ಸಿನಿಮಾ

ಚಾನ್ಸ್ ಗೋಸ್ಕರ ಮಂಚ ಹತ್ತೋ ನಟಿಯರು ಇದರ ಬಗ್ಗೆ ಸತ್ಯ ಬಿಚ್ಚಿಟ್ಟ ಮಂಡ್ಯ ರಮೇಶ್

ಸ್ಯಾಂಡಲ್ ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಪದ್ಧತಿ ಇಲ್ಲವೇ ಇಲ್ಲವೆಂದು ಗಟ್ಟಿಯಾಗಿ ಹೇಳುವ ಧೈರ್ಯವು ನನಗಿಲ್ಲ. ದೇಶದ ಎಲ್ಲಾ ಸಿನಿಮಾ ರಂಗದಲ್ಲೂ ಕಾಸ್ಟಿಂಗ್ ಕೌಚ್ ಪದ್ಧತಿ ಇದೆ. ಇದು ಬಹಳ ವಿಷಾದದ ಸಂಗತಿ ಎಂದು ಹಿರಿಯ ಚಿತ್ರಣನಾಗಿರುವ ಮಂಡ್ಯ ರಮೇಶ್ ಭಾನುವಾರ ಖೇದ ವ್ಯಕ್ತಪಡಿಸಿದರು.

 

ಬಾಗಲಕೋಟೆ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ನಟ ಮಂಡ್ಯ ರಮೇಶ್ ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಪಡೆಯಲು ನಟಿಯರು ಮಂಚ ಹಂಚಿಕೊಳ್ಳಬೇಕಾಗಿದೆ ಈ ವಿಷಯದ ಕುರಿತು ಮಾತನಾಡಿ ಇದು ಅತೀವ ನೋವಿನ ಅವಕಾಶಕ್ಕಾಗಿ ಯುವ ನಟಿಯರಿಗೆ ಮಂಚಕ್ಕೆ ಕರೆಯುವ ಕೆಲವು ಜನರಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

 

 

ಯುವ ನಟಿಯರು ಇವೆಲ್ಲವನ್ನೂ ಎದುರಿಸಿಕೊಂಡು ಮುಂದೆ ನಡೆಯಬೇಕು. ಇದನ್ನೆಲ್ಲ ಮೀರಿ ಹೋಗುವಂತಹ ಸಾಹಸವನ್ನು ಹೊಸ ತಲೆಮಾರಿನ ಯುವಕ-ಯುವತಿಯರು ಮಾಡಿದಾಗ ಮಾತ್ರ, ಸಿನಿಮಾ ರಂಗ ಆರೋಗ್ಯಪೂರ್ಣವಾಗಿರುತ್ತದೆ ಎಂದು ಅವರು ಕಲಾವಿದರ ಬದುಕಿನ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು.

 

 

ಮಂಡ್ಯ ರಮೇಶ್ ಅವ್ರು ಹೇಳಿರುವುದಕ್ಕೆ ಬೆಂಬಲ ಸೂಚಿಸಿರುವ ಇತ್ತೀಚಿಗೆ ಮುಗಿದ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳಾದ ಕೃಷಿ ತಾಪಂಡಾ ಹಾಗು ಲಾಸ್ಯ ಅವರು ಕಾಸ್ಟಿಂಗ್​ ಕೌಚ್​ ಪದ್ಧತಿ ಎಲ್ಲ ಸಿನಿಮಾ ರಂಗದಲ್ಲಿದೆ. ಆದರೆ ಬೇರೆ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಕಡಿಮೆ ಎನ್ನಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top