ಜೀವನ ಕ್ರಮ

ನೀವು ಇಷ್ಟಪಡೋ ಹುಡ್ಗಿಯಲ್ಲಿ ಈ 7 ಲಕ್ಷಣಗಳು ಇದ್ರೆ ಹಿಂದೆ ಮುಂದೆ ನೋಡದೆ ,ಮಿಸ್ ಮಾಡ್ಕೊಳ್ದೆ ಕಣ್ ಮುಚ್ಕೊಂಡು ಮದ್ವೆ ಮಾಡ್ಕೊಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಮ್ಮ ಸಂಗಾತಿಯಲ್ಲಿ ಈ 7 ಲಕ್ಷಣಗಳು ಕಂಡು ಬಂದಲ್ಲಿ, ಕಣ್ ಮುಚ್ಕೊಂಡು ಮದ್ವೆ

ಮಾಡ್ಕೊಳಿ

 

ಪ್ರೀತಿ ಎಂದರೆ ಹಾಗೆ, ಹೇಳಿ ಕೇಳಿ ಬರೋದಿಲ್ಲ, ಯಾರಿಗೂ ಜಗ್ಗೋದಿಲ್ಲ, ಹಿಡಿತಕ್ಕೆ ಸಿಗದ ಕುದುರೆಯ ಹಾಗೆ ಓಡ್ತಾ ಇರುತ್ತೆ. ಪ್ರೀತಿ ಯಾವಾಗ, ಯಾರ ಮೇಲೆ ಏಕೆ ಆಗುತ್ತೆ ಅಂತ ಖಂಡಿತ ತಿಳಿಯೋದಿಲ್ಲ.

 

ಕೆಲವೊಮ್ಮೆ ಕೆಲವರಲ್ಲಿರುವ ಒಳ್ಳೆಯ ಗುಣಗಳನ್ನು ಕಂಡು ಪ್ರೀತಿ ಹುಟ್ಟಬಹುದು, ಇನ್ನು ಕೆಲವೊಮ್ಮೆ ಅವರ ಸೌಂದರ್ಯಕ್ಕೆ ಮನಸೋತು ಅವರ ಕಡೆ ಮನಸ್ಸು ವಾಲಬಹುದು. ಒಟ್ಟಿನಲ್ಲಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ, ಪ್ರೇಮ, ಕ್ರಶ್‌ಗಳು ಆಗದೆ ಇರೋದಕ್ಕೆ ಚಾನ್ಸ್ ಇಲ್ಲ.

 

 

ಹಾಗಾದ್ರೆ, ಕೇವಲ ಮಾನಸಿಕವಾಗಿ ಎರಡು ಜೀವಗಳು ಒಂದಾಗಿ ಬಿಟ್ರೆ ಅವರ ಸಂಸಾರ ಸರಿ ಇರುತ್ತೆ ಅಂತ ಖಂಡಿತ ಹೇಳಕ್ ಆಗೋದಿಲ್ಲ ಕಣ್ರೀ… ಅದಕ್ಕೆ ಪೂರಕವಾಗಿ ದೈಹಿಕ ಸೌಂದರ್ಯ ಇದ್ರೆ ಮಾತ್ರ ಪೂರ್ಣಪ್ರಮಾಣದ ಸಂಸಾರ ಸುಖಮಯವಾಗಿರುತ್ತೆ, ಎನ್ನುವುದು ಎಲ್ಲರೂ ಒಪ್ಪಿಕೊಳ್ಳದ ಸಂಗತಿ.

 

ಇಷ್ಟೆಲ್ಲಾ ಪೀಠಿಕೆ ಯಾಕ್ ಹಾಕ್ತಾ ಇದ್ದೀನಿ ಗೊತ್ತಾ ? ಎಲ್ಲರೂ ಮಾನಸಿಕ ಸೌಂದರ್ಯದ ಬಗ್ಗೆ ಉದ್ ಉದ್ದ ಭಾಷಣ ಬಿಡ್ತಾ ಇರ್ತಾರೆ, ಆದರೆ ಯಾರೊಬ್ಬರೂ ದೈಹಿಕ ಸೌಂದರ್ಯದ ಬಗ್ಗೆ ಹೆಚ್ಚಿಗೆ ಹೇಳೋದೇ ಇಲ್ಲ. ಇವತ್ತು ನನ್ ನಿಮಗೆ ತಿಳಿಸೋದಕ್ಕೆ ಹೊರಟಿರೋ ವಿಚಾರ ಖಂಡಿತ ನಿಮ್ಗೆ ಉಪಯೋಗಕ್ಕೆ ಬರುತ್ತೆ. ಮುಂದೆ ಓದಿ.

 

 

ಪ್ರಾಚೀನ ಭಾರತದ ಪುರಾಣಗಳ ಪಠ್ಯದಲ್ಲಿ, ಸರಿ ಸುಮಾರು 7 ದೈಹಿಕ ಲಕ್ಷಣಗಳ ಬಗ್ಗೆ ಉಲ್ಲೇಖವಿದ್ದು, ಈ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ನಿಮ್ಮ ಜೀವನದ ಸಂಗಾತಿಯನ್ನಾಗಿ ಆರಿಸಿಕೊಳ್ಳಿ ಎಂದು ಬರೆಯಲಾಗಿದೆ. ಈ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

 

1. ಹಣೆ ಮೇಲಿನ ನೆರಿಗೆಗಳು :

 

ಹೌದು, ಶಿವನ ಪ್ರೀತಿಯ ಪುತ್ರ ಕಾರ್ತಿಕೇಯ ತನ್ನ ‘ಸಮುಂದ್ರಾ ಶಾಸ್ತ್ರ’ದಲ್ಲಿ ಹೇಳಿರುವಂತೆ, ಹಣೆ ಮೇಲೆ ನೆರಿಗೆಗಳನ್ನು ಹೊಂದಿರುವ ವ್ಯಕ್ತಿಯು ಅತ್ಯಂತ ಅದೃಷ್ಟಶಾಲಿಯಾಗಿರಲಿದ್ದು, ಹೆಚ್ಚು ಸಂತೋಷದಿಂದ ಮತ್ತು ಐಷಾರಾಮಿ ಜೀವನ ಸಾಗಿಸುವರು.

 

2. ಮೈಬಣ್ಣ

 

ನೀವು ಸಂಗಾತಿಯನ್ನಾಗಿ ಆರಿಸುವ ಹುಡುಗಿಯ ಮೈಬಣ್ಣಕ್ಕೆ ಯಾವುದೇ ಬೇಧ ಇಲ್ಲ ಹುಡುಗಿ ಮಹಾಲಕ್ಷ್ಮಿ ತರ ಲಕ್ಷಣವಾಗಿದ್ರೆ ಸಾಕು , ಅಂತಹ ಹೆಣ್ಣುಮಗಳು ಖಂಡಿತ ನಿಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರು ತಂದು ಕೊಡುವಳಂತೆ.

 

3. ಹಲ್ಲು

 

ನಿಮ್ಮ ಜೀವನದ ಅರ್ಧ ಭಾಗ ಎನ್ನಿಸಿಕೊಳ್ಳುವ ವ್ಯಕ್ತಿಯ ಹಲ್ಲುಗಳು ಬಿಳುಪಿನಿಂದ ಶುಭ್ರವಾಗಿದ್ದರೆ ಅಂತಹ ವ್ಯಕ್ತಿಯ ಹೆಚ್ಚು ಸುಖವನ್ನು ತರುವರಂತೆ.

 

4. ಮೂಗು, ಕಿವಿ ಮತ್ತು ಉಬ್ಬುಗಳು

 

ನಿಮ್ಮ ಹುಡುಗಿಯು ನೇರ ಮೂಗು, ಉದ್ದನೆಯ ಕಿವಿ ಮತ್ತು ತಿದ್ದಿದ ಉಬ್ಬುಗಳನ್ನು ಹೊಂದಿದ್ದರ ಅಂತಹ ಮಹಿಳೆ ನಿಮ್ಮಗೆ ಜೀವನ ಪೂರ್ತಿ ಅದೃಷ್ಟ ಒಲಿಯಲಿದೆ.

 

5. ಹಿಮ್ಮಡಿ

 

ಯಾವ ಹುಡುಗಿ ತನ್ನ ಕಾಲಿನ ಹಿಮ್ಮಡಿಯಲ್ಲಿ ತಿಳಿ ಕೆಂಪು ಬಣ್ಣ ಹೊಂದಿರುವಳೋ ಆಕೆ ನಿಮ್ಮ ಮನೆ ಲಕ್ಷಿಯಾಗುವುದಂತೂ ಖಂಡಿತ.

 

6. ಸ್ವಭಾವ

 

ನೀವು ಮದುವೆಯಾಗಲಿರುವ ವ್ಯಕ್ತಿಯ ತಂದೆ ತಾಯಿ ಹೆಚ್ಚು ಮೃಧು ಸ್ವಭಾವ ಹೊಂದಿದ್ದಾರೆ ಅಂತಹ ಮನೆಯ ನೆರವಿನಿಂದ ನಿಮ್ಮ ಬಾಳು ಹಸನಾಗಲಿದೆ.

 

7. ಕುತ್ತಿಗೆಯ ನೆರಿಗೆ

 

ನಿಮ್ಮ ಸಂಗಾತಿಯ ಕುತ್ತಿಗೆಯ ಬಳಿ ನೆರಿಗೆ ಬಂದರೆ ಅಂತಹ ವ್ಯಕ್ತಿಯು ನಿಮ್ಮಗೆ ಹೆಚ್ಚಿನ ಶ್ರೇಯಸ್ಸು ತಂದು ಕೊಡಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top