ಸಿನಿಮಾ

ಈ ಸಾರಿ ಡೇಟ್ ಮಾಡುತ್ತಿರೋ ಹುಡುಗನನ್ನು ಮದ್ವೆ ಆಗೋದು ಖಂಡಿತಾ ಅಂದ್ರು ನಯನತಾರ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರಿನಲ್ಲಿ ಹುಟ್ಟಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ, ಈಗ ಸೌತ್ ಇಂಡಿಯಾದಲ್ಲಿ ನಂಬರ್ ಮಿಂಚುತ್ತಿದ್ದಾರೆ ನಯನತಾರ, ಹಾಗೆ ಇವರ ಲವ್ ಸ್ಟೋರಿಗಳು ಮಾತ್ರ ಎಲ್ಲಿಲ್ಲದ ಪ್ರಚಾರ ಪಡೆದುಕೊಂಡಿವೆ. ನಟ ಪ್ರಭುದೇವ್‌ ಜೊತೆಗೆ ಪ್ರೇಮ್ ಬ್ರೇಕ್ಅಪ್ ಆದ ಬಳಿಕ ತಮಿಳು ನಿರ್ಮಾಪಕ, ಬರಹಗಾರರಾಗಿರುವ ವಿಗ್ನೇಶ್‌ ಜೊತೆಗೆ ನಯನಾತಾರಾ ಓಡಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಗಾಗ ವಿದೇಶ ಸುತ್ತುವ ಈ ಜೋಡಿ, ಅಲ್ಲಿಯ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಈ ಮೂಲಕ ಬಹಿರಂಗವಾಗಿ ಅಲ್ಲದೆ ಇದ್ದರು ಇನ್‌ಡೈರೆಕ್ಟ್‌ ಆಗಿ ತಾವು ಎಂಗೇಜ್‌ ಎಂದು ಹೇಳಿಕೊಂಡಿದ್ದಾರೆ.

 

 

 

 

 

ನಯನತಾರಾ ಮತ್ತು ವಿಗ್ನೇಶ್‌ ಪ್ರೇಮದ ವಿಚಾರ ಇನ್ನು ಎಲ್ಲಿಯೂ ಅಧಿಕೃತವಾಗಿ ತಿಳಿದಿಲ್ಲ. ಆದರೆ, ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಇವರಿಬ್ಬರ ಚಿತ್ರ ನೋಡಿರುವ ಎಲ್ಲರು ಇವರು ಡೇಟಿಂಗ್‌ನಲ್ಲಿದ್ದಾರೆ ಎಂದು ಗುಸು
ಗುಸು ಮಾತನಾಡಿಕೊಳ್ಳುತ್ತಿದ್ದಾರೆ.

 

 

ಇಷ್ಟು ದಿನ ಕೇವಲ ಅಂತೆ ಕಂತೆಯಲ್ಲಿಯೇ ಸದ್ದು ಮಾಡುತ್ತಿದ್ದ ನಯನತಾರಾ ಪ್ರೀತಿ ವಿಚಾರ ಇದೀಗ ಅಧಿಕೃತಗೊಂಡಿದೆ. ಹಿಂದೂ ವರ್ಲ್ಡ್ ವುಮೆನ್ 2018 ಪ್ರಶಸ್ತಿ ಸಮಾರಂಭದಲ್ಲಿ ನಯನತಾರಾ ಮಾತನಾಡುವ ವೇಳೆ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ ನಟಿ ನಯನತಾರಾ. ಈ ಸಮಾರಂಭದಲ್ಲಿ ನಯನತಾರ ‘ದಿ ಹಿಂದೂ ಡಜ್ಲರ್ ಆಫ್ ದಿ ಇಯರ್’ ಪ್ರಶಸ್ತಿ ಸ್ವೀಕರಿಸಿ ಎಲ್ಲರಿಗು ಧನ್ಯವಾದ ಸಲ್ಲಿಕೆ ಮಾಡಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top