ಅರೋಗ್ಯ

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇಲ್ಲಿದೆ ನೋಡಿ ಅದರ ಪರಿಹಾರಕ್ಕೆ ರಾಮಬಾಣ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಜೀರ್ಣದಿಂದ ಮುಕ್ತರಾಗಿ.

 

ಹೊಟ್ಟೆಯಲ್ಲಿ ನೋವು ಅಥವಾ ಸಂಕಟವಾಗುವುದನ್ನು ಆಜೀರ್ಣವ್ಯಾದಿ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಇದು ಆಹಾರ ಸೇವನೆ ಸಂಬಂಧಿ ಸಮಸ್ಯೆ.ಜೊತೆಗೆ ಹೊಟ್ಟೆ ಉಬ್ಬರಿಸಿದಂತಾಗುವುದು , ತೇಗು ಬರುವುದು ಮತ್ತು ವಾಂತಿ ಕೂಡ ಆಗುತ್ತದೆ. ಸೋಂಕು ಹಾಗೂ ಕೆಲವು ಔಷಧದಿಂದಲೂ ಅಜೀರ್ಣವ್ಯಾಧಿ ಉಂಟಾಗುತ್ತದೆ.

 

 

ಇದು ಒಂದು ಸಾಮಾನ್ಯವಾದ ಸಮಸ್ಯೆ ಮತ್ತು ಹೆಚ್ಚಿನ ಜನರಿಗೆ ಆಗ್ಗಾಗ್ಗೆ ಆಗುತ್ತಿರುತ್ತದೆ ಆದರೆ ಈ ತೊಂದರೆ ಹೆಚ್ಚಾಗಿ ಕಾಣಿಸುತ್ತಿದ್ದರೆ ಅಥವಾ ವಿಪರೀತ ನೋವುಂಟು ಆದರೆ ವೈದ್ಯರನ್ನು ಸಂಪರ್ಕಿಸಬೇಕು. ಈ ಸಮಸ್ಯೆ ಸಣ್ಣ ಪ್ರಮಾಣದಲ್ಲಿ ಇದ್ದರೆ ಯಾವುದೇ ಚಿಕಿತ್ಸೆ ಬೇಡ.ಆದರೆ ಇದು ಆಗಾಗ್ಗೆ ಆಗುತ್ತಿದ್ದರೆ ಹೀಗೆ ಮಾಡಿ.ಸರಳವಾದ ಉಪಾಯಗಳನ್ನು ಬಳಸಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ.

 

1. ಪೌಷ್ಟಿಕಾಂಶ, ಖಾರ ಮತ್ತು ಕೊಬ್ಬಿನಂಶ ಕಡಿಮೆ ಇರುವ ಆಹಾರ ಸೇವಿಸಿ.

 

2. ಮದ್ಯ,ಕೆಫೀನ್ ಒಳಗೊಂಡಿರುವ ಚಹಾ,ಕಾಫಿ,ಮತ್ತು ಕೋಲಾಗಳನ್ನು ಕುಡಿಯಬೇಡಿ,ಬೇಕಾದರೆ ಶುಂಠಿ ಸೇವಿಸಿ.

 

3. ಊಟ ಮಾಡಿದ ತಕ್ಷಣ ಮಲಗಬೇಡಿ,ಹೀಗೆ ಮಾಡಿದರೆ ಅನ್ನ ನಾಳಕ್ಕೆ( HCL) ಹೈಡ್ರೋಕ್ಲೋರಿಕ್ ಆಮ್ಲವು ಹೋಗುತ್ತದೆ.

 

4. ಧೂಮಪಾನ ಮಾಡುವುದರಿಂದ ಅದರ ಹೊಗೆಯಲ್ಲಿರುವ ರಾಸಾಯನಿಕ ವಸ್ತುಗಳು ಉದರ ಮತ್ತು ಅನ್ನ ನಾಳದ ಮಧ್ಯದಲ್ಲಿರುವ ಉಂಗುರಗಳನ್ನು ಸಡಿಲ ಗೊಳಿಸುತ್ತದೆ.ಇದರಿಂದಾಗಿ ಆಹಾರವು ಆನ್ನನಾಳಕ್ಕೆ ಮತ್ತೆ ತಿರುಗಿ ನುಗ್ಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಧೂಮಪಾನ ನಿಲ್ಲಿಸಿ.ದೇಹ ತೂಕ ಕಡಿಮೆ ಮಾಡಿಕೊಳ್ಳಿ.ಅಧಿಕ ತೂಕ ಹೊಂದಿದ್ದರೆ ಹೊಟ್ಟೆಯ ಮೇಲೆ ಒತ್ತಡ ಬಿದ್ದು ಆಹಾರ ಗಂಟಲಿಗೆ ಬಂದಂತಾಗುತ್ತದೆ.

 

 

5. ಮೆಂತ್ಯ ಸೊಪ್ಪಿನ ಬಳಕೆಯಿಂದ ಅಜೀರ್ಣ,ಮಲಬದ್ಧತೆಯ ತೊಂದರೆ ನಿವಾರಣೆಯಾಗುತ್ತದೆ.ಕೊಬ್ಬಿನ ಅಂಶವು ಕೂಡ ಕಡಿಮೆಯಾಗುತ್ತದೆ.

6. ಆದಷ್ಟು ಬಿಸಿ ನೀರನ್ನು ಕುಡಿಯಿರಿ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿ ಕೆಲಸ ಮಾಡುತ್ತದೆ.ಆಹಾರವನ್ನು ಬೇಗನೆ ಜೀರ್ಣಗೊಳಿಸುತ್ತದೆ.

 

7. ಜೀರ್ಣಕ್ರಿಯೆಗೆ ಸಹಕಾರಿಯಾಗುವಂತಹ ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡಿರಿ ಕನಿಷ್ಠ ರಾತ್ರಿಯ ಊಟ ಮುಗಿದ ನಂತರ ಹಾಗೆಯೇ ಸ್ವಲ್ಪ ಹೊತ್ತು ನಿಮ್ಮ ಮನೆಯಲ್ಲೂ ಅಥವಾ ಒರಂಡಾದಲ್ಲೋ ನಡೆದಾಡಿ.ಇದು ಕೂಡ ಆಹಾರ ಜೀರ್ಣವಾಗುವುದಕ್ಕೆ ಸಹಾಯಕ ವಾಗಿದೆ.

 

8. ನಾರಿನಂಶವಿರುವ ಹಣ್ಣು ತರಕಾರಿಗಳನ್ನು ಸೇವಿಸಿ ಇದು ಜೀರ್ಣ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ.ಅವು ಯಾವುವೆಂದರೆ
• ನುಗ್ಗೆಕಾಯಿ, ನುಗ್ಗೆಸೊಪ್ಪು.
• ಕಿತ್ತಳೆ ಹಣ್ಣು.
• ಮೂಸಂಬಿ ಹಣ್ಣು
• ಬಾಳೆಹಣ್ಣು.
• ಹಸಿರು ತರಕಾರಿಗಳು.

 

9. ಆದಷ್ಟು ಅಧಿಕ ನೀರನ್ನು ಕುಡಿಯಿರಿ ಮತ್ತು ಹಣ್ಣಿನ ರಸವನ್ನು ಸೇವಿಸಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top