ಭವಿಷ್ಯ

ರಾಶಿಗೆ ಅನುಗುಣವಾಗಿ ಈ ರಾಶಿಗಳ ಜನರು ತಮ್ಮ ಸ್ನೇಹಿತರಿಗೆ ಒಳ್ಳೆಯ ಸ್ನೇಹಿತರಾಗಿರುತ್ತಾರಾ ಅಥವಾ ಬೆನ್ನ ಹಿಂದೆ ಚೂರಿ ಹಾಕ್ತಾರಾ ತಿಳಿಯಿರಿ

ಪ್ರತಿಯೊಂದು ರಾಶಿ ಚಿಹ್ನೆಯು ತನ್ನದೇ ಆದ ಗಮನಾರ್ಹ ಲಕ್ಷಣಗಳನ್ನು ಹೊಂದಿದೆ. ಈ ಲಕ್ಷಣಗಳು ನಮಗೆ ಉತ್ತಮ ರೀತಿಯಲ್ಲಿ ನಾವೇ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ನಿಮ್ಮ ರಾಶಿಚಕ್ರದ ಗುಣಲಕ್ಷಣಗಳು ನಿಮ್ಮ ವ್ಯಕ್ತಿತ್ವದಲ್ಲಿ ಆಳವಾಗಿ ಬೇರೂರಿದೆ ಮತ್ತು ಒಬ್ಬ ವ್ಯಕ್ತಿ ಸ್ನೇಹಿತರಾಗಿ ಹೇಗೆ ಪರಿಣಾಮ ಬೀರುತ್ತಾನೆ ಎಂಬುದನ್ನು ಸಹ ನಾವು ರಾಶಿ ಚಿಹ್ನೆಯಿಂದ ತಿಳಿಯಬಹುದು

 

ಮೇಷ (Mesha)

 

 

ನಿಮ್ಮ ಉಪಸ್ಥಿತಿ ಯಾವಾಗಲೂ ವಿಶೇಷ ಎನಿಸುತ್ತದೆ , ಬಲವಾದ ವ್ಯಕ್ತಿತ್ವಗಳನ್ನು ಹೊಂದಿದ್ದೀರಿ ಮತ್ತು ಅತ್ಯಂತ ಆತ್ಮವಿಶ್ವಾಸ, ಧೈರ್ಯಶಾಲಿ ಮತ್ತು ಉತ್ಸಾಹದಿಂದ ಇರುತ್ತೀರಿ
ನೀವು ತುಂಬಾ ಸಕ್ರಿಯರಾಗಿದ್ದೀರಿ ಮತ್ತು ನಿಮ್ಮ ಸುತ್ತಲಿನ ನಿಮ್ಮ ಸ್ನೇಹಿತರನ್ನು ಹೊಸದಾಗಿ ಏನಾದರು ಮಾಡಲು ಪ್ರೇರೇಪಣೆ ಮಾಡುತ್ತೀರಿ , ಹೊಸ ಸವಾಲು , ಹೊಸ ಹಾಸ್ಯ ಭರಿತ ಕೆಲಸಗಳನ್ನು ಮಾಡಲು ನಿಮಗೆ ಆಸಕ್ತಿ ಹೆಚ್ಚು .

 

ವೃಷಭ (Vrushabha)

 

 

ಬಹಳ ಮುತುವರ್ಜಿ ವಹಿಸುವ ಗುಣ ಇವರದ್ದು , ನೀವು ಸಾಮಾನ್ಯವಾಗಿ ತುಂಬಾ ನಿಷ್ಠಾವಂತರಾಗಿರುತ್ತೀರಿ ಮತ್ತು ನಿಮ್ಮ ಇಡೀ ಜೀವನ ನೀವು ಸುತ್ತುವರೆದಿರುವ ಜನರೊಂದಿಗೆ ವಿಷಯಗಳನ್ನು ಚೆನ್ನಾಗಿ ಹಂಚಿಕೊಳ್ಳುತ್ತೀರಿ , ನಿಮ್ಮ ಸ್ನೇಹಿತರಿಗೆ ನೀವು ತುಂಬಾ ತಾಳ್ಮೆಯಿಂದಿರುತ್ತೀರಿ ಮತ್ತು ನಿಷ್ಠರಾಗಿರುತ್ತೀರಿ.

 

ಮಿಥುನ (Mithuna)

 

 

ನೀವು ತುಂಬಾ ಸಾಮಾಜಿಕ ವ್ಯಕ್ತಿ, ಹೊಂದಿಕೊಳ್ಳಬಲ್ಲ ಮತ್ತು ಯಾರೊಂದಿಗಾದರೂ ಸಂಭಾಷಣೆಯನ್ನು ತ್ವರಿತವಾಗಿ ಶುರುಮಾಡುವ ವ್ಯಕ್ತಿ. ಯಾವಾಗಲೂ ಹೊಸ ಮತ್ತು ವಿನೋದ ಸಂಗತಿಗಳನ್ನು ಮಾಡುತ್ತಿರುವ ಗುಣ ನಿಮ್ಮದಾಗಿರುತ್ತದೆ. ನಿಮ್ಮ ಕುತೂಹಲಕಾರಿ ಸ್ವಭಾವವು ನಿಮ್ಮ ಸ್ನೇಹಿತರನ್ನು ಪ್ರಕ್ಷುಬ್ಧಗೊಳಿಸುತ್ತದೆ. ಆದ್ದರಿಂದ ನಿಮ್ಮ ಬಗ್ಗೆ ಆಸಕ್ತಿ ಹುಟ್ಟುತ್ತದೆ .

ಕರ್ಕ (Karka)

 

ಇತರರು ನಿಮ್ಮನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನೀವು ನಿಮ್ಮ ಭಾವನೆಗಳನ್ನು ತೋರಿಸದಿದ್ದರೂ ಸಹ, ಇತರರಿಗೆ ತಿಳಿದಿದ್ದರು ಸಹ ನೀವು ಸಾಮಾನ್ಯವಾಗಿ ಬಹಳ ಸೂಕ್ಷ್ಮ ಮತ್ತು ಭಾವನಾತ್ಮಕವಾಗಿರುತ್ತೀರಿ. ಆದರೆ ಒಬ್ಬ ಸ್ನೇಹಿತನಾಗಿ, ನಿಮ್ಮ ಸ್ನೇಹಿತರಿಗಾಗಿ ಬೆನ್ನೆಲುಬಾಗಿ ಇರುತ್ತೀರಿ. ನಿಮ್ಮ ಹತ್ತಿರವಿರುವ ಜನರಿಗೆ ನೀವು ತುಂಬಾ ನಿಷ್ಠರಾಗಿರುವಿರಿ, ಆದರೆ ಪ್ರತಿಕೂಲತೆ ಎದುರಿಸುವಾಗ ನಿರಾಶಾವಾದಿಯಾಗುವ ಗುಣಗಳನ್ನು ಹೊಂದಿದ್ದೀರಿ .

ಸಿಂಹ (Simha)

 

ನೀವು ನಿಮ್ಮ ಸ್ನೇಹಿತರಿಗೆ ಉದಾರ ಮತ್ತು ನಿಷ್ಠಾವಂತರಾಗಿರುತ್ತೀರಿ ಮತ್ತು ಯಾವಾಗಲೂ ಅಗತ್ಯವಿರುವ ಸಮಯದಲ್ಲಿ ಇತರರಿಗೆ ಸಹಾಯ ಮಾಡಲು ಸಮಯ ಮತ್ತು ಶಕ್ತಿಯನ್ನು ಯಾವಾಗಲೂ ಇಡುತ್ತೀರಿ. ನೀವು ಸಾಮಾನ್ಯವಾಗಿ ಗುಂಪಿನ ನಾಯಕನಂತೆ ಕಾಣುತ್ತೀರಿ ಮತ್ತುಬಹಳ ಆತ್ಮವಿಶ್ವಾಸ ಹೊಂದಿರುತೀರಿ, ಇದು ಕೆಲವೊಮ್ಮೆ ಇತರರಿಗೆ ಅಹಂಕಾರ ಮತ್ತು ಉದಾಸೀನತೆ ಎಂದು ಕಾಣಿಸುತ್ತದೆ

 

ಕನ್ಯಾರಾಶಿ (Kanya)

 

ತುಂಬಾ ನಿಷ್ಠಾವಂತ, ದೀರ್ಘಕಾಲೀನ ಸ್ನೇಹ ಹೊಂದಿರುತ್ತೀರಿ, ನೀವು ಜೀವನದಲ್ಲಿ ಮಾರ್ಗದರ್ಶನ ನೀಡುವ ನೈತಿಕ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುವ ಬಲವಾದ ಮತ್ತು ಬದಲಾಗದ ಪಾತ್ರವನ್ನು ವಹಿಸುತ್ತೀರಿ. ನೀವು ನೇರವಾಗಿ ಮಾತಾಡುವಾಗ ನಿಮ್ಮ ಭಾವನೆಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವುದಿಲ್ಲ ಬದಲಾಗಿ ಜಾರಿಕೊಳ್ಳುತ್ತೀರಿ

 

ತುಲಾ (Tula)

 

ನೀವು ತುಂಬಾ ಸಾಮಾಜಿಕ, ಬಹಳ ಲವಲವಿಕೆಯಿಂದ ಕೂಡಿರುವ ಸ್ನೇಹಿತ ಯಾವಾಗಲೂ ಸ್ನೇಹಿತರಿಗೆ ಬೆಂಬಲಿಗ ನೀವು , ಒಬ್ಬಂಟಿಯಾಗಿರುವುದು ನಿಮಗೆ ಇಷ್ಟವಿಲ್ಲದ ಸಂಗತಿ , ನೀವು ಜನರೊಂದಿಗೆ ಇರುವಾಗ ವಟ ವಟ ಮಾತಾಡುತ್ತ ಇರುತ್ತೀರಾ , ನೀವು ಬಹಳ ಶಾಂತಿಯುತ ಜೀವಿಗಳು ಮತ್ತು ಸಾಧ್ಯವಾದಾಗ ಘರ್ಷಣೆಯನ್ನು ತಪ್ಪಿಸಲು ಪ್ರಯತ್ನಿಸುತ್ತಿರಿ .

 

ವೃಶ್ಚಿಕ (Vrushchika)

 

 

ನೀವು ನಿಜವಾದ ಸ್ನೇಹಿತ, ಆದರೆ ಇತರರು ಸಹ ನಿಜವಾದ ಸ್ನೇಹಿತರಾಗಬೇಕೆಂದು ನೀವು ನಿರೀಕ್ಷಿಸುತ್ತೀರಿ. ನೀವು ಒಬ್ಬ ವ್ಯಕ್ತಿಯಂತೆ ತುಂಬಾ ಭಾವೋದ್ರಿಕ್ತ, ದೃಢ ಮತ್ತು ಪ್ರಾಮಾಣಿಕರಾಗಿದ್ದೀರಿ, ಅದೇ ನಿಮಗೆ ಉತ್ತಮ ಸ್ನೇಹಿತನಾಗುವಂತೆ ಮಾಡುತ್ತದೆ . ನೀವು ಸಾಮಾನ್ಯವಾಗಿ ತ್ವರಿತ-ಬುದ್ಧಿ ಮತ್ತು ಬುದ್ಧಿವಂತರಾಗಿರುವ ಸ್ನೇಹಿತರ ಜೊತೆ ಇರಲು ಇಷ್ಟಪಡುತ್ತೀರಿ.

 

ಧನು ರಾಶಿ (Dhanu)

 

 

ನೀವು ತುಂಬಾ ಉದಾರ, ಉತ್ತಮ ಮನಸ್ಸುಳ್ಳ ಮತ್ತು ಉತ್ಸಾಹಶಾಲಿ ವ್ಯಕ್ತಿ. ನಿಮ್ಮ ಸ್ನೇಎಹಿತರು ಜೊತೆಗಿರುವಾಗ ಬಹಳ ಜೋಕ್ ಗಳನ್ನೂ ಮಾಡುತ್ತೀರಿ , ಪ್ರವಾಸದ ಮೂಲಕ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಅನುಭವಿಸಲು ನೀವು ಆಳವಾದ ಪ್ರೀತಿ ಮತ್ತು ಮೆಚ್ಚುಗೆಯನ್ನೂ ಸಹ ಹೊಂದಿದ್ದೀರಿ. ನಿಮ್ಮ ಸಂಬಂಧವನ್ನು ನೀವು ಪ್ರೀತಿಸುವ ವ್ಯಕ್ತಿಗಳಿಂದ ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ನೀವು ಅವರಿಗೆ ಗೌರವ ಕೊಡುತ್ತೀರಾ .

 

ಮಕರ (Makara)

 

 

ನೀವು ಜವಾಬ್ದಾರಿಯುತ, ವಿಶ್ವಾಸಾರ್ಹ ಮತ್ತುನಿಷ್ಠ ಸ್ನೇಹಿತರಾಗಿರುತ್ತೀರಿ. ನೀವು ಕೆಲವೊಮ್ಮೆ ಗಂಭೀರವಾಗಿರಬಹುದು ಮತ್ತು ನಿಮ್ಮ ಸ್ವಂತ ಚಿಂತನೆಯ ರೀತಿಯಲ್ಲಿ
ನಡೆದುಕೊಳ್ಳಬಹುದು , ಸ್ನೇಹಿತರಿಗೆ ಸ್ಥಿರ ಬೆಂಬಲ ನೀಡುತ್ತಿರಿ ಆದರೆ ನಿಮಗೆ ಯಾರಾದರೂ ನೋವು ಕೊಟ್ಟರೆ ನೀವು ಮರಳಿ ಅವರನ್ನು ಕ್ಷಮಿಸುವುದಿಲ್ಲ ಬಹಳ ವರ್ಷಗಳ ವರೆಗೆ ಅದು ಹಾಗೆಯೇ ಇರುತ್ತದೆ .

 

ಕುಂಭರಾಶಿ (Kumbha)

 

 

ನೀವು ವಿಶ್ವದ ಅತ್ಯಂತ ಅದ್ಭುತ ಸ್ನೇಹಿತರಲ್ಲಿ ಒಬ್ಬರಾಗಬಹುದು ಆದರೆ ಇತರರು ನಿಮ್ಮನ್ನು ತಿಳಿದುಕೊಳ್ಳಲು ಮತ್ತು ಆರಾಮದಾಯಕವಾಗಲು ಸಮಯವನ್ನು ನೀಡಬೇಕಾಗುತ್ತದೆ. ಪರಿಸ್ಥಿತಿಗಳ ಮೂಲಕ ಆಳವಾಗಿ ಯೋಚಿಸಿ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಮರ್ಥರಾಗಿರುತ್ತೀರಿ , ನೀವು ಉತ್ತಮ ಪ್ರೇರಣೆಗಾರ, ಉತ್ತಮ ಸಲಹೆ ನೀಡುವವರು ಮತ್ತು ದೊಡ್ಡ ಸಮಸ್ಯೆ ಪರಿಹಾರಕರಾಗಿರುತ್ತೀರಿ

 

ಮೀನರಾಶಿ (Meena)

 

 

ನೀವು ಅತ್ಯಂತ ಸ್ನೇಹಪರ ಮತ್ತು ಅತ್ಯಂತ ಸಹಾನುಭೂತಿ ಗುಣ ಹೊಂದಿರುತ್ತೀರಿ. ಉದಾರಿಗಳು, ನಿಸ್ವಾರ್ಥವಾಗಿರುವವರು, ಬಹಳ ಭಾವಜೀವಿಗಳು ಯಾವುದಕ್ಕೂ ಹೆದರುವುದಿಲ್ಲ ನಿಮಗೆ ಅನಿಸಿದ್ದನ್ನು ಮುಖದ ಮೇಲೆ ಹೊಡೆದಂತೆ ಹೇಳುತ್ತೀರಿ , ಸ್ವವಿಮರ್ಶೆ ಮಾಡಿಕೊಂಡು ಏನಾದರೂ ತಪ್ಪಾದಲ್ಲಿ ನೀವು ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೀರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top