ಸಮಾಚಾರ

ಅಂಬಾನಿ ಮಗ ಆಕಾಶ್ ಕಾರಿನಲ್ಲಿರುವ ಗಡಿಯಾರದ ಬೆಲೆ ನಿಮ್ಮ ಹುಬ್ಬೇರಿಸುತ್ತೆ

ದೇಶದ ಶ್ರೀಮಂತ ಉದ್ಯಮಿ ಆಗಿರುವ ಮುಖೇಶ ಅಂಬಾನಿ ಆಸ್ತಿ ಲಕ್ಷ ಕೋಟಿಗೂ ಅಧಿಕ. ಇವರ ಜೀವನ ಶೈಲಿಯು ಕೂಡ ಐಷಾರಾಮಿಯಾಗಿದೆ. ಇವರ ಮಕ್ಕಳಾದ ಆಕಾಶ್, ಅನಂತ್ ಕೂಡ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮಕ್ಕಳು ಕೂಡ ತಂದೆಯಂತೆ ಖರ್ಚು ಮಾಡಲು ಯಾವತ್ತೂ ಹಿಂದೇಟು ಹಾಕಲ್ಲ. ಕೆಲವು ದಿನಗಳ ಹಿಂದೆ ಮುಖೇಶ್ ಅಂಬಾನಿ ಮಗ ಆಕಾಶ್ ಕಾರ್ ಒಂದನ್ನು ಖರೀದಿ ಮಾಡಿದ್ದೂ ಅದು ಈಗ ಸಕತ್ ಸುದ್ದಿ ಮಾಡುತ್ತಿದೆ.

 

 

ಅಯ್ಯೋ ಆ ಕಾರ್ ನಲ್ಲಿ ಅದೇನು ವಿಶೇಷ ಇದೆ ಅಂತೀರಾ. ಜಗತ್ತಿನ ಟಾಪ್ ಕಾರ್ ಗಳಲ್ಲಿ ಒಂದಾದ ಬೆಂಟ್ಲಿ ಕಂಪೆನಿಯ ಬೆಂಟೆಗಾ ಮೋಡೆಲ್ ಕಾರನ್ನು ಆಕಾಶ್ ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಸುಮಾರು 4 ಕೋಟಿ ಇದೆಯಂತೆ. ಇನ್ನೊಂದು ನಿಬ್ಬೆರಗಾಗುವ ಸಂಗತಿ ಅಂದರೆ ಈ ಕಾರ್ ನಲ್ಲಿ ಅಳವಡಿಸಿರುವ ಗಡಿಯಾರದ ಬೆಲೆ 95 ಲಕ್ಷ. ನಿಜಕ್ಕೂ ಇದು ಆಶ್ಚರ್ಯ ಅಲ್ಲವೇ.

 

 

ಬೆಂಟ್ಲಿ ಕಂಪೆನಿಯ ಬೆಂಟೆಗಾ ಐಷಾರಾಮಿಗೆ ಹೆಸರಾಗಿರುವ ಕಾರ್, ಇದರಲ್ಲಿರುವ ದುಬಾರಿ ಗಡಿಯಾರ ಯಾವ ಕಾರ್ ನಲ್ಲೂ ಇರುವುದಿಲ್ಲ.

 

 

ಇನ್ನು ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಕೂಡ ಐಷಾರಾಮಿ ಜೇವನಕ್ಕೆ ಹೆಸರು ವಾಸಿ. ಇವರ ಬಳಿ ಪ್ರೈವೇಟ್ ಜೆಟ್ ಕೂಡ ಇವೆ. ಇತ್ತೀಚಿಗೆ ನೀತಾ ಹುಟ್ಟುಹಬ್ಬದ ದಿನ ಪತಿ ಮುಖೇಶ್ ಜೆಟ್ ವಿಮಾನ್ ಉಡುಗರೆಯಾಗಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top