ಸಿನಿಮಾ

ಮದುವೆಗೆ ಸಕ್ಕತ್ತಾಗಿ ರೆಡಿ ಆದ ರಾಗಿಣಿ

ವೀರ ಮದಕರಿ ಚಿತ್ರದಲ್ಲಿ ಕಿಚ್ಚಾ ಸುದೀಪ್ ಜೋಡಿಯಾಗಿ ಬಂದ ಘಳಿಗೆಯಲ್ಲಿ ಚಿಗರೆಯಂತಿದ್ದ ನಟಿ ರಾಗಿಣಿ. ಆ ನಂತರದಲ್ಲಿ ಹೀರೋ ಕಂ ಹೀರೋಯಿನ್ನಾಗಿ, ಮಾಸ್ ಲುಕ್ಕಲ್ಲಿ ಕಂಗೊಳಿಸುತ್ತಿರೋ ರಾಗಿಣಿಗೆ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಿಲ್ಲ. ಅಭಿಮಾನಿಗಳೆಲ್ಲ ರಾಗಿಣಿಯ ಖಾಸಗಿ ಬದುಕಿನ ಬಗ್ಗೆ ಆಕೆಯ ಚಿತ್ರಗಳಿಗಿಂತಲೂ ಹೆಚ್ಚಾಗಿ ಆಸಕ್ತಿ ಹೊಂದಿದ್ದಾರೆ.

 

 

ಸ್ಯಾಂಡಲ್ ವುಡ್ ನಟಿ ರಾಗಿ ಮದುವೆಯಾಗುತ್ತಿದ್ದಾರಾ? ಹೀಗೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಕನ್ನಡ ಚಿತ್ರ ರಂಗದಲ್ಲಿ ಅನೇಕರು ಇತ್ತೀಚಿಗೆ ಮದುವೆ ಆಗಿದ್ದರು ಈಗ ರಾಗಿಣಿ ಮಾಡುವೆ ಅಗಲಿದ್ದಾರೆ ಎನ್ನುವ ಅಭಿಮಾನಿ ಬಳಗದಲ್ಲಿ ಸುದ್ದಿ ಹರಿದಾಡುತ್ತಿದೆ.

 

 

ಈ ಚರ್ಚೆ ಶುರುವಾಗಿದ್ದು ತುಪ್ಪದ ಬೆಡಗಿ ರಾಗಿಣಿ ಅವರು ಮದುಮಗಳಂತೆ ಸಿಂಗಾರ ಮಾಡಿಕೊಂಡು, ಕೈ ತುಂಬಾ ಮೆಹಂದಿ ಹಚ್ಚಿಕೊಂಡು ಸಂಭ್ರಮಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್​ ಆದ ಬಳಿಕ. ಆದರೆ ರಾಗಿಣಿ ಮದುವೆ ಆಗುತ್ತಿಲ್ಲ ಬದಲಾಗಿ ರಾಗಿಣಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ಸಿಂಗಾರ ಮಾಡಿಕೊಂಡು, ಕೈ ತುಂಬಾ ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿದ ಚಿತ್ರಗಳವು.

 

 

ತಮ್ಮ ಬಿಡುವಿಲ್ಲದ ಶೂಟಿಂಗ್ ಕೆಲಸದಲ್ಲೂ ಗೆಳೆಯನ ಮದುವೆಗಾಗಿ ಹಿಮಾಚಲ್​ ಪ್ರದೇಶ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಲೇ ರಾಗಿಣಿ ಕುಟುಂಬ ಹಿಮಾಚಲ್​ಗೆ ಪ್ರಯಾಣ ಬೆಳೆಸಿದ್ದು ಸ್ನೇಹಿತನ ಮದುವೆಗೆ ಇಡೀ ಕುಟುಂಬ ಸಮೇತ ಭಾಗಿಯಾಗಿ ಸಂಭ್ರಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top