ಉಪ್ಪಯುತ್ತ ಮಾಹಿತಿ

ದಿನ ಹೈವೇಯಲ್ಲಿ ನೀವು ಓಡಾಡುತ್ತಾ ಇದ್ದೀರಾ ಹಾಗಾದ್ರೆ ಭಾರತದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಈ ಕುತೂಹಲಕಾರಿ 10 ವಿಚಾರಗಳ ಬಗ್ಗೆ ತಿಳ್ಕೊಳ್ಳೆಬೇಕು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಾರತದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಈ 10 ವಿಚಾರ ತಿಳ್ಕೊಳಿ

 

ಭಾರತ ಅತ್ಯಂತ ಸುಂದರ ದೇಶವಾಗಿದ್ದು, ಈ ದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕಾರ್ಯದಲ್ಲಿ ದೇಶದ ಪ್ರಮುಖ ನಗರಗಳ ಪಾತ್ರ ಮಹತ್ವದ್ದಾಗಿದೆ. ದೇಶದ ಬೆಳವಣಿಗೆಯಲ್ಲಿ ಇಂತಹ ನಗರಗಳ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳೂ ಸಹ ದೊಡ್ಡ ಮಟ್ಟದ ಕಾಣಿಕೆಯನ್ನು ನೀಡಿವೆ.

 

ಒಂದು ನಗರ ಹೆಚ್ಚು ಬೆಳವಣಿಗೆಯಾಗಬೇಕೆಂದರೆ ಆ ನಗರದ ಮುಖ್ಯರಸ್ತೆ ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸುವ ಗುಣ ಹೊಂದಿರಬೇಕು ಎಂದು ಹಿರಿಯರು ಹೇಳುತ್ತಾರೆ. ದೊಡ್ಡ ದೊಡ್ಡ ನಗರಗಳ ಯಶಸ್ವಿ ಹೆಜ್ಜೆಯ ಹಿಂದೆ ಹೆಚ್ಚಿನ ಮಟ್ಟದ ಕೊಡುಗೆ ನೀಡಿರುವ ಹೆದ್ದಾರಿಗಳ ಬೆಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

 

ಪ್ರಸ್ತುತ ದೇಶದ ಹೆದ್ದಾರಿಯೂ ಎಕ್ಸ್ ಪ್ರೆಸ್ ವೇ, ಗ್ರಾಮೀಣ, ಜಿಲ್ಲೆ ರಸ್ತೆಗಳನ್ನು ಒಟ್ಟುಗೂಡಿಸಿದಾಗ ಭಾರತವು ಒಟ್ಟು 33 ಲಕ್ಷ ಕೀ.ಮೀ. ಉದ್ದದ ರಸ್ತೆ ಜಾಲವನ್ನು ಹೊಂದಿದೆ.

 

1. ಸದ್ಯ ಭಾರತೀಯ ಹೆದ್ದಾರಿಯು ಸುಮಾರು 33(ಅಂದಾಜು) ಲಕ್ಷ ಕಿ.ಮೀ ಉದ್ದವಿದ್ದು ಇದರಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿಗಳು ಮತ್ತು ಇತರ ಗ್ರಾಮೀಣ ಜಿಲ್ಲೆಯ ರಸ್ತೆಗಳು ಒಳಗೊಂಡಿವೆ.

 

 

2. ಭಾರತದಲ್ಲಿ 200ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಿದ್ದು, ಇವುಗಳ ಒಟ್ಟು ಉದ್ದ 92,851.07 ಕೀ.ಮೀ. ಎನ್ನಲಾಗಿದೆ. ಹಾಗೆಯೇ ಭಾರತ ದೇಶ ಒಟ್ಟು 1,31,899 ಕೀ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ಪಡೆದಿದೆ.

 

3. ಕೇವಲ 22,900 ಕಿ.ಮೀ ಉದ್ದದ ರಸ್ತೆಗಳು ಮಾತ್ರ ನಾಲ್ಕು ಹಾಗೂ ಆರು ಲೇನ್‌ಗಳನ್ನು ಪಡೆದಿದ್ದು, ಉಳಿದ ದೇಶದ ಬಹುತೇಕ ಹೆದ್ದಾರಿಗಳು ಡಬಲ್ ಲೇನ್‌ಗಳಾಗಿವೆ.

 

 

4. ದೇಶದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದೇಶದ ಹೆದ್ದಾರಿ ಜಾಲ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

 

5. ಭಾರತೀಯ ರಸ್ತೆಯ ಶೇಕಡ 1.7% ರಷ್ಟು ಪಾಲನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳು, ದೇಶದ 40% ರಸ್ತೆಯ ಸಂಚಾರವನ್ನು ನಿಯಂತ್ರಿಸುತ್ತವೆ ಎಂದರೆ ನೀವು ನಂಬಲೇ ಬೇಕು.

 

 

6. ಎನ್ಎಚ್47 ಕೇವಲ 6 ಕಿಮೀ ಉದ್ದವಿದ್ದು, ದೇಶದ ಅತ್ಯಂತ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಎಂಬ ಖ್ಯಾತಿ ಪಡೆದುಕೊಂಡಿದೆ. ಈ ಹೆದ್ದಾರಿ ಎರ್ನಾಕುಲಂ ಮತ್ತು ಕೊಚ್ಚಿ ಬಂದರಿಗೆ ಸಂಪರ್ಕ ನೀಡುತ್ತದೆ.

 

7. ಎನ್ಎಚ್7 ಹೆದ್ದಾರಿಯು ದೇಶದ ಅತ್ಯಂತ ಉದ್ದದ ರಾಷ್ಟ್ರೀಯ ಹೆದ್ದಾರಿ ಎಂಬ ಖ್ಯಾತಿ ಪಡೆದುಕೊಂಡಿದ್ದು, ಈ ಹೆದ್ದಾರಿ ಮೂಲಕ ವಾರಣಾಸಿದಿಂದ ಕನ್ಯಾಕುಮಾರಿಗೆ ತಲುಪಬಹುದಾಗಿದೆ.

 

 

8. ಕೇಂದ್ರ ಸರಕಾರ ಮಹತ್ತರ ಉತ್ತರ-ದಕ್ಷಿಣ-ಪೂರ್ಣ-ಪಶ್ಚಿಮ ಕಾರಿಡಾರ್ ನಿರ್ಮಾಣದಲ್ಲಿ ತೊಡಗಿದ್ದು, ಬರೋಬ್ಬರಿ 7300 ಕೀ.ಮೀ. ದೂರವನ್ನು ಕ್ರಮಿಸಲಿದೆ. ಉತ್ತರದಿಂದ ದಕ್ಷಿಣಕ್ಕೆ ಜಮ್ಮು ಕಾಶ್ಮೀರದಿಂದ ಆರಂಭವಾಗಲಿರುವ ರಸ್ತೆಯು ಕನ್ಯಾಕುಮಾರಿಯನ್ನು ತಲುಪಲಿದೆ.

 

9. ‘ಸ್ವರ್ಣ ಚತುಷ್ಪಥ’ ಎಂಬ ರಸ್ತೆ ಸಂಪರ್ಕ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಇದು ದೇಶದ ನಾಲ್ಕು ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸಲಿದ್ದು, ಒಟ್ಟು 5846 ಕೀ.ಮೀ. ದೂರವನ್ನು ಕ್ರಮಿಸಲಿದೆ.

 

 

10. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಗಳ ಪ್ರಕಾರ ಸದ್ಯ 30,000 ಕೀ.ಮೀ.ಗಳಷ್ಟು ಉದ್ದದ ನೂತನ ಹೆದ್ದಾರಿಗಳ ನಿರ್ಮಾಣವು ಜಾರಿಯಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top