ಭವಿಷ್ಯ

ಮಾರ್ಚ್ 26: ನಿತ್ಯಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೨೬ ಮಾರ್ಚ್ ೨೦೧೮
ಸೂರ್ಯೋದಯ : ೦೬:೨೩
ಸೂರ್ಯಾಸ್ತ : ೧೮:೨೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಚೈತ್ರ
ಪಕ್ಷ : ಶುಕ್ಲ ಪಕ್ಷ
ತಿಥಿ : ದಶಮೀ
ನಕ್ಷತ್ರ : ಪುನರ್ವಸು
ಯೋಗ : ಅತಿಗಂಡ
ಪ್ರಥಮ ಕರಣ : ತೈತಲೆ
ಸೂರ್ಯ ರಾಶಿ : ಮೀನ
ಅಭಿಜಿತ್ ಮುಹುರ್ತ : ೧೨:೦೧ – ೧೨:೪೯
ಅಮೃತಕಾಲ : ೧೦:೪೦ – ೧೨:೧೦
ಅಮೃತಕಾಲ : ೨೯:೨೭+ – ೩೦:೫೭+
ರಾಹು ಕಾಲ: ೦೭:೫೩ – ೦೯:೨೪
ಗುಳಿಕ ಕಾಲ: ೧೩:೫೫ – ೧೫:೨೬
ಯಮಗಂಡ: ೧೦:೫೪ – ೧೨:೨೫

ಮೇಷ (Mesha)

 

ಸಣ್ಣ ವಿಷಯವನ್ನು ಕೂಡ ಭೂತ ಕನ್ನಡಿಯಿಂದ ನೋಡಿ ಪರೀಕ್ಷಿಸುವ ಮನಸ್ಥಿತಿಯಿರುವ ನೀವು, ಕೆಲವೊಮ್ಮೆ ಉದಾರಿಗಳಾಗಬೇಕಿದೆ. ತಪ್ಪು ಮಾಡದ ಮನುಜ ಈ ಜಗತ್ತಿನಲ್ಲಿ ಇಲ್ಲ. ಹಾಗಾಗಿ ಇತರರು ಮಾಡುವ ತಪ್ಪಿಗೆ ಕ್ಷ ಮೆ ನೀಡಿರಿ, ಪರಾಕ್ರಮ ಸ್ಥಾನದ ಶನಿ ಹಣಕಾಸು ನೀಡಿದರೂ ಗುರುವಿನ ಬೆಂಬಲವಿಲ್ಲದೆ ಹಣಕಾಸು ಪೂರ್ಣವಾಗಿ ಬರುವುದಿಲ್ಲ.

 

ವೃಷಭ (Vrushabha)

ಜೀವನದಲ್ಲಿ ಹಿರಿಯರನ್ನು, ಸ್ತ್ರೀಯರನ್ನು ಗೌರವದಿಂದ ಕಾಣಿರಿ. ಇದರಿಂದಾಗಿ ನಿಮ್ಮ ವರ್ಚಸ್ಸು ಹೆಚ್ಚುವುದು ಮತ್ತು ಸಮಾಜದಲ್ಲಿ ಗೌರವ ಹೊಂದುವಿರಿ. ಗುರುವಿನ ಅನುಗ್ರಹ ಸಂಪಾದಿಸಲು ಗುರುಸ್ತೋತ್ರ ಪಠಿಸಿರಿ.

ಮಿಥುನ (Mithuna)

ಹಣ ಖರ್ಚಾಗುವ ಪರಿ ಕಂಡು ಆಶ್ಚರ್ಯವಾಗುವುದು. ದುಡಿದ ಹಣವು ಅನಾರೋಗ್ಯ ಸಲುವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಭಗವಂತನ ಕಾರ್ಯಗಳಿಗೆ ಮತ್ತು ದೀನದಲಿತರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ.

ಕರ್ಕ (Karka)

ಹೆಚ್ಚಿನ ಶ್ರಮವನ್ನು ಕಡಿಮೆ ಮಾಡುವುದು. ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ ಉತ್ತೀರ್ಣತೆಯನ್ನು ಹೊಂದುವ ದೃಢ ವಿಶ್ವಾಸವನ್ನು ಹೊಂದುವಿರಿ. ಗುರುವಿನ ಕೃಪೆ ಸಹಕಾರಿಯಾಗುವುದು, ಆತ್ಮೀಯ ಗೆಳೆಯರು ನಿಮ್ಮಿಂದ ಕೆಲ ವಿಷಯ ತಿಳಿಯಲು ಕಾತುರರಾಗಿದ್ದಾರೆ. ಅವರಿಗೆ ನಿಮ್ಮ ವಿಚಾರಧಾರೆಗಳನ್ನು ತಿಳಿಸುವಿರಿ.

ಸಿಂಹ (Simha)

ಈದಿನ ಹಣಕಾಸಿನ ತೊಂದರೆ ಇರುವುದಿಲ್ಲ. ಬಾಳಸಂಗಾತಿಯೊಡನೆ ಚರ್ಚಿಸಿ ಸಲಹೆ ಪಡೆಯಲು ಇಂದು ಸಕಾಲವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿರಿ, ಸಂಗಾತಿಯ ಅಸಹಕಾರ ನಿಮ್ಮ ಮನೋಚಿಂತನೆಯನ್ನು ಹೆಚ್ಚಿಸುವುದು

 

ಕನ್ಯಾರಾಶಿ (Kanya)

ಸಮೀಪದ ಜನ ಅಥವಾ ಬಂಧುಗಳೇ ನಿಮ್ಮ ಕಾರ‍್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು, ವ್ಯಾಪಾರ-ವ್ಯವಹಾರ ಎಂದರೆ ಲಾಭ-ನಷ್ಟ ಇದ್ದದ್ದೆ. ಎಲ್ಲ ಕಾಲದಲ್ಲೂ ಲಾಭವೇ ಆಗುತ್ತದೆ ಎಂದು ತಿಳಿಯಬಾರದು.

 

ತುಲಾ (Tula)

ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗಿರುವುದು. ವಾಕ್‌ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ. ದುಷ್ಟಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.

 

ವೃಶ್ಚಿಕ (Vrushchika)

ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು.

 

ಧನು ರಾಶಿ (Dhanu)

ದೈವಾನುಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವು. ಹಣಕಾಸಿನ ಕೊರತೆ ಇರುವುದಿಲ್ಲ., ಸಕಾರಾತ್ಮಕ ಚಿಂತನೆಯಿಂದ ಒಳಿತಾಗುವುದು. ಮಕ್ಕಳು ಉದ್ಯೋಗದಲ್ಲಿ ಪ್ರಗತಿ ಸಾಧಿಸುವುದರಿಂದ ಅವರ ಬಗ್ಗೆ ಹೆಮ್ಮೆ ಎನಿಸುವುದು.

 

ಮಕರ (Makara)

ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ಹಿರಿಯ ಅಧಿಕಾರಿಗಳ ಬೆಂಬಲ ದೊರೆಯುವುದು. ನಿಮ್ಮ ಬುದ್ಧಿಮತ್ತೆಯನ್ನು ಎಲ್ಲರೂ ಕೊಂಡಾಡುವರು. ಕುಲದೇವರ ಪ್ರಾರ್ಥನೆ ಮಾಡಿರಿ. ಸಹೋದರನ ಸಹಕಾರ ದೊರೆಯುವುದು.

 

ಕುಂಭರಾಶಿ (Kumbha)

ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸಮತೋಲನ ಕಂಡು ಬರುತ್ತದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ದೇಹಾರೋಗ್ಯ ಸುಧಾರಿಸಲಿದೆ, ವೃತ್ತಿರಂಗದಲ್ಲಿ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಹೊಂದಾಣಿಕೆ ಇರಬೇಕು. ದಾಯಾದಿಗಳಿಂದ ಕೆಟ್ಟ ಮಾತು ಕೇಳಿ ಬಂದು ಬೇಸರ ತಂದೀತು.

 

ಮೀನರಾಶಿ (Meena)

ವೃತ್ತಿರಂಗದಲ್ಲಿ ಕಾರ್ಯಒತ್ತಡದಿಂದ ಮಾನಸಿಕ ಸಮಾಧಾನ ವಿರದು. ಧಾರ್ಮಿಕ ಕಾರ್ಯಗಳ ಚಿಂತನೆ ನಡೆಯಲಿದೆ. ಅಂತಃ ಶತ್ರುಗಳ ಕಾಟಗಳಿಂದ ಬರಬೇಕಾದ ಸಹಕಾರ ತಪ್ಪಿ ಹೋಗಲಿದೆ, ಸಾಂಸಾರಿಕವಾಗಿ ನೆಮ್ಮದಿ ತೋರಿ ಬಂದರೂ ನಿರೀಕ್ಷಿತ ಸಮಾಧಾನ ಸಿಗದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top