ಅರೋಗ್ಯ

ಶೀತ, ಜ್ವರ, ಕೆಮ್ಮುಗಳಿಗೆ ನೀವು ಈ ಈ ಔಷಧಗಳನ್ನು ಉಪಯೋಗಿಸುತ್ತಿದ್ದರೆ ಹುಷಾರಾಗಿರಿ ,ಇದು ತುಂಬಾ ಅಪಾಯಕಾರಿ

ಜ್ವರ, ಕೆಮ್ಮು, ಶೀತ, ನೋವು ನಿವಾರಕ ಅಂತ ಅಂಗಡಿಗೆ ಹೋಗಿ ತೆಗೆದುಕೊಳ್ಳುವ ಮಾತ್ರೆಗಳು ನಿಮ್ಮ ಜೀವಕ್ಕೆ ಅಪಾಯ ಎಂದು ರಾಷ್ಟ್ರೀಯ ಔಷಧ ನಿಯಂತ್ರಣ ಸಂಸ್ಥೆ ಎಚ್ಚರಿಸಿದೆ.

 

 

ನೋವು ನಿವಾರಕ ಕಾಂಬಿಫ್ಲಾಮ್‍, ಶೀತ, ತಲೆನೋವು ನಿವಾರಕ ಡಿ-ಕೋಲ್ಡ್‍, ಅಲರ್ಜಿಯ ಸಿಟ್ರಜಿನ್‍ ಮತ್ತು ರೋಗ ನಿರೋಧಕ ಸಿಪ್ರೊಫ್ಲೋಕ್ಸಿಯನ್‍, ಓಫ್ಲಾಕ್ಸಿಯನ್ ಅಮೊಕ್ಸಿಲಿಯನ್ ಸೇರಿದಂತೆ 60 ಔಷಧಿಗಳು ಗುಣಮಟ್ಟ ಹೊಂದಿಲ್ಲ. ಇವುಗಳನ್ನು ಸೇವಿಸಿದರೆ ಆರೋಗ್ಯ ವೃದ್ಧಿಗಿಂತ ಅನಾರೋಗ್ಯ ಹೆಚ್ಚಲಿದೆ ಎಂದು ಔಷಧ ಗುಣಮಟ್ಟ ನಿಯಂತ್ರಣ ಘಟಕ ಎಚ್ಚರಿಸಿದೆ.

 

 

ಸಿಡಿಎಸ್‍ಸಿಒ ವಲಯ ಅಧಿಕಾರಿಗಳು ಗುಣಮಟ್ಟ ಪರೀಕ್ಷಿಸಿದ ನಂತರ ಈ ಔಷಧಗಳು ಗುಣಮಟ್ಟ ಸರಿಯಿಲ್ಲ, ತಪ್ಪು ಬ್ರ್ಯಾಂಡೆಂಡ್ ಆಗಿವೆ ಎಂದು ವೆಬ್‍ಸೈಟ್‍ನಲ್ಲಿ ಈ ಮಾಹಿತಿ ಪ್ರಕಟಿಸಿದೆ.

 

 

ಡಿ-ಕೋಲ್ಡ್‍ ಮಾತ್ರಗಳು ಗುಣಮಟ್ಟದ ಪರೀಕ್ಷೆಯಲ್ಲಿ ಸಂಪೂರ್ಣ ವಿಫಲವಾಗಿವೆ. ಇದೇ ರೀತಿ ಕಿಪ್ರೊಫ್ಲೊಕ್ಸಿಯಾನ್‍, ಒಫ್ಲೊಕ್ಸಿಯನ್‍ ಮತ್ತು ಅಮೊಕ್ಸಿಲಿಯನ್‍, ಪಾಜ್ನಾ-40 ಸೇರಿದಂತೆ 60 ಔಷಧಿಗಳು ನಿಗದಿತ ಅವಧಿ ಪೂರೈಸಿದ್ದು ಸೇರಿದಂತೆ ನಾನಾ ಕಾರಣಗಳಿಗೆ ಬಳಕೆ ಅಪಾಯಕಾರಿ ಎಂದು ಇಲಾಖೆ ತಿಳಿಸಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top