವಣಾ ಕ್ಷೇತ್ರ ಆರಿಸಿಕೊಂಡ್ರ ಸಾ.ರಾ ಗೋವಿಂದು

ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12 ರಂದು ರಾಜ್ಯಾದ್ಯಂತ ನಡೆಯಲಿದೆ. ಮೇ 15 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ರಣತಂತ್ರ ಹೆಣೆಯುತ್ತಿವೆ. ಬಿರುಸಿನ ಪ್ರಚಾರ ದಲ್ಲಿ ತೊಡಗಿವೆ. ಶತಾಯ ಗತಾಯ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಮೂರೂ ಪಕ್ಷಗಳೂ ಎಲ್ಲಿಲ್ಲದ ಕಸರತ್ತು ಮಾಡುತ್ತೀವೆ.

 

 

ಸ್ಯಾಂಡಲ್ ವುಡ್ ಚಿತ್ರರಂಗದ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಸದ್ಯ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಚ್ಛೆ ಸಾ.ರಾ.ಗೋವಿಂದು ಅವರಿಗೆ ಇದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ.

 

 

ಮೂಲಗಳ ಪ್ರಕಾರ ಸಾ.ರಾ.ಗೋವಿಂದು ಅವರಿಗೆ ಎರಡು ಪ್ರಮುಖ ಪಕ್ಷಗಳಿಂದ ಆಫರ್ ಬಂದಿದೆಯಂತೆ ಆದರೆ ಸಾ.ರಾ.ಗೋವಿಂದು ಅಖಾಡಕ್ಕೆ ಇಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ ಕುಮಾರ್ ಪ್ರಭಲ ಅಭ್ಯರ್ಥಿ ಆಗಿದ್ದು ಇವರನ್ನು ಸೋಲಿಸಲು ಇತರ ಪಕ್ಷಗಳು ಸಾ.ರಾ.ಗೋವಿಂದು ಅವರಿಗೆ ಟಿಕೆಟ್ ಕೊಡುವ ಸಂಭವ ಇದೆ ಎನ್ನಲಾಗಿದೆ.

 

 

ಕನ್ನಡ ಪರ ಚಳುವಳಿಯಲ್ಲಿ ಭಾಗವಹಿಸುವ ಸಾ.ರಾ.ಗೋವಿಂದು ಕನ್ನಡಕ್ಕಾಗಿ ಬೀದಿಗಿಳಿದು ಅನೇಕ ಬಾರಿ ಹೋರಾಟ ನಡೆಸಿದವರು. ಸಾ.ರಾ.ಗೋವಿಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅರ್ಹ ಅಭ್ಯರ್ಥಿ ಎಂಬುದು ಹಲವರ ಅಭಿಪ್ರಾಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top