ಸಿನಿಮಾ

ಕೊನೆಗೂ ಆಸ್ಪತ್ರೆಯಲ್ಲಿ ನೋಡಿಕೊಳ್ಳೋರಿಲ್ಲದೆ ಕಂಗಾಲಾಗಿದ್ದ ಸಹ ನಟಿಯ ಸಹಾಯಕ್ಕೆ ಬಂದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ‘ವೀರ್ ಗಟಿ’ ಸಿನಿಮಾದಲ್ಲಿ ಅಭಿನಯ ಮಾಡಿ ಆಗಿನ ಕಾಲದಲ್ಲಿ ಜನಪ್ರಿಯ ನಟಿಯಾಗಿದ್ದ ಪೂಜಾ ದದ್ವಾಲ್ ಈಗ ಟಿಬಿ ಖಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ನಟಿ ಸಲ್ಮಾನ್ ಖಾನ್ ಅವರಿಗೆ ಕೂಡ ಸಹಾಯಕ್ಕೆ ಕೇಳಿಕೊಂಡಿದ್ದರು. ಈಗ ನಟ ಸಲ್ಮಾನ್ ಖಾನ್ ಅವರು ನಟಿಯ ಸಹಾಯಕ್ಕೆ ಬಂದಿದ್ದಾರೆ.

 

ಹೌದು, ಕ್ಷಯ ರೋಗಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ಬಾಲಿವುಡ್‌ ನಟಿ ಪೂಜಾ ಸಹಾಯ ಸಿಕ್ಕಿದೆ. ಟೀ ಕುಡಿಯಲು, ಔಷಧಿ ತೆಗೆದುಕೊಳ್ಳಲು ಹಣವಿಲ್ಲದೆ ನರಳುತ್ತಿದ್ದ ಈ ತಾರೆಗೆ ಇದೀಗ ಸಲ್ಮಾನ್ ಖಾನ್ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ‘ವೀರಗತಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಪೂಜಾ ಅಭಿನಯ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ, ಅತುಲ್ ಅಗ್ನಿಹೋತ್ರಿ ಎಂಬ ನಟನ ಜೊತೆ ಪೂಜಾ ಅಭಿನಯ ಮಾಡಿದ್ದರು, ನನ್ನ ಜೊತೆಗೆ ಅಲ್ಲ ಎಂದು ಸಲ್ಮಾನ್ ಖಾನ್‌ ತಿಳಿಸಿದ್ದಾರೆ.

 

 

ಭೋಜ್‍ಪುರಿ ಚಿತ್ರದ ಸೂಪರ್ ಸ್ಟಾರ್ ರವಿ ಕಿಶನ್ ಅವರು ಕೂಡ ಪೂಜಾ ದದ್ವಾಲ್ ಅವರ ಸಹಾಯಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಎಂಎಲ್ಎ ಇನ್ ಹೈದ್ರಾಬಾದ್ ಚಿತ್ರದ ಚಿತ್ರೀಕರಣದಲ್ಲಿ ದಲ್ಲಿ ಬ್ಯುಸಿ ಆಗಿದ್ದ ರವಿ ಕಿಶನ್, ತಮ್ಮ ಸಹಾಯಕರ ಮೂಲಕ ಪೂಜಾ ದದ್ವಾಲ್ ಗೆ ಹಣ್ಣು ಮತ್ತು ಹಣವನ್ನು ಕಳಿಸಿಕೊಟ್ಟಿದ್ದಾರೆ. ರವಿ ಕಿಶನ್ ಜೊತೆಗೆ ಪೂಜಾ ಅಭಿನಯ ಮಾಡಿದ್ದರು.

 

 

6 ತಿಂಗಳ ಹಿಂದೆ ಟಿಬಿ ಕಾಯಿಲೆ ಇರುವುದು ಪೂಜಾಗೆ ಗೊತ್ತಾಗಿದೆ. ಬಳಿಕ ಆಕೆಯ ಪತಿ ಮತ್ತು ಕುಟುಂಬಸ್ಥರು ಪೂಜಾಳನ್ನು ದೂರ ಮಾಡಿದ್ದಾರೆ. ಗೋವಾದ ಕ್ಯಾಸಿನೋ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಪೂಜಾ ಬಳಿ ನಯಾಪೈಸೆ ಹಣ ಇರಲಿಲ್ಲ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top