ಸಿನಿಮಾ

ಡಾ ರಾಜ್ ಕುಮಾರ್ ರವರ ಮೊಮ್ಮಗನಿಗೆ ಕೂಡಿಬಂತು ಕಂಕಣ ಭಾಗ್ಯ

ವರನಟ ಡಾ ರಾಜ್ ಕುಮಾರ್ ಅವರ ಮಗಳಾದ ಲಕ್ಷ್ಮಿ ಅವರ ಮಗ ಷಣ್ಮುಖ ಅವರ ವಿವಾಹ ಸಾಗರದ ಖ್ಯಾತ ವಕೀಲ ರಾಗಿರುವ ಬರೂರು ಗ್ರಾಮದ ನಾಗರಾಜ್ ಪುತ್ರಿ ಸಿಂಧು ಜೊತೆ ಇಂದು ನೆರವೇರಲಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ನಿಶ್ಚಿತಾರ್ಥವ ಕಾರ್ಯಕ್ರಮ ಸಾಗರದಲ್ಲೇ ಮಾಡಲಾಗಿತ್ತು. ವಿವಾಹ ಸಮಾರಂಭವನ್ನು ಶಿವಮೊಗ್ಗದ ನವಿಲೆ ರಸ್ತೆಯಲ್ಲಿರುವ ಸರ್ಜಿ ಇಂಟರ್‌ನ್ಯಾಷನಲ್ ಕಲ್ಯಾಣ ಮಂಟಪದಲ್ಲಿ ಎರಡು ಮಾಡಲಾಗಿದೆ.

 

 

 

ಅಣ್ಣಾವ್ರ ಕುಟುಂಬದ ಎಲ್ಲ ಸದಸ್ಯರು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಶಿವಣ್ಣ, ರಾಘವೇಂದ್ರ ರಾಜಕುಮಾರ್, ಪುನೀತ್ ಮದುವೆಯಲ್ಲಿ ಭಾಗವಹಿಸಿ ವಧು ವರರಿಗೆ ಶುಭಾಶಯ ಕೋರಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಈಗಾಗಲೇ ನಿನ್ನೆ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಶಾಸ್ತ್ರಗಳಲ್ಲಿ ವಿಜಯ್ ರಾಘವೇಂದ್ರ ಅವರ ತಂದೆ ಚಿನ್ನೇಗೌಡ್ರು ಸೇರಿದಂತೆ ಬಂಧುಗಳು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top