ಅರೋಗ್ಯ

ವಿಟಮಿನ್-ಎ ಇಲ್ಲ ಅಂದ್ರೆ ಕಣ್ಣಿನ ಮತ್ತೆ ಚರ್ಮದ ಸಮಸ್ಯೆ ಬರುತ್ತೆ ಅದರ ಬಗ್ಗೆ , ಇದಕ್ಕೆ ತಿನ್ನಬೇಕಾದ ಆಹಾರಗಳ ಬಗ್ಗೆ ತಿಳ್ಕೊಳ್ಳಿ ..

ವಿಟಮಿನ್ಗಳ ಬಗ್ಗೆ ನಿಮಗೆಷ್ಟು ಗೊತ್ತು.

 

ನಮ್ಮ ದೇಹದ ಕಾರ್ಯ ನಿರ್ವಹಣೆಗೆ ವಿಟಮಿನ್ಗಳು ಅತ್ಯಗತ್ಯ ಅವು ಪ್ರತಿದಿನ ತಿನ್ನುವ ಆಹಾರಗಳಲ್ಲಿ ಅಡಗಿರುತ್ತವೆ. ವಿಟಮಿಗಳಲ್ಲಿ ಅನೇಕ ವಿಧಗಳಿವೆ ಅದರಲ್ಲಿ ಮುಖ್ಯವಾಗಿ ಎರಡು ವಿಧ

 

1.ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳು.

ವಿಟಮಿನ್ A,D,E,K.

2.ನೀರಿನಲ್ಲಿ ಕರಗುವ ವಿಟಮಿನ್ಗಳು. ಬಿ ಸಂಕೀರ್ಣ ಗುಂಪುಗಳ ವಿಟಮಿನ್ಗಳು.

ವಿಟಮಿನ್-ಸಿ

 

ವಿಟಮಿನ್-A:

ಇದರ ಬಗ್ಗೆ ಇಂದು ತಿಳಿಯೋಣ ಬನ್ನಿ.ಇದು ಬಹಳ ಅತ್ಯವಶ್ಯಕವಾದ ವಿಟಮಿನ್ ಆಗಿದ್ದು.ಇದು ನಾವು ಆಹಾರವಾಗಿ ತಿನ್ನಲು ಬಳಸುವ ಆಹಾರದ  ಸಸ್ಯಗಳ ಮೂಲಗಳಲ್ಲಿ ಗಿಡಗಳು ಪ್ರಾಣಿಗಳ ಮೂಲಗಳಲ್ಲಿ ಇರುತ್ತದೆ.

 

 

ನಮ್ಮ ಶರೀರದಲ್ಲಿ  ಕಣ್ಣು, ಚರ್ಮ,ಮೂಳೆಗಳ ಬೆಳವಣಿಗೆ,ಸಂತಾನೋತ್ಪತ್ತಿಯ ಕ್ರಿಯೆಗೆ,ಉತ್ಕರ್ಷಣ ನಿರೋಧಕ ಶಕ್ತಿಯನ್ನು ನೀಡುವ  ಕಾರ್ಯಗಳನ್ನು ಮಾಡುತ್ತದೆ.

 

ವಿಟಮಿನ್-ಎ ಎರಡು ರೀತಿಯಲ್ಲಿ ಇರುತ್ತದೆ ಸಸ್ಯಗಳಲ್ಲಿ ಕೆರೊಟಿನೈಡ್  ಪಿಗಮೆಂಟ್ ಗಳಾಗಿ ಮತ್ತು ಪ್ರಾಣಿಗಳಲ್ಲಿ ರೇಟಿನಯ್ಡ್ಸ್ ಆಗಿ ಇರುತ್ತದೆ.

ಸಸ್ಯ ಆಹಾರದ ಮೂಲಗಳು:ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಧಿಕವಾಗಿದೆ.

 

ಎಲ್ಲಾ ಹಳದಿ ಬಣ್ಣದ ಹಣ್ಣು ತರಕಾರಿಗಳಲ್ಲಿ ಇದು ಹೇರಳವಾಗಿದೆ.

 

ಮಾವಿನ ಹಣ್ಣು

ಕುಂಬಳಕಾಯಿ

ಪರಂಗಿ ಹಣ್ಣು

ಗೋಡಂಬಿ ಹಣ್ಣು

ಪೀಚ್ಗಳು

ಎಪ್ರಿಕಾಟ್ಗಳು

ಕ್ಯಾಂಟಲೊಪಗಳು

ಸಿಹಿ ಕುಂಬಳಕಾಯಿ.

 

ಹಚ್ಚ ಹಸಿರು ತರಕಾರಿಗಳು:ಬೀಟ್ರೂಟ್ ನ್ ಎಲೆಗಳು,ನುಗ್ಗೆ ಸೊಪ್ಪು,ಕೊತ್ತಂಬರಿ ಸೊಪ್ಪು,ಸಾಸಿವೆ ಗಿಡದ ಎಲೆಗಳು,ಪಾಲಕ್ ಸೊಪ್ಪು,ಮೂಲಂಗಿ ಎಲೆಗಳು,ದಂಟಿನ ಸೊಪ್ಪು,ಎಲೆ ಕೋಸು ಇವುಗಳಲ್ಲಿ ವಿಟಮಿನ್-ಎ ಇದೆ.

 

ಬೇರೆ ಆಹಾರದ ಮೂಲಗಳು-ಮೊಟ್ಟೆ, ಹಾಲು,ಹಾಲಿನ ಉತ್ಪನ್ನಗಳಲ್ಲಿ,ಮೀನು,ಮೀನಿನ ಎಣ್ಣೆ ಇನ್ನೂ ಅನೇಕ.

 

ವಿಟಮಿನ್-ಎ ನ ಕೊರತೆಯಿಂದಾಗಿ ಉಂಟಾಗುವ ತೊಂದರೆಗಳು.

ಇದರ ಕೊರತೆಗಳು ಸಾಮಾನ್ಯವಾಗಿ ಬೆಳವಣಿಗೆ ಒಂದುತ್ತಿರುವ ದೇಶಗಲ್ಲಿ ಅಧಿಕವಾಗಿದೆ,ನಮ್ಮ ಭಾರತವೂ ಕೂಡ ಈಗ ಅಭಿವೃದ್ಧಿ ಹೊಂದುತ್ತಿರುವ ದೇಶ ಆದ್ದರಿಂದ ಅಂದರೆ,ಬಡತನ ದಲ್ಲಿರುವವರಲ್ಲಿ ಇದರ ಕೊರತೆಯಿಂದಾಗಿ ಉಂಟಾಗುವ ಸಮಸ್ಯೆಗಳು  ಅಧಿಕವಾಗಿವೆ.

 

 

1.ರಾತ್ರಿ ಕುರುಡುತನ;ಅಂದರೆ ರಾತ್ರಿಯ ಸಮಯದಲ್ಲಿ ಇವರಿಗೆ ಕಣ್ಣು ಕಾಣಿಸುವುದಿಲ್ಲ.ಇದೆ ಇದರ ಕೊರತೆಯಿಂದ ಉಂಟಾಗುವ ಮೊದಲ ಲಕ್ಷಣವಾಗಿದೆ.ಇದನ್ನು ಇರುಳು ಕುರುಡು ಎಂದು ಕೂಡ ಕರೆಯುತ್ತಾರೆ.

 

 

2.ಸಂಯೋಗದ ಕ್ಷೋಭೆ:ಇದರಲ್ಲಿ (conjuctival xerosis) ಕಣ್ಣಿನ ಬಿಳಿಯ ಪದರವು ಪೂರ್ತಿಯಗಿ ಒಣಗಿ ಕಳೆಗುಂದುತ್ತದೆ.ಆಗ ಕಣ್ಣಿನ ಬಿಳಿ  ಪದರವು ದಪ್ಪದಾಗಿ,ಸುಕ್ಕಲು ಬಂದಂತಾಗುತ್ತದೆ.

 

 

3.ಬೈಠಟ್ಸ್ ತಾಣಗಳು(bitots spots):ವಿಟಮಿನ್-ಎ  ನ ಕೊರೆತೆಯೂ ಜಾಸ್ತಿಯಾದಲ್ಲಿ ಕೊಳಕು,ನಯವಾದ ಬೆಳೆದ ತಾಣಗಳು ಬಿಳಿಯ ಪರದೆಯ ಮೇಲೆ ಉಂಟಾಗುತ್ತವೆ.

 

 

ಹೀಗೆ ಇನ್ನು ಅನೇಕ ಕಣ್ಣಿನ ಖಾಯಿಲೆಗಳು ಮತ್ತು ಚರ್ಮದ ಖಾಯಿಲೆಗಳು ಉತ್ಪತಿ ಯಾಗುತ್ತವೆ.

 

 

ಇದನ್ನು ತಡೆಯಲು ಸರ್ಕಾರವೂ1970ರಲ್ಲಿ ಭಾರತ ಸರ್ಕಾರ ವಿಟಮಿನ್-ಎ  ಪೂರಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಎಲ್ಲಾ ಮಕ್ಕಳು ಶಾಲೆಗೆ ಹೋಗುವ ಮುನ್ನ ಒಂದು ಟೀ ಚಮಚ ದಷ್ಟು ವಿಟಮಿನ್-ಎ ಯನ್ನು ಸರ್ಕಾರದ ವತಿಯಿಂದ ಕೊಡುತ್ತಾರೆ.ಇದರಲ್ಲಿ 200,000 iu(international units)ವಿಟಮಿನ್-ಎ  ಇರುತ್ತದೆ. ಇದನ್ನು 9 ರಿಂದ 36 ತಿಂಗಳೊಳಗಿನ ಮಕ್ಕಳಿಗೆ  ಆರು ತಿಂಗಳಿಗೆ ಒಂದು ಬಾರಿ ನೀಡಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top