ಸಿನಿಮಾ

ತೆಲುಗಿನ ಅರ್ಜುನ್‌ ರೆಡ್ಡಿಗೆ ಠಕ್ಕರ್ ಕೊಡ್ತಾರಾ ಡಾಲಿ ಧನಂಜಯ

ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಬಹುಶಃ ಆ ಪಾತ್ರವನ್ನು, ನಟನೆಯನ್ನು ಮೆಚ್ಚಿಕೊಳ್ಳದವರೇ ಇಲ್ಲವೇನೋ. ಈವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಧನಂಜಯ್ ಅವರಿಗೆ ಟಗರು ಚಿತ್ರ ಬೇರೆಯದ್ದೇ ಐಡೆಂಟಿಟಿಯನ್ನು ಕೊಡ ಮಾಡಿದೆ.

 

 

ಇತ್ತೀಚಿಗೆ ತೆಲುಗುವಿನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಅರ್ಜುನ್‌ ರೆಡ್ಡಿ ಸಿನಿಮಾ ಈಗ ಕನ್ನಡಕ್ಕೆ ರಿಮೇಕ್ ಆಗಲಿದೆ ಎಂದು ತಿಳಿದು ಬಂದಿದೆ. ಟಗರು ಚಿತ್ರದಲ್ಲಿ ಸದ್ದು ಮಾಡಿದ ಡಾಲಿ ಧನಂಜಯ ಅಭಿನಯ ಮಾಡಲಿದ್ದಾರೆ ಎಂಬ ಸುದ್ದಿ ಈಗ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

 

 

ಟಗರು ಸಿನಿಮಾದಲ್ಲಿ ಮಾಸ್‌ ಹಾಗು ರೊಮ್ಯಾಂಟಿಕ್‌ ಲುಕ್‌ನಲ್ಲಿ ಅದ್ಬುತ ನಟನೆ ಮಾಡಿರುವ ಧನಂಜಯ ಅರ್ಜುನ್‌ ರೆಡ್ಡಿ ಚಿತ್ರದ ಪಾತ್ರಕ್ಕೆ ಪಕ್ಕಾ ಸೂಟ್‌ ಆಗುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಅರ್ಜುನ್‌ ರೆಡ್ಡಿ ಚಿತ್ರದ ಕನ್ನಡ ರೈಟ್ಸ್‌ನ್ನು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ತಂದಿದ್ದು, ಅವರು ಸಹ ಯಾರಿಗೆ ಮಾರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಧನಂಜಯ ನಟಿಸುತ್ತಾರೆ ಎಂಬ ಸುದ್ದಿ ಮಾತ್ರ ಈಗ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top