ದೇವರು

ಬೇರೆಯವರ ಕೆಟ್ಟ ಕಣ್ಣಿನ ದೃಷ್ಟಿ ನಮ್ಮ ಮೇಲೆ ಬೀಳದ ಹಾಗೆ ಕಾಪಾಡಿಕೊಳ್ಳಲು ಹೀಗೆ ಮಾಡಿ

ನಮ್ಮನ್ನು ನಾವು ಬೇರೆಯವರ ಕೆಟ್ಟ ಕಣ್ಣಿನ ದೃಷ್ಟಿಯಿಂದ ರಕ್ಷಿಸಿಕೊಳ್ಳುವುದು

ಹೇಗೆ ? ನಮ್ಮ ಮೇಲೆ ಬೀಳದ ಹಾಗೆ ಕಾಪಾಡಿಕೊಳ್ಳುವುದು ಹೇಗೆ ?

 

 

ದೃಷ್ಟಿ ಎಂದರೆ ಬೇರೆಯವರ ಕೆಟ್ಟ ಕಣ್ಣಿನ ದೃಷ್ಟಿ ನಮ್ಮ ಮೇಲೆ ಬಿದ್ದರೆ ಅದಕ್ಕೆ ದೃಷ್ಟಿ ಆಗಿದೆ.ಯಾವುದೋ ?ಯಾರದೋ? ಕೆಟ್ಟ ಕಣ್ಣು ಬಿದ್ದಿದೆ ದೃಷ್ಟಿ ತೆಗಿಬೇಕು ಅಂತ ಹೇಳ್ತಾರೆ ?ಇಂತಹ ದೃಷ್ಟಿ ಬಿದ್ದಾಗ ಮನುಷ್ಯ ಅಥವಾ ಪ್ರಾಣಿ ,ಪಕ್ಷಿಯೇ ಆಗಲಿ ಮಾನಸಿಕವಾಗಿಯೂ ಮತ್ತು ದೈಹಿಕವಾಗಿಯೂ ಕುಗ್ಗಿ ಹೋಗುತ್ತಾನೆ.ಮುಖದಲ್ಲಿ ತೇಜಸ್ಸು,ಚೈತನ್ಯ ಎರಡೂ ಇರುವುದಿಲ್ಲ.ಆದ್ದರಿಂದ ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ಅವಶ್ಯವಾಗಿ ತೆಗೆಯಬೇಕು.ಬನ್ನಿ ದೃಷ್ಟಿಯ ಬಗ್ಗೆ ತಿಳಿಯೋಣ.ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ನೋಡೋಣ.

 

 

ದೃಷ್ಟಿಯಲ್ಲಿ ನಾಲ್ಕು ವಿಧವಾಗಿ ಇರುತ್ತವೆ.

1.ಕಣ್ಣಿನ ದೃಷ್ಟಿ.
2.ನರ ದೋಷ.
3.ನರ ಪೀಡೆ.
4.ನರ ಶಾಪ.

ಕಣ್ಣಿನ ದೃಷ್ಟಿ ತಗಲುವುದರಿಂದ ನಮ್ಮ ಅಭಿವೃದ್ಧಿ ದಿನೇ ದಿನೇ ಕುಂಠಿತವಾಗುತ್ತದೆ ಕಡಿಮೆಯಾಗುತ್ತಾ ಹೋಗುತ್ತದೆ.ಹಾಗೆಯೇ ನಮ್ಮ ಕುಟುಂಬದವರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅವುಗಳಾದ ತಲೆನೋವು,ತಲೆ ಸುತ್ತು,ವಾಂತಿ,ಹೊಟ್ಟೆ ನೋವು.ಊಟ,ತಿಂಡಿ ಏನು ತಿನ್ನದೇ ಇರುವುದು.ಮಂಕಾಗಿ ಕೂರುವುದು.ನಿಶ್ಶಕ್ತಿ ಇವೆಲ್ಲಾ ದೃಷ್ಟಿ ದೋಷದಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳು.ಇಂತಹ ದೃಷ್ಟಿಯನ್ನು ನಕಾರಾತ್ಮಕ ಶಕ್ತಿ ಎಂದು ಸಹ ಕರೆಯುತ್ತಾರೆ.

 

 

ನಾಲ್ಕು ಜನರ ಮದ್ಯೆ ಹೋಗುವಾಗ ಈ ದೃಷ್ಟಿಯು ತಗಲುವುದನ್ನು ಪ್ರಾರಂಭದಲ್ಲಿಯೇ ನಿಲ್ಲಿಸಬೇಕು ಅಂದರೆ ಏನು ಮಾಡಬೇಕು ? ಎಂದು ಈಗ ನಾವು ತಿಳಿಯೋಣ.
ದೃಷ್ಟಿ ತಗಲಬಾರದು ಎಂದರೆ ಹಣೆಯ ಮೇಲೆ ಕುಂಕುಮ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಪೂಜಿಸಿ ತಂದ ಸಿಂಧೂರವನ್ನು ಪ್ರತಿದಿನ ಹಣೆಯ ಮೇಲೆ ಧರಿಸಬೇಕು.

ನರಸಿಂಹ ಸ್ವಾಮಿಯ ಭಕ್ತರಿಗೆ ಖಂಡಿತವಾಗಿಯೂ ನರದೃಷ್ಟಿ, ನರಪೀಡೆ ಖಂಡಿತವಾಗಿಯೂ ತಗಲುವುದಿಲ್ಲ.ಹಾಗೆ ನರಸಿಂಹ ಸ್ವಾಮಿ ಪ್ರತಿದಿನ ಭಕ್ತಿ, ಶ್ರದ್ಧೆಯಿಂದ ಪೂಜೆ,ಪ್ರಾರ್ಥನೆ ಮತ್ತು ದೀಪಾರಾಧನೆ ಮಾಡುವುದರಿಂದ ನರ ದೃಷ್ಟಿ ತಗಲುವುದಿಲ್ಲ.

ಗಂಡಸರು ಕೆಂಪು ಬಣ್ಣದ ದಾರವನ್ನು (ನೂಲನ್ನು) ಕೈಗೆ ಕಟ್ಟಿ ಕೊಳ್ಳುವುದರಿಂದ ನರದೃಷ್ಟಿ ತಗಲುವುದಿಲ್ಲ.

ಚಿಕ್ಕ ಮಕ್ಕಳಿಗೆ ಕಪ್ಪು ಬಣ್ಣದ ನೂಲನ್ನು ಕೈಗೆ ಮತ್ತು ಕಾಲಿಗೆ ಕಟ್ಟುವುದರಿಂದ ಕೆಟ್ಟ ದೃಷ್ಟಿ ತಗಲುವುದಿಲ್ಲ.

ನರಸಿಂಹ ಸ್ವಾಮಿಯ ಪ್ರತಿಮೆ ಇರುವ ಉಂಗುರವನ್ನು ಹೆಬ್ಬೆರಳಿಗೆ ಧರಿಸಿದರೆ ನರ ದೃಷ್ಟಿಯ ಪರಿಣಾಮ ಅಷ್ಟಾಗಿ ಬರುವುದಿಲ್ಲ ,ಕಡಿಮೆಯಾಗುತ್ತದೆ.

ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಚೆನ್ನಾಗಿ ಬೆಳೆಸಿದರೆ, ಒಣಗದಂತೆ ನೋಡಿಕೊಂಡರೆ ನರದೃಷ್ಟಿ ಮನೆಯ ಮೇಲೆ ಮತ್ತು ಮನೆಯಲ್ಲಿ ವಾಸಿಸುವ ಯಾವ ಮನುಷ್ಯ,ಪ್ರಾಣಿಗೂ ಕೆಟ್ಟ ಶಕ್ತಿಯ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತದೆ.

ಕಣ್ಣಿಗೆ ಹಚ್ಚುವ ಕಪ್ಪು ಕಾಡಿಗೆ,ನವಿಲನ ನೀಲಿ ಬಣ್ಣ,ಪಾರಿವಾಳದ ಕೊರಳ ನೀಲಿ ಮಿಶ್ರಿತ ಕಂದು ಬಣ್ಣ,ಆನೆಯ ಮೈ ಬಣ್ಣ ,ಕೈ ಬೆರಳಿಗೆ ಧರಿಸುವ ಕೆಲವು ಹರಳಿನ ಉಂಗುರಗಳು ದೃಷ್ಟಿ ದೋಷ ತಗುಲಿಸುವ ದುಷ್ಟ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತವೆ.

 

 

ದೃಷ್ಟಿ ದೋಷ ಇರುವವರು ಅದನ್ನು ನಿವಾರಿಸಲು ಒಂದು ಹಿಡಿ ಉಪ್ಪು ಮತ್ತು ಒಂದೆರಡು ಒಣ ಮೆಣಸಿನಕಾಯಿಯ ಜೊತೆಗೆ ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು.
ದುಷ್ಟ ಶಕ್ತಿಗಳ ನಿವಾರಣೆಗೆ ಒಂದು ಪಾತ್ರೆಯಲ್ಲಿ ಉಪ್ಪು ಹಾಕಿ,ಕಾಲನ್ನು ಹತ್ತು ನಿಮಿಷಗಳ ಕಾಲ ಅದರಲ್ಲಿ ಇಟ್ಟರೆ ಕೆಟ್ಟ ಕಣ್ಣಿನ ದೃಷ್ಟಿ ನಿವಾರಣೆಯಾಗುತ್ತದೆ.
ಕೊನೆಯದಾಗಿ ಅಂಚಿಕಡ್ಡಿ ಅಂದರೆ ಪೊರಕೆಯನ್ನು ಮಾಡಲು ಬಳಸುವ ಕಡ್ಡಿಗಳನ್ನು ಅಂದರೆ 9 ಕಡ್ಡಿಗಳನ್ನು ತೆಗೆದುಕೊಂಡು 9 ಬಾರಿ ನಿವಾಳಿಸಬೇಕು ಹೇಗೆಂದರೆ ಮೇಲಿನಿಂದ ಕೆಳಗೆ ಮೂರು ಬಾರಿ ನಿವಾಳಿಸಿ, ಎಡಬದಿಯಿಂದ ಮೂರು ಸುತ್ತು ನಿವಾಳಿಸಿ,ಮತ್ತು ಬಲಬದಿಯಿಂದ ಮೂರು ಸುತ್ತು ನಿವಾಳಿಸಿ ,ಹೀಗೆ ಒಟ್ಟಿಗೆ 9 ಸುತ್ತು ನಿವಾಳಿಸಿ ದೃಷ್ಟಿ ತೆಗೆದು ಮನೆಯ ಹೊರಗೆ ತೆಗೆದುಕೊಂಡು ಒಂದು ಮೂಲೆಯಲ್ಲಿ ನಿಲ್ಲಿಸಿ ಬೆಂಕಿ ಹಚ್ಚಬೇಕು.ಜೋರಾಗಿ ಸದ್ದು ಮಾಡುತ್ತಾ ಸುಟ್ಟು ಹೋದರೆ ಜಾಸ್ತಿ ದೃಷ್ಟಿ ತಗುಲಿದೆ ಎಂದರ್ಥ.ಇದನ್ನು ಮನೆಯವರ ಕೈಯಿಂದ ಮಾಡಿಸುವುದಕ್ಕಿಂತ ಪಕ್ಕದ ಮನೆಯವರನ್ನು ಕರೆದು ಮಾಡಿಸಿದರೆ ಉತ್ತಮ ದೃಷ್ಟಿ ದೋಷ ಬೇಗ ನಿವಾರಣೆಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top