ಸಿನಿಮಾ

ಲವ್ ಬ್ರೇಕ್ ಅಪ್ ಆದ್ಮೇಲೆ ಸಿಂಗಲ್ ಲೈಫ್‌ ಇಸ್ ಬ್ಯೂಟಿಫುಲ್ ಅಂದ್ರು ನಟಿ ಚಾರ್ಮಿ

ನಟಿಯರು ಸಿನೆಮಾದಲ್ಲಿ ಐದಾರು ವರ್ಷ ಕಳೆದರೆ ಸಾಕು, ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆಗಳು ಮೂಡಿಬರುತ್ತವೆ.ಅದರಲ್ಲಿ ನಟಿಯರಿಗೆ ಯಾವುದೇ ಆಫರ್ ಸಿಗದೇ ಅವಕಾಶ ವಂಚಿತರಾದರಂತೂ ಇಲ್ಲ ಸಲ್ಲದ ಗಲಿ ಸುದ್ದಿಗಳು ಕೂಡ ಚಿತ್ರರಂಗದಲ್ಲಿ ಕೇಳಿಬರುತ್ತವೆ.

 

ಈಗ ದಕ್ಷಿಣ ಭಾರತ ಚಲನಚಿತ್ರ ಇಂಡಸ್ಟ್ರಿ ಬೆಡಗಿ ಚಾರ್ಮಿ ಕೌರ್‌ ಮಾಡುವೆ ವಿಚಾರ ಬಿಸಿ ಬಿಸಿ ಸದ್ದು ಮಾಡುತ್ತಿದೆ. ಚಾರ್ಮಿ ಕೌರ್‌ ಅವರನ್ನೇ ನೇರವಾಗಿ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಚಾರ್ಮಿ ಕೌರ್‌ ಬೋಲ್ಡ್ ಆಗಿ ಉತ್ತರನ್ನು ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಕೆಲವು ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟಿ ಚಾರ್ಮಿ. ಈ ಸಂಧರ್ಭದಲ್ಲಿ ಅವರ ಮದುವೆ ವಿಚಾರ ತಲೆ ಎತ್ತಿತ್ತು. ತಮ್ಮ ವೈವಾಹಿಕ ಜೀವನದ ಕಲ್ಪನೆಯನ್ನು ಯಾವುದೇ ಹಿಂಜರಿಕೆ ಇಲ್ಲದೆ ಅವರು ನೇರವಾಗಿ ಬಿಚ್ಚಿಟ್ಟಿದ್ದಾರೆ. ನಟಿ ಚಾರ್ಮಿಗೆ ಮದುವೆ ಆಗುವುದು ಇಷ್ಟವಿಲ್ಲವಂತೆ. ಒಂಟಿ ಆಗಿ ಇರೋದೆ ಸೂಕ್ತವೆಂದು ತಿಳಿಸಿದ್ದಾರೆ. ಸಿಂಗಲ್ ಲೈಫ್‌ ಇಸ್ ಬ್ಯೂಟಿಫುಲ್ ಎಂದು ಈ ಬೆಡಗಿ ಹೇಳಿದ್ದಾರೆ.

 

ತಮ್ಮ ಮಾಜಿ ಪ್ರಿಯಕರನ ಬಗ್ಗೆ ಕೂಡ ಅವರು ಹೇಳಿಕೊಂಡಿದ್ದಾರೆ. ಈ ಮೊದಲು ನಾನೊಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದೆ. ಆದರೆ, ಅದು ವರ್ಕೌಟ್ ಆಗಲಿಲ್ಲ. ಒಂದು ವೇಳೆ ಅವನೊಂದಿಗೆ ಮದುವೆಯಾಗಿದ್ರೆ, ಸುಖಕ್ಕಿಂತ ದುಃಖವೇ ಹೆಚ್ಚಾಗಿ ಅನುಭವಿಸಬೇಕಾಗ್ತಿತ್ತು. ಅವನ ಜತೆ ಡಿವೋರ್ಸ್ ಪಡೆಯಬೇಕಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top