ಭವಿಷ್ಯ

ಮಾರ್ಚ್ 27 : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೨೭ ಮಾರ್ಚ್ ೨೦೧೮
ಸೂರ್ಯೋದಯ : ೦೬:೨೨
ಸೂರ್ಯಾಸ್ತ : ೧೮:೨೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಚೈತ್ರ
ಪಕ್ಷ : ಶುಕ್ಲ ಪಕ್ಷ
ತಿಥಿ : ಏಕಾದಶೀ
ನಕ್ಷತ್ರ : ಪುಷ್ಯ
ಯೋಗ : ಸುಕರ್ಮ
ಪ್ರಥಮ ಕರಣ : ವಣಿಜ
ಸೂರ್ಯ ರಾಶಿ : ಮೀನ
ಅಭಿಜಿತ್ ಮುಹುರ್ತ : ೧೨:೦೦ – ೧೨:೪೯
ದುರ್ಮುಹೂರ್ತ : ೦೮:೪೭ – ೦೯:೩೫
ದುರ್ಮುಹೂರ್ತ : ೨೩:೧೩ – ೨೪:೦೦+
ರಾಹು ಕಾಲ: ೧೫:೨೬ – ೧೬:೫೬
ಗುಳಿಕ ಕಾಲ: ೧೨:೨೫ – ೧೩:೫೫
ಯಮಗಂಡ: ೦೯:೨೩ – ೧೦:೫೪

ಮೇಷ (Mesha)

 

ಜೀವನದ ಪಥ ಸರಾಗವಾಗಿ ಆಗುತ್ತಿರುವುದು. ನಿಮಗೆ ಸಂತಸ ತರುವುದು. ಇದರ ಹಿಂದೆ ಗುರು ಹಿರಿಯರ ಆಶೀರ್ವಾದದಿಂದ ಮಾತಾಪಿತರ ತ್ಯಾಗವಿದೆ ಎಂಬುದನ್ನು ಮರೆಯದಿರಿ. ಯಾವುದನ್ನು ದಿಢೀರನೆ ತೀರ್ಮಾನ ಮಾಡುವುದು ಸೂಕ್ತವಲ್ಲ.

 

ವೃಷಭ (Vrushabha)

ಸುಖಸ್ಥಾನದ ಶುಭಗ್ರಹ ಸಂಚಾರದಿಂದಾಗಿ ಮನೆ, ಮಡದಿ, ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು. ಇದರ ಜತೆ ವಾಹನ ಸುಖವೂ ದೊರೆತು ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ಮಿಥುನ (Mithuna)

ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವವು. ನಿಮ್ಮ ಹೆಸರನ್ನು ಹೇಳಿ ಬೇರೆಯವರು ತಮ್ಮ ಕೆಲಸವನ್ನು ಸಾಧಿಸಿಕೊಳ್ಳುವರು. ಅಂತಹವರ ಬಗ್ಗೆ ಎಚ್ಚರದಿಂದ ಇರಬೇಕು.ಉತ್ತಮ ಆರೋಗ್ಯ ರಕ್ಷ ಣೆಗಾಗಿ ಸೂರ್ಯನಾರಾಯಣನನ್ನು ಪ್ರಾರ್ಥಿಸಿರಿ.

ಕರ್ಕ (Karka)

ಮನಬಂದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸುಲಭ. ಆದರೆ ಅವುಗಳನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗುವಿರಿ. ಈ ಬಗ್ಗೆ ಅನುಭಾವಿಗಳ ಸಹಾಯ ಪಡೆಯುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಕೊರತೆಯಿಲ್ಲ.

ಸಿಂಹ (Simha)

ನಡೆಯುವ ವ್ಯಕ್ತಿಯು ಎಡವುವಂತೆ ಮಾಡುವುದೇ ಶನಿ ಕಾಡಾಟದ ಕುರುಹು ಆಗಿರುತ್ತದೆ. ಆದರೆ ಅದರಿಂದ ವಿಚಲಿತರಾಗದೆ ಮುಂದೆ ಹೆಜ್ಜೆ ಹಾಕಿರಿ. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸಿರಿ.

 

ಕನ್ಯಾರಾಶಿ (Kanya)

ಈದಿನ ನಿಮ್ಮ ಪಾಲಿನ ಕರ್ತವ್ಯವನ್ನು ಮಾಡಬೇಕು. ಆದರೆ ಆ ಬಗ್ಗೆ ಪ್ರತಿಫಲವನ್ನು ಅಪೇಕ್ಷಿಸುವಂತಿಲ್ಲ. ಆದಾಗ್ಯೂ ಕೊನೆಗೆ ನಿಮಗೆ ಸಲ್ಲಬೇಕಾದ ಎಲ್ಲ ಸವಲತ್ತುಗಳು ನಿಧಾನ ರೀತಿಯಾಗಿ ನಿಮ್ಮನ್ನು ಸೇರುವುದು.

 

ತುಲಾ (Tula)

ಭಾವನಾತ್ಮಕ ಒತ್ತಡಗಳಿಗೆ ಸಿಲುಕದಿರಿ. ಪ್ರಯತ್ನಶೀಲರಿಗೆ ಜಯವು ದೊರೆಯುವುದು. ಗುರುವಿನ ಕೃಪೆಗಾಗಿ ಪ್ರಾರ್ಥನೆ ಮಾಡಿರಿ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ ಇದ್ದು ಶಿವನ ಆರಾಧನೆಯಿಂದ ಒಳಿತಾಗುವುದು. ಆದರೆ ಅದಕ್ಕಾಗಿ ದೃತಿಗೆಡದೆ ಮರಳಿ ಯತ್ನವ ಮಾಡುವುದರಿಂದ ಯಶಸ್ಸನ್ನು ಹೊಂದುವಿರಿ.

 

ವೃಶ್ಚಿಕ (Vrushchika)

ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಅತಿಯಾದ ಸ್ವಾಭಿಮಾನವು ಇತರರಿಗೆ ಅಹಂ ಆಗಿ ತೋರುವುದು. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿರಿ.

 

ಧನು ರಾಶಿ (Dhanu)

ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಅನ್ಯರೂ ಕೂಡಾ ನಿಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ತಡೆಯಿರಿ. ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಮಕರ (Makara)

ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ.

 

ಕುಂಭರಾಶಿ (Kumbha)

ವಿವಾಹ ಆಕಾಂಕ್ಷಿಗಳಿಗೆ ಈದಿನ ಶುಭ ಸಮಾಚಾರ ಬರುವುದು. ಕೆಲವರಿಗೆ ಮದುವೆಯೂ ನಿಶ್ಚಯವಾಗುವ ಸಂದರ್ಭವಿರುತ್ತದೆ. ಬದುಕಿನ ಬಹುಮುಖ್ಯ ನಿರ್ಣಯವೊಂದನ್ನು ಇಂದು ನೀವು ಕೈಕೊಳ್ಳಬೇಕಾಗುವುದು.ಸ್ಪಷ್ಟ ನಡೆಯ ಸ್ವಭಾವವುಳ್ಳ ನೀವು ಅದನ್ನು ಇಂದು ಜಾರಿಗೆ ತರುವಿರಿ.

 

ಮೀನರಾಶಿ (Meena)

ಕೆಲಸದ ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಆದರೆ ಅದಕ್ಕಾಗಿ ಹೆಚ್ಚು ಚಿಂತಿಸಬೇಕಿಲ್ಲ. ಆದ್ಯತೆಯ ಮೇರೆಗೆ ಮೊದಲು ಬಂದ ಕೆಲಸವನ್ನು ಮೊದಲು ಮುಗಿಸಿ. ಕಾರ್ಯದ ವೇಳಾಪಟ್ಟಿ ಇರಲಿ.ಮನೆಯಲ್ಲಿ  ಕೆಲವು ಅನಪೇಕ್ಷಿತ ಘಟನೆಗಳಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಗುರುವಿನ ಧ್ಯಾನದಿಂದ ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top