ಅರೋಗ್ಯ

ವಿಟಮಿನ್ ಸಿ ಕಡಿಮೆ ಆದ್ರೆ ಬರೋ ಖಾಯಿಲೆಗಳು ಮತ್ತು ವಿಟಮಿನ್ ಸಿ ತುಂಬಿರೋ ಆಹಾರಗಳ ಮಾಹಿತಿ ..

ವಿಟಮಿನ್ಸಿ.

ವಿಟಮಿನ್ಸಿ ಇದು ನೀರಿನಲ್ಲಿ ಕರಗುವ ವಿಟಮಿನ್.ಇದು ಅಧಿಕವಾಗಿ ಉಳಿ ಬರುವ ಪದಾರ್ಥಗಳಲ್ಲಿ ಜಾಸ್ತಿ ಇರುತ್ತದೆ.

 

ವಿಟಮಿನ್ಸಿ ಆಹಾರದ ಮೂಲಗಳು ಸಾಮಾನ್ಯವಾಗಿ ಸಸ್ಯಹಾರಿ ಆಹಾರದಲ್ಲಿ ಇರುತ್ತದೆ.ಅವು ಯಾವುವೆಂದರೆ

 

1.ಕಿತ್ತಳೆ ಹಣ್ಣು:

 

ಈ ಕಿತ್ತಳೆ ಹಣ್ಣಿನಲ್ಲಿ ಇದು ಹಣ್ಣಿಗಿಂತ ಜಾಸ್ತಿ ನೀವು ಕಿತ್ತಳೆ ಹಣ್ಣನ್ನು ಸುಲಿದಾಗ ಸಿಗುವ ಬಿಳಿಯ ಪದರ ಇದೆಯಲ್ಲ ಅದರಲ್ಲಿ  ವಿಟಮಿನ್ಸಿ  ಜಾಸ್ತಿ ಇದೆ.

 

2.ನಿಂಬೆಹಣ್ಣು:

 

ಇದು ಉಳಿಯ ಪದಾರ್ಥವೆ ಇದು ಸಾಮಾನ್ಯವಾಗಿ ಇತ್ತಲಿನಲ್ಲಿ ಇಲ್ಲ ತೋಟದಲ್ಲಿ ಬೆಳೆಯುತ್ತಾರೆ. ಇದರಲ್ಲಿ ನಾವು ಚಿತ್ರಾನ್ನ,ನಿಂಬೆ ಹಣ್ಣಿನ ಜ್ಯೂಸ್ ಮಾಡುತ್ತೇವೆ.

 

3.ಸೀಬೇಕಾಯಿ ಅಥವಾ ಬಿಕ್ಕೆಹಣ್ಣು:

 

ಇದನ್ನು ಬಡವರ ಸೇಬು ಎಂದೇ ಕರೆಯುತ್ತಾರೆ. ಯಾಕೆಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೇಬಿಗೆ ಮಾರ್ಕೆಟ್ ನಲ್ಲಿ ಬೆಲೆ ಜಾಸ್ತಿ ಸಿಬೇಕಾಯಿಗಾದರೆ ಕಡಿಮೆ ಬೆಲೆ ಮತ್ತು ಸೇಬಿನಲ್ಲಿರುವ ಎಲ್ಲ ಪೋಷಕಾಂಶಗಳು ಇದರಲ್ಲೂ ಇವೆ ಹೇಳಬೇಕೆಂದರೆ ಅದಕ್ಕಿಂತ ಜಾಸ್ತಿಯೇ ಇದೆ. ಗಿಡದ ಎಲೆಗಳನ್ನು ಸುಮ್ಮನೇ ಬಾಯಿಗೆ ಹಾಕಿಕೊಂಡು ಜಗಿದರು ಹಲ್ಲುನೋವು, ವಸಡಿನ ತೊಂದರೆ ನೋವನ್ನು ಇದು ಬೇಗ ಕಡಿಮೆ ಮಾಡುತ್ತದೆ.ಇದನ್ನು ಆಯುರ್ವೇದದಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ.

 

5.ನೆಲ್ಲಿಕಾಯಿ:

 

ಇದು ಎಲ್ಲಾ ಕಡೆಯೂ ಬೆಳೆಯುತ್ತವೆ.ಇದರಲ್ಲಿ ಕೂಡ ತುಂಬಾ ಉಳಿಯಿದ್ದು ಇದರಲ್ಲಿ ಕೂಡ ವಿಟಮಿನ್ಸಿ  ಅಧಿಕವಾಗಿದೆ.ಇದು ಕೂದಲು ಸೊಂಪಾಗಿ ಬೆಳೆಯುವುದಕ್ಕೂ  ಸಕಾರಿಯಾಗಿದೆ.

 

6.ಟೊಮ್ಯಾಟೊ:

 

ಇದರಲ್ಲಿ ಕೂಡ ಉಳಿ ಪದಾರ್ಥವೆ.

7.ದ್ರಾಕ್ಷಿ:

 

ದ್ರಾಕ್ಷಿಯಲ್ಲಿ ಎರಡು ವಿಧ ಕಡು ಕೆಂಪು  ದ್ರಾಕ್ಷಿ, ಮತ್ತು ಹಸಿರು ದ್ರಾಕ್ಷಿ.ದ್ರಾಕ್ಷಿಯಲ್ಲಿ ವಿಟಮಿನ್ಸಿ ಅಷ್ಟೆಅಲ್ಲ ಕ್ಯಾನ್ಸರ್ ನಂತಹ ರೋಗ ಕಣಗಳ ವಿರುದ್ಧ  ಹೋರಾಡುವ ಸಾಮರ್ಥ್ಯ ಇದಕ್ಕಿದೆ.

 

8.ಹುಣಸೆಹಣ್ಣು:

 

ಇದರಲ್ಲಿ ಕೂಡ ವಿಟಮಿನ್ ಸಿ  ಇದೆ .ಇದನ್ನು ನಮ್ಮ ಮನೆಗಳಲ್ಲಿ ಅಡುಗೆಗೆ ಬಳಸುತ್ತೇವೆ.

 

9.ಮೂಸಂಬಿ:

 

ಹಣ್ಣಿನಲ್ಲೂ ವಿಟಮಿನ್ಸಿ ಹೇರಳವಾಗಿದೆ.

10.ಕಿವಿ ಹಣ್ಣು:

 

ಇದರ ಬೆಲೆ ಜಾಸ್ತಿ ಇದು ನಮ್ಮ.ಭಾರತದಲ್ಲಿ ಬೆಳೆಯುವುದು ಕಡಿಮೆ.ಅದಕ್ಕೆ ಇದ್ದಕ್ಕೆ ಬೆಲೆ ಜಾಸ್ತಿ.ಇದರಲ್ಲಿ  ವಿಟಮಿನ್ಸಿ ಅಷ್ಟೇ ಅಲ್ಲದೇ ಕೆಂಪು ರಕ್ತಕಣಗಳನ್ನು ಜಾಸ್ತಿ ಮಾಡುವ ಶಕ್ತಿ ಸಾಮರ್ಥ್ಯ ಇದೆ.

 

11.ಸ್ಟ್ರಾಬೆರ್ರಿ:

 

ಇದು ಕೆಂಪು ಮತ್ತು ಚಿಕ್ಕಾದಾಗಿರುವ ನೋಡಲು ತುಂಬಾ ಆಕರ್ಷಣೆ ಹೊಂದಿರುವ ಹಣ್ಣು.ಇದರಲ್ಲಿ ಐಸ್ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

 

12.ಕ್ಯಾಪ್ಸಿಕಂ:

 

ಇದರಲ್ಲಿ ಕೂಡ ವಿಟಮಿನ್ಸಿ ಅಧಿಕವಾಗಿದೆ.

 

ಕಾರ್ಯಗಳು.

ವಿಟಾಮಿನ್ಸಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ರೋಗನುಗಳ ಜೊತೆ ಹೋರಾಡುತ್ತದೆ ,ಸೋಂಕನ್ನು ತಡೆಗಟ್ಟುತ್ತದೆ.

 

ವಸಡಿನಿಂದ  ಉಂಟಾಗುವ ರಕ್ತಸ್ರಾವವನ್ನು ಪೂರ್ತಿಯಾಗಿ ಕಡಿಮೆ ಮಾಡಿ ವಾಸಿ ಮಾಡುತ್ತದೆ.

 

ಚರ್ಮದ ಸುಕ್ಕನ್ನು ತಡೆಗಟ್ಟಿ,ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ,ಅಷ್ಟೆ ಅಲ್ಲದೆ ತುಂಬಾ ಅಧಿಕವಾಗಿ ಉತ್ಕರ್ಷಣ ಶಕ್ತಿಯನ್ನು ಹೊಂದಿದೆ.

 

ನೆಗಡಿ,ಕೆಮ್ಮನ್ನು ಕೂಡ ಕಡಿಮೆ ಮಾಡುತ್ತದೆ .ಅವುಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ.

 

ಅಷ್ಟೇ ಅಲ್ಲದೆ ನಮ್ಮ ರಕ್ತದಲ್ಲಿರುವ ಬಿಳಿಯ ರಕ್ತ ಕಣಗಳನ್ನೂ ಹೆಚ್ಚಿಸುತ್ತದೆ.

 

ನಮ್ಮ ದೇಹದಲ್ಲಿ ಪ್ರತಿ ರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊರತೆ:

 

ವಿಟಮಿನ್ಸಿ ಕೊರತೆಯಿಂದ ನಮ್ಮ ದೇಹದಲ್ಲಿ ಸ್ಕ್ಯಾರ್ವಿ(scurvy) ಎನ್ನುವ ಖಾಯಿಲೆ ಬರುತ್ತದೆ.ಇದು ದೊಡ್ಡವರಿಗಿಂತ  ಸಾಮನ್ಯವಾಗಿ ಮಕ್ಕಳಲ್ಲಿ ಅಧಿಕಹಾಗೆಂದರೆ ಅದರ ಅರ್ಥ  ರಕ್ತಸ್ರಾವದ ಖಾಯಿಲೆ.ಮೊದಲು ನಮ್ಮ ಹಲ್ಲಿನ ವಸಡುಗಳಲ್ಲಿ ಕಾಣಿಸಿಕೊಳ್ಳಬಹುದು ನಂತರ ನಮ್ಮ ಶರೀರದೊಳಗೆ ರಕ್ತಸ್ರಾವವಾಗುತ್ತದೆ. ಅದು ನಮಗೆ ಕಾಣಿಸುವುದಿಲ್ಲ.ಹಲ್ಲಿನ ವಸಡಿನಲ್ಲಿ ರಕ್ತಸ್ರಾವ ಆಗುವುದು ಮಾತ್ರ ಗೊತ್ತಾಗುತ್ತದೆ.ಆದ್ದರಿಂದ ಮೇಲೇ ಹೇಳಿರುವ ಹಣ್ಣು ತರಕಾರಿಗಳನ್ನು ಸೇವಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top