ದೇವರು

ಈ ಊರಲ್ಲಿ ಕೋರ್ಟ್ ಇದ್ದರು , ಪೊಲೀಸ್ ಸ್ಟೇಷನ್ ಇದ್ದರು ನ್ಯಾಯ ಮಾಡೋಕೆ ಹನುಮಂತನೇ ತೀರ್ಪುಗಾರ ಯಾಕಂತೀರಾ ಮುಂದೆ ಓದಿ

ಈ ಗ್ರಾಮದಲ್ಲಿ ನ್ಯಾಯಾಲಯ ಇದ್ದರೂ, ಪೊಲೀಸ್ ಠಾಣೆ ಇದ್ದರೂ ಸಹ ,ಇಲ್ಲಿ ಹನುಮಂತನೇ ತೀರ್ಪು ನೀಡುತ್ತಾನೆ.

 

 

ಭಗವಂತನ ಪೂಜೆ ಕೇವಲ ನಮ್ಮ ಆಸೆಗಳನ್ನು ಪೂರ್ತಿ ಮಾಡಿಕೊಳ್ಳಲು ಮಾತ್ರ ಇರುವುದಿಲ್ಲ. ಬದಲಾಗಿ ಸರಿ ತಪ್ಪುಗಳನ್ನು ಪತ್ತೆ ಮಾಡಲು ಮತ್ತು ಸರಿ ಮಾಡಲು  ಸಹ ಇರುತ್ತದೆ. ಇದಕ್ಕೆ ಜೀವಂತ ಉದಾಹರಣೆ ಇಲ್ಲಿ ನಮಗೆ ಸಿಗುತ್ತದೆ.ಅದು ಎಲ್ಲಿ ಎಂದರೆ ನಮ್ಮ ಭಾರತದ ಛತ್ತೀಸ್ ಗಡ್ ನಗರದಲ್ಲಿ. ಛತ್ತೀಸ್ ಗಡದ ಬಿಲಾಸಪುರ ನಗರದ ಮಗರ್ ಪಾರ್ ಕ್ಷೇತ್ರದಲ್ಲಿ ಹನುಮಂತನ ದೇವಾಲಯವಿದೆ.

ಇಲ್ಲಿ ಆ ಗ್ರಾಮದ ನಿರ್ಧಾರವನ್ನು ಭಗವಂತನಾದ ಹನುಮಂತನು ತಾನಾಗಿಯೇ ಕೈಗೊಳ್ಳುತ್ತಾನಂತೆ. ಈ ನಗರದಲ್ಲಿ ಉಚ್ಚ ನ್ಯಾಯಾಲಯ ಇದೆ. ಆದರೂ ಸಹ ಹಲವಾರು ವಾದ ವಿವಾದಗಳನ್ನು ಬಗೆಹರಿಸಲು, ಹನುಮಂತನ ಮಂದಿರದ ಮೊರೆ ಹೋಗುತ್ತಾರೆ. ಹನುಮಂತ ಪ್ರತಿಯೊಬ್ಬರ ಸಮಸ್ಯೆಗಳನ್ನು ಬಗೆಹರಿಸುತ್ತಾನೆ .

ಇಲ್ಲಿನ ಪಂಚಾಯಿತಿ ಹನುಮಂತನನ್ನು ಸಾಕ್ಷಿಯಾಗಿ ಇಟ್ಟುಕೊಂಡು ನ್ಯಾಯ ನೀಡುತ್ತದೆ. ಈ ನ್ಯಾಯವನ್ನು ಹನುಮಂತನ ತೀರ್ಪು ಅಥವಾ ನಿರ್ಧಾರ ಎಂದು ಹೇಳಲಾಗುತ್ತದೆ.

 

 

ಭಜರಂಗಿ ಪಂಚಾಯತ್ ಮಂದಿರ.

ಬಿಲಾಸ್ಪುರದ ಈ ಕ್ಷೇತ್ರದಲ್ಲಿ ಒಂದು ಭಜರಂಗಿ ಪಂಚಾಯತ್ ಹೆಸರಿನ ಮಂದಿರವಿದೆ. ಇಲ್ಲಿ ಕಳೆದ ಎಂಬತ್ತು ವರ್ಷಗಳಿಂದ ವಾದ ವಿವಾದಗಳನ್ನು ಬಗೆಹರಿಸಲಾಗುತ್ತಿದೆ. ಯಾರಿಗೆ ಏನೇ ಸಮಸ್ಯೆ ಇದ್ದರೂ ಸಹ, ಅದನ್ನು ಈ ಮಂದಿರಕ್ಕೆ ತಂದು ಇಲ್ಲಿ ಪರಿಹಾರ ನೀಡಲಾಗುತ್ತದೆ. ಹನುಮಂತನು ಜನರ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾನೆ ಎಂದು ನಂಬಲಾಗಿದೆ.

 

 

ದೇವಾಲಯದ ಇತಿಹಾಸ.

ಈ ದೇವಾಲಯದ ನಿರ್ಮಾಣದ ಹಿಂದೆ ಸ್ಥಳೀಯ ಜನರು ಹಲವಾರು ಮಾಹಿತಿಯನ್ನು ನೀಡುತ್ತಾರೆ. ಇಲ್ಲಿನ ಸ್ಥಳೀಯ ಜನರು ಹೇಳುವ ಹಾಗೆ ಸುಮಾರು ಎಂಬತ್ತು ವರ್ಷದ ಹಿಂದೆ ಸುರಕ್  ನಾಯಿ ಎಂಬ ಹೆಸರಿನ ಒಬ್ಬ ಹನುಮಾನ್ ಭಕ್ತರು ಅಶ್ವಥ ಮರದ ಕೆಳಗಡೆ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದರಂತೆ.

 

 

ನಂತರ ನ್ಯಾಯ ಪಂಚಾಯತ್ ಸದಸ್ಯರು ಹಾಗೂ ಹನುಮಂತನ ಭಕ್ತರ ಸಹಾಯದಿಂದ ಒಂದು ದೊಡ್ಡದಾದ ದೇವಾಲಯವನ್ನು ನಿರ್ಮಾಣ ಮಾಡಿದರು. ಕೊನೆಗೆ 1983 ರಲ್ಲಿ ಇದನ್ನು ನಿರ್ಮಾಣ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಅನ್ಯಾಯ ಆದವರಿಗೆ ಇಲ್ಲಿಯೇ ಹನುಮಂತನನ್ನು, ಸಾಕ್ಷಿಯಾಗಿ ಇರಿಸಿಕೊಂಡು ನ್ಯಾಯ ನೀಡಲಾಗುತ್ತದೆ. ಜನರು ಈ ತೀರ್ಪನ್ನು ಯಾವುದೇ ಬೇಸರ ಇಲ್ಲದೆ ಸ್ವೀಕರಿಸುತ್ತಾರೆ. ಇದೇ ಈ ದೇವಾಲಯದಲ್ಲಿನ ವಿಶೇಷತೆ ಮತ್ತು ಮಹತ್ವವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top