ಸಮಾಚಾರ

ಶೋಕಿಗೋಸ್ಕರ ಫೇಸ್ಬುಕ್ ಸ್ಟೇಟಸ್ ಹಾಕೋರ್ಗೆ ಎಸ್.ಪಿ ಅಣ್ಣಾ ಮಲೈ ಏನ್ ಹೇಳ್ತಾರೆ ಕೇಳಿ

ಚಿಕ್ಕಮಗಳೂರು ಜಿಲ್ಲಾ ಐಪಿಎಸ್ ಅಧಿಕಾರಿ ಆಗಿರುವ ಅಣ್ಣಾ ಮಲೈ ಅವರು ಚಿಕ್ಕಮಗಳೂರಿನಲ್ಲಿ ನಡೆದ ಕಳ್ಳತನ ಪ್ರಕಣವೊಂದರ ಬಗ್ಗೆ ಸಭೆಯಲ್ಲಿ ವಿವರಿಸಿದ್ದಾರೆ. ಅತ್ಯಂತ ಅಪರೂಪದ ಕಳ್ಳತನ ಪ್ರಕರಣವಿದು, ಪ್ರಕರಣದಲ್ಲಿ ಕಳ್ಳನು ಮನೆಯೊಂದಕ್ಕೆ ನುಗ್ಗಿ ಮೂರೂ ದಿನ ಅಲ್ಲಿಯೇ ವಾಸ ಮಾಡಿ ತನಕೆ ಬೇಕಾದ ಅಡುಗೆ ಮಾಡಿಕೊಂಡು ತಿಂದಿದ್ದಾನೆ. ಮೂರನೇ ದಿನ ಮನೆಯಲ್ಲಿ ಇದ್ದ ಎಲ್ಲ ಸಾಮಾನುಗಳನ್ನು ಒಂದು ಲಾರಿಗೆ ಹಾಕಿ ಸಂಪೂರ್ಣ ಮನೆಯಲ್ಲಿರುವ ವಸ್ತುಗಳನ್ನೆಲ್ಲ ಖಾಲಿ ಮಾಡಿಕೊಂಡು ಹೋಗಿದ್ದಾನೆ.

 

 

ಮೂರೂ ದಿನದ ನಂತರ ಬಂದ ಮನೆಯವರು ಬಾಗಿಲು ತೆಗೆದಾಗ ಮನೆಯನ್ನು ನೋಡಿ ಗಾಭರಿಗೊಂಡರು, ಏಕೆಂದರೆ ಮನೆಯಲ್ಲಿ ಒಂದು ವಸ್ತುಗಳು ಕೂಡ ಇರಲಿಲ್ಲ ಕೂಡಲೇ ಸಮೀಪದ ಪೊಲೀಸ ಠಾಣೆಗೆ ಹೋಗಿ ಮನೆಯವರು ದೂರು ನೀಡಿದ್ದಾರೆ. ಮನೆಯಲ್ಲಿ ಕೆಲವು ವಸ್ತು ಕಳ್ಳತನ ಆಗಬಹುದು ಆದರೆ ಮನೆಯಲ್ಲಿರುವ ಎಲ್ಲ ವಸ್ತುಗಳು ಕಳ್ಳತನ ಆಗಿರುವುದಕ್ಕೆ ಪೊಲೀಸರು ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾದರು.

 

 

ತನಿಖೆ ಶುರು ಮಾಡಿದ ಪೊಲೀಸ್ ತಂಡ ಕೆಲವೇ ದಿನಗಳಲ್ಲಿ ಶೀಘ್ರ ಗತಿಯಿಂದ ಕಳ್ಳನನ್ನು ಬಂಧಿಸಲು ಯಶಸ್ವಿ ಆದರೂ. ಕಳ್ಳನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು, ಮನೆಯವರು ಮೂರೂ ದಿನ ಬರುವುದಿಲ್ಲ ಎಂದು ನಿನಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನೆ ಮಾಡಿದಾಗ ಅವನು ಆ ಮನೆಯವು ಫೇಸ್ಬುಕ್ ನಲ್ಲಿ ನಾವು ಮೂರೂ ದಿನ ಗೋವಾಗೆ ಹೋಗುತ್ತಿರುವುದಾಗಿ ಪೋಸ್ಟ್ ಮಾಡಿದ್ದರು. ಫೇಸ್ಬುಕ್ ನಲ್ಲಿ ಲೈವ್ ಅಪ್ಡೇಟ್ ಪೋಸ್ಟ್ ಮಾಡುತ್ತಿದ್ದರು. ಇದರಿಂದ ನನಗೆ ಅವರು ಎಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಸಿಗುತ್ತಿತ್ತು. ಹಾಗಾಗಿ ನಾನು ಅವರು ಮನೆಗೆ ವಾಪಾಸ್ ಬರುವ ಮುನ್ನ ಎಲ್ಲವನ್ನು ದೋಚಿ ಪರಾರಿಯಾದೆ ಎಂದು ತಿಳಿದಿದರು.

 

ಎಲ್ಲ ವಸ್ತುಗಳನ್ನು ಮಾರಿದ್ದ ಕಳ್ಳನಿಂದ ಮತ್ತೆ ವಸ್ತುಗಳನ್ನು ವಶಪಡಿಕೊಂಡು ಮನೆ ಮಾಲೀಕರಿಗೆ ಈಗ ಕೊಡಲಾಗಿದೆಯಂತೆ.

 

ಅಣ್ಣಾ ಮಲೈ ಅವರ ಭಾಷಣದ ವಿಡಿಯೋ ನೋಡಿ:

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top