ಸಿನಿಮಾ

ಶಿವಣ್ಣನ ಸಿಂಪ್ಲಿಸಿಟಿಗೆ ಮನಸೋತ ಫ್ಯಾನ್ಸ್

ಶಿವಣ್ಣ ತೆರೆ ಮೇಲೆ ಮಾತ್ರವಲ್ಲ, ವೈಯಕ್ತಿಕವಾಗಿ ಕೂಡಾ ಸೂಪರ್‌ಸ್ಟಾರ್‌. ಏಕೆಂದರೆ ಶಿವಣ್ಣ ತಮ್ಮ ಸ್ನೇಹಿತರ ಜೊತೆ ಸರಳತೆಯಿಂದ ಇರುತ್ತಾರೆ. ಶಿವಣ್ಣ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರು ಸ್ನೇಹ ಮನೋಭಾವನೆಯೊಂದಿಗೆ ಸಂತೋಷದಿಂದ ಎಲ್ಲೆರೊಂದಿಗೆ ಬೆರೆಯುತ್ತಾರೆ. ಶಿವಣ್ಣ ಚಿತ್ರೀಕರಣದ ವೇಳೆ ಸರಳತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ ಮಾಡುತ್ತಿರುವ ‘ಕವಚ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೌದು, ಕಳೆದ ಒಂದು ವಾರದಿಂದ ‘ಕವಚ’ ಸಿನಿಮಾದ ಶೂಟಿಂಗ್ ಶಿವಮೊಗ್ಗ, ಸಾಗರ, ತೀರ್ಥಹಳ್ಳಿಯಲ್ಲಿ ಭರದಿಂದ ಸಾಗುತ್ತಿದೆ.

 

 

ಸಿಗಂದೂರಿನಲ್ಲಿ ‘ಕವಚ’ ಚಿತ್ರದ ಶೂಟಿಂಗ್ ವೇಳೆ ರಸ್ತೆ ಪಕ್ಕದ ಚಿಕ್ಕ ಕ್ಯಾಂಟೀನಲ್ಲಿ ಶಿವಣ್ಣ ಊಟ ಮಾಡುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಮತ್ತೊಂದು ಚಿತ್ರದಲ್ಲಿ ಶಿವಣ್ಣ ಶರ್ಟ್ ಮತ್ತು ಲುಂಗಿ ಧರಿಸಿದ್ದಾರೆ. ಈ ಫೊಟೋಗಳನ್ನು ಅಭಿಮಾನಿಗಳು ‘ಶಿವಣ್ಣ ಸಿಂಪ್ಲಿಸಿಟಿ’ ಎಂದು ಬರೆದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲಿರುವ ಮಕ್ಕಳ ಜೊತೆಗೆ ಐಸ್‌ ಕ್ಯಾಂಡಿ ತಿನ್ನುವ ಮೂಲಕ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಶಿವರಾಜ್‌ ಕುಮಾರ್‌. ಅಷ್ಟೇ ಅಲ್ಲದೆ, ಮಕ್ಕಳ ಜೊತೆಗೆ ತಾವೇ ಸೆಲ್ಫಿ ಚಿತ್ರ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

‘ಕವಚ’ ಚಿತ್ರವನ್ನು ತೆಲುಗಿನ ಜಿವಿಆರ್ ವಾಸು ನಿರ್ದೇಶನ ಮಾಡುತ್ತಿದ್ದಾರೆ, ಹೊಸ ನಟಿ ಕೃತಿಕಾ, ಇಶಾ ಕೊಪ್ಪಿಕರ್, ವಸಿಷ್ಠ ಸಿಂಹ, ರವಿಕಾಳೆ, ಸುಧಾ ಬೆಳವಾಡಿ ನತ್ತು ಇನ್ನಿತರರು ಅಭಿನಯ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top