ಸಿನಿಮಾ

ಬಿಪಾಶಾ ಬಸರಿನಾ ?

ಎರಡು ವರ್ಷಗಳ ಹಿಂದೆ 2016ರಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ತನ್ನ ಪ್ರಿಯತಮ ಕರಣ್ ಸಿಂಗ್ ಗ್ರೋವರ್ ಜೊತೆಗೆ ಮದುವೆ ಆಗಿದ್ದರು. ಇತ್ತೀಚಿಗೆ ಮುಂಬೈನ ಆಸ್ಪತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಪಾಶಾ ಬಸು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬಗ್ಗೆ ಪ್ರತಿಕ್ರಿಯಿಸಿದ ಬಿಪಾಶಾ ಬಸು ಮಾಧ್ಯಮಗಳ ವಕ್ತಾರ ಈ ಗಾಳಿ ಸುದ್ದಿ ತಳ್ಳಿಹಾಕಿದ್ದರು.

 

 

ಇದೀಗ ಖುದ್ದು ಬಿಪಾಶಾ ಬಸು ರವರೆ ತಮ್ಮ ಕುರಿತು ಕೇಳಿ ಬಂದಿದ್ದ ಗಾಳಿ ಸುದ್ದಿಗೆ ಉತ್ತರ ನೀಡಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಅವರು, ಮಗುವನ್ನು ಪಡೆಯುವುದು ಒಂದು ಸುಂದರ ಅನುಭವ ಎಂದು ನನಗೆ ಗೊತ್ತಿದೆ. ಆದರೆ, ”ನೀವು ಮದುವೆಯಾಗಿದ್ದೀರಾ ಇನ್ನು ಮಗು ಪಡೆದಿಲ್ಲ” ಎಂದು ಕೇಳುವುದು ತುಂಬ ಹಾಸ್ಯಾಸ್ಪದ. ಇದು ಮಹಿಳೆಯರಿಗೆ ತುಂಬಾ ದುಃಖಕರ ಸಂಗತಿ ಕೂಡ ಎಂದು ಬಿಪಾಶಾ ಅಭಿಪ್ರಾಯ ಪಟ್ಟಿದ್ದಾರೆ.

 

 

ಇತ್ತೀಚಿಗೆ ಗಂಡನ ಜೊತೆಗೆ ಬಿಪಾಶಾ ಕಾರಿನಲ್ಲಿ ಹೋಗುತ್ತಿರಬೇಕಾದರೆ ಕೈಯಲ್ಲಿದ್ದ ಬ್ಯಾಗನ್ನು ಮಡಿಲಲ್ಲಿ ಇಟ್ಟುಕೊಂಡಿದ್ದರು. ಬ್ಯಾಗಿನ ಬಣ್ಣ, ತಾನು ತೊಟ್ಟಿದ್ದ ಬಟ್ಟೆ ಬಣ್ಣ ಒಂದೇ ಆಗಿದ್ದ ಕಾರಣ ಅಲ್ಲಿದ್ದ ಛಾಯಾಗ್ರಾಹಕರಿಗೆ ಬ್ಯಾಗ್ ಕಾಣಿಸಿರಲಿಲ್ಲ. ಹಾಗಾಗಿ ಬಿಪಾಶಾ ಗರ್ಭಿಣಿ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈಗ ಇದು ಸುಳ್ಳೆಂದು ತಿಳಿದು ಬಂದಿದೆ.

 

 

ಬಿಪಾಶಾ ಅವರು ಇನ್ನೆರಡು ವರ್ಷಗಳ ನಂತರ ಮಗು ಪಡೆಯುವ ಪ್ಲಾನ್ ಮಾಡಿದ್ದೇನೆ ಎಂದು ಹೇಳಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top