ದೇವರು

ಚರ್ಮ ರೋಗ, ಸಾಲದ ಸಮಸ್ಯೆಯಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಹೋಗಿ ಕುಡುಗೋಲನ್ನು ಕಾಣಿಕೆಯಾಗಿ ಅರ್ಪಿಸಿ ಬನ್ನಿ ಸಾಕು ಎಲ್ಲಾ ಸರಿ ಹೋಗುತ್ತೆ

ಈ ದೇವಸ್ಥಾನಕ್ಕೆ ಹೋಗಿ ಕುಡುಗೋಲನ್ನು ಕಾಣಿಕೆಯಾಗಿ ಅರ್ಪಿಸಿ ಬನ್ನಿ ಸಾಕು ಎಲ್ಲಾ ಸರಿ ಹೋಗುತ್ತೆ

 

ಭಾರತದಲ್ಲಿ ಮಾತ್ರ ವಿಚಿತ್ರ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಒಳಗೊಂಡಿರುವ ಅನೇಕ ದೇವಾಲಯಗಳನ್ನು ನಾವು ಕಾಣಬಹುದು ಒಂದು ದೇವಾಲಯದಲ್ಲಿ ಇಲ್ಲಿಗೆ ಹಾಲನ್ನು ಅರ್ಪಿಸಿ ಅದನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ ಇನ್ನೊಂದು ಕಡೆ ಬೈಕ್ ಅನ್ನು ದೇವಸ್ಥಾನ ಎಂದು ಮಾಡಿ ಪೂಜೆ ಮಾಡುತ್ತಾರೆ ಮತ್ತೊಂದು ಕಡೆ ವೀಸಾಗಾಗಿ ದೇವರಿಗೆ ಪೂಜೆ ಮಾಡುತ್ತಾರೆ ಹೀಗೆ ಭಾರತೀಯರಿಗೆ ಭಕ್ತಿ ಭಾವ ಬಹಳ ಮುಖ್ಯ.

 

 

ದೇವರಲ್ಲಿ ನಂಬಿಕೆ ಕೂಡ ಅಪಾರ ಇಲ್ಲೊಂದು ದೇವಾಲಯವಿದೆ ಇಲ್ಲಿ ಸಾಮಾನ್ಯವಾಗಿ ದೇವಾಲಯಗಳಿಗೆ ಹೋದರೆ ಹಣ್ಣು ಕಾಯಿ, ನೈವೇದ್ಯ ,ಕಾಣಿಕೆ, ಹುಂಡಿ, ಹಾರ ಇತರ ಸಾಮಾನುಗಳನ್ನು ದೇವರಿಗೆ ಅರ್ಪಿಸಿ ಬರುತ್ತಾರೆ ಆದರೆ ಈ ದೇವಾಲಯದಲ್ಲಿ ಮನಸ್ಸಿನಲ್ಲಿ ಅಂದುಕೊಂಡ ಆಸೆಗಳು ಹಾಗೂ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗಬೇಕೆಂದರೆ ಕುಡುಗೋಲನ್ನು ಅರ್ಪಿಸಿ ಬರುತ್ತಾರೆ.

 

 

ಬಹಳ ಹಿಂದೆ ಕೃಷಿಕರು ತಮ್ಮ ಜಾನುವಾರುಗಳು ಹಾಗೂ ನೆಲ ಜಲವನ್ನು ರಕ್ಷಿಸಲೆಂದು ಈ ದೇವರಿಗೆ ಮೊರೆ ಹೋಗಿ ಕುಡುಗೋಲನ್ನು ಅರ್ಪಿಸಿ ಬರುತ್ತಿದ್ದರೂ ಸಂಪ್ರದಾಯ ಹಾಗೇ ಮುಂದುವರಿದುಕೊಂಡು ಬಂದು ಇಂದಿನ ಕಾಲದಲ್ಲೂ ಸಹ ಹಳ್ಳಿಗರು ಈ ದೇವರನ್ನು ಮಹಾಮಹಿಮ ಎಂದು ತಮ್ಮ ಆಸೆಗಳನ್ನು ನೆರವೇರಿಸುತ್ತಾನೆ ಎಂದು ಭಾವಿಸಿ ಕುಡುಗೋಲನ್ನು ಅರ್ಪಿಸುತ್ತಾರೆ .

ಹಾಗಾದರೆ ಈ ದೇವಾಲಯ ಇರುವುದಾದರೂ ಎಲ್ಲಿ ?

 

 

ಈ ದೇವಾಲಯ ಇರುವುದು ಉತ್ತರ ಖಂಡದ ಪತ್ತೇಪುರ ಎಂಬ ಗ್ರಾಮದಲ್ಲಿ ಇದರ ಹೆಸರು ಗೋಪಾಲ್ ಬೆಸ್ತ ಎಂದು

ಇಲ್ಲಿನ ಗ್ರಾಮಸ್ಥರ ಪ್ರಕಾರ ಅನೇಕ ಮಾರಣಾಂತಿಕ ರೋಗಗಳು ಹಾಗೂ ಚರ್ಮದ ಕಾಯಿಲೆಗಳನ್ನು, ಸಾಲ ಸೋಲದ ಹೊರೆಯನ್ನು ಈ ದೇವರು ಆದಷ್ಟು ಬೇಗ ಗುಣಪಡಿಸುತ್ತಾನೆ ಹಾಗಾದರೆ ಇನ್ನೇಕೆ ತಡ ನೀವು ಒಮ್ಮೆ ಜೀವಮಾನದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top