ಅರೋಗ್ಯ

ಹೆಚ್ಚಿಗೆ ಊಟ ಮಾಡಲ್ಲ ಆದ್ರು ದಪ್ಪ ಆಗ್ತೀನಿ ಅಂತಿರೋರು, ಮೈಯಲ್ಲಿ ನೀರು ಸೇರ್ಕೊಂಡಿರ್ಬಹುದು ನೋಡ್ಕೊಳ್ಳಿ ಈ ಆಯುರ್ವೇದ ಪರಿಹಾರಗಳು ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಾನು ಜಾಸ್ತಿ ಊಟ ಮಾಡಲ್ಲ ಆದ್ರು ದಪ್ಪ ಆಗ್ತೀನಿ ಅಂತ ಇದ್ದೀರಾ ಹಾಗಾದ್ರೆ ದೇಹದಲ್ಲಿ ಅನಾವಶ್ಯಕವಾದ ನೀರು ಸೇರಿಕೊಂಡಿರಬಹುದು ನೋಡ್ಕೊಂಡು ಆಯುರ್ವೇದ ಪರಿಹಾರಗಳು ಮಾಡ್ಕೊಳ್ಳಿ

 

 

ದೇಹದ ವಿವಿಧ ಭಾಗಗಳಲ್ಲಿ ನೀರು ಸೇರಿಕೊಂಡಿರುತ್ತದೆ ಅದು ಹೊರಗೆ ಹೋಗದೆ ದೇಹದ ಒಳಗೆಯೇ ಉಳಿದುಕೊಳ್ಳುತ್ತದೆ , ನೀರು ನಮ್ಮ ರಕ್ತದ ಮೂಲಕ ದೇಹದ ವಿವಿಧ ಭಾಗಗಳಿಗೆ ಸಂಚರಿಸಿ ಅನಾವಶ್ಯಕವಾದ ಹಾಗೂ ಕಶ್ಮಲಯುಕ್ತ ನೀರು ಮೂತ್ರ ಹಾಗೂ ಬೆವರಿನ ರೂಪದಲ್ಲಿ ಹಾಗೂ ಇನ್ನಿತರ ದೇಹದ ಕ್ರಿಯೆಗಳ ರೂಪದಲ್ಲಿ ಹೊರಗೆ ಬರುತ್ತದೆ ಆದರೆ ಕೆಲವು ಸಮಯದಲ್ಲಿ ಈ ರೀತಿಯ ನೀರು ಹೊರಗೆ ಬಾರದೆ ವಿವಿಧ ಸಮಸ್ಯೆಗಳನ್ನು ತಂದೊಡ್ಡುತ್ತದೆ .

ಇದಕ್ಕೆ ಮುಖ್ಯ ಕಾರಣ ದೇಹದಲ್ಲಿನ ಕ್ರಿಯಾಶಕ್ತಿಯ ಕೊರತೆ ಹಾಗೆಯೇ ಲಿವರ್ ,ಕಿಡ್ನಿ ಅಥವಾ ಮೂತ್ರದ ಸಮಸ್ಯೆಗಳಿದ್ದರೂ ಸಹ ದೇಹದಲ್ಲಿ ನೀರು ಸೇರಿಕೊಳ್ಳುವ ಸಮಸ್ಯೆ ಕಾಡುತ್ತದೆ

ದೇಹದಾದ್ಯಂತ ಇರುವ lymphotic ಲಿಂಫೋಟಿಕ್ ಗ್ರಂಥಿಗಳು,ದೇಹಕ್ಕೆ ಅಗತ್ಯವಾದ ಅಂಶಗಳನ್ನು ನೀರಿನಿಂದ ಹೀರಿಕೊಂಡು ರಕ್ತ ಪ್ರಸರಣದ ಮೂಲಕ ಕಶ್ಮಲ ವಸ್ತುಗಳನ್ನು ಹೊರದೂಡುತ್ತದೆ ಆದರೆ ಕೆಲವೊಂದು ಬಾರಿ ನೀರು ದೇಹದ ಒಳಗೆ ಉಳಿದುಕೊಂಡು ಮುಖ ,ಹೊಟ್ಟೆ ,ಕಿಬ್ಬೊಟ್ಟೆ ,ಪುಷ್ಟಿ ಈ ಭಾಗಗಳನ್ನು ದಪ್ಪದಾಗಿ ಕಾಣುವಂತೆ ಮಾಡುತ್ತದೆ .

ಹೊಟ್ಟೆಯಲ್ಲಿ ಅನಾವಶ್ಯಕ ನೀರು ಸೇರಿಕೊಂಡರೆ ಇದಕ್ಕೆ ಜಲೋದರ ಎಂದು ಕರೆಯುತ್ತಾರೆ ascites – ಅಶ್ಚಿಟೆಸ್, ಶ್ವಾಸಕೋಶಗಳಲ್ಲಿ ಹೆಚ್ಚಾಗಿ ನೀರು ಸೇರಿಕೊಂಡರೆ ಇದಕ್ಕೆ Palmonary Edema – ಪಲ್ಮೊನರಿ ಎಡಿಮಾ ಎಂದು ಕರೆಯುತ್ತಾರೆ .

 

 

ಈ ನೀರು ಸೇರುವುದು ಎರಡು ವಿಧವಾಗಿ ಇರುತ್ತದೆ ಮೊದಲಿಗೆ ದೇಹದ ಎಲ್ಲಾ ಭಾಗಗಳಿಗೂ ಸೇರುತ್ತದೆ ಅಥವಾ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ನೀರು ಹೆಚ್ಚಾಗಿ ಸೇರುತ್ತದೆ .

ಈ ಸಮಸ್ಯೆಯನ್ನು ಹೇಗೆ ಕಂಡು ಹಿಡಿಯುವುದು

ಮೊದಲಿಗೆ ಮುಖ ಊದಿಕೊಳ್ಳುತ್ತದೆ ,ಕಾಲುಗಳು ಪಾದಗಳು ಗಂಟಲು ಮೊಣಕಾಲು ಇವೆಲ್ಲವೂ ಮೊದಲಿಗಿಂತ ಹೆಚ್ಚಾಗಿ ಊದಿಕೊಳ್ಳುತ್ತವೆ ಹೊಟ್ಟೆ ಅನಾವಶ್ಯಕವಾಗಿ ದಪ್ಪವಾಗುತ್ತದೆ ಹಾಗೆಯೇ ಹೊಟ್ಟೆ ಮೇಲೆ ನಿಧಾನವಾಗಿ ಒತ್ತಿದರೆ ಒಳಗಿನಿಂದ ಶಬ್ದ ಬರಲು ಶುರುವಾಗುತ್ತದೆ .

ಉಸಿರಾಟದಲ್ಲಿ ಕೊಂಚ ಏರುಪೇರು ಹಾಗೂ ಸುಸ್ತು ಅನಿಸುವುದು ಹಾಗೆಯೇ ಶ್ವಾಸಕೋಶದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುವುದು ಹಾಗೆಯೇ ನಡೆಯಲು ಸಹ ಸುಸ್ತಾದಂತೆ ಅನ್ನಿಸಲು ಶುರುವಾಗುತ್ತದೆ .

 

 

ಪರಿಹಾರ ಮಾರ್ಗಗಳು

ಉತ್ತರಾಣಿ ,ಗೋಕ್ಷುರಾ ಹಾಗೂ ಇನ್ನಿತರ ಆಯುರ್ವೇದ ಮೂಲಿಕೆಗಳ ಮೂಲಿಕೆಗಳು ಈ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಸೂಚಿಸುತ್ತದೆ .

ಶರೀರದಲ್ಲಿ ಸೇರಿಕೊಂಡಿರುವ ಅನಗತ್ಯ ನೀರು ಹೊರಗೆ ಹೋಗಲು ಮಜ್ಜಿಗೆ, ತುಪ್ಪ, ಜೇನು ತುಪ್ಪ, ಬೆಲ್ಲ ,ಕಹಿಯಾದ ಪದಾರ್ಥಗಳು, ಮೊಸರು, ಬಾರ್ಲಿ, ಗೋಧಿ, ಅನ್ನ, ಉಪ್ಪು ,ಹರಳೆಣ್ಣೆ ,ಎಳ್ಳೆಣ್ಣೆ ಇವುಗಳನ್ನು ಹೆಚ್ಚಾಗಿ ಬಳಸಬೇಕು .

ಐವತ್ತು ಗ್ರಾಂ ನಷ್ಟು ಬಾರ್ಲಿ ನೀರನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬರಬೇಕು ಇದು ದೇಹದಲ್ಲಿನ ನೀರನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

 

ಕಾಲಿನಲ್ಲಿ ನೀರು ಸೇರಿಕೊಂಡಿದ್ದರೆ ಹೆಚ್ಚಾಗಿ ಕೂತು ಕೊಳ್ಳಬೇಡಿ ಆದಷ್ಟು ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೆಯೇ ಕಾಲನ್ನು ಮಲಗುವಾಗ ಸ್ವಲ್ಪ ಎತ್ತರಕ್ಕೆ ಇಟ್ಟುಕೊಂಡು ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಿ

ದೇಹದಲ್ಲಿ ನೀರು ಹೆಚ್ಚಾಗಿ ಸೇರಿಸಿಕೊಂಡಿದ್ದರೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚದಷ್ಟು ಜೇನುತುಪ್ಪವನ್ನು ಬೆರೆಸಿಕೊಂಡು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top