ದೇವರು

ಮಾರ್ಚ್ 27ನೇ ತಾರೀಖು ಕಾಮದ ಏಕಾದಶಿ ಆ ದಿನ ಈ 7 ಕೆಲಸಗಳನ್ನು ತಪ್ಪದೆ ಮಾಡಿ ಅಂದುಕೊಂಡ ಕೆಲಸಗಳು ,ಆಸೆಗಳು ನೆರವೇರುತ್ತವೆ

ಮಾರ್ಚ್ 27ನೇ ತಾರೀಖು ಕಾಮದ ಏಕಾದಶಿಯ ದಿನ ಈ ಏಳು ಕೆಲಸದಲ್ಲಿ ಯಾವುದಾದರೂ ಒಂದು ಕೆಲಸವನ್ನು ಮಾಡಿ ನಿಮ್ಮ ಆಸೆಗಳು ಪೂರ್ಣಗೊಳ್ಳುತ್ತವೆ.

ನಾಳೆ ಮಾರ್ಚ್ 27ನೇ ತಾರೀಖು, ಚೈತ್ರ ಮಾಸದ, ಶುಕ್ಲ ಪಕ್ಷದ, ಏಕಾದಶಿ ತಿಥಿ, ಆಶ್ಲೇಷ ನಕ್ಷತ್ರವಿದ್ದು, ಮಂಗಳವಾರದ ದಿನ ಕಟಕ ರಾಶಿಯಲ್ಲಿ ಕಾಮದ ಏಕಾದಶಿಯನ್ನು ಆಚರಿಸಲಾಗುತ್ತದೆ .ಈ ಚೈತ್ರ ಮಾಸದಲ್ಲಿ ಬರುವ ಶುಕ್ಲಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ ಎಂದು ಕರೆಯಲಾಗುತ್ತದೆ. ಕಾಮದ ಏಕಾದಶಿಯು ಭಗವಂತನಾದ ವಿಷ್ಣುವಿಗೆ ಆತ್ಯಂತ ಪ್ರಿಯ ಎಂದು ಪರಿಗಣಿಸಲಾಗಿದೆ. ಈ ದಿನ ವ್ರತವನ್ನು ಮಾಡಿದರೆ ಬಹಳ ಉತ್ತಮವಾದ ಫಲಿತಾಂಶಗಳನ್ನು ಕಾಣಬಹುದಾಗಿದೆ.

 

 

ಈ ಬಾರಿ ಕಾಮದ ಏಕಾದಶಿಯು ಮಂಗಳವಾರದ ದಿನವೇ ಬಂದಿರುವುದು ತುಂಬಾ ವಿಶೇಷವಾಗಿದೆ. ಧರ್ಮ ಗ್ರಂಥಗಳ ಪ್ರಕಾರ ಕಾಮದ  ಏಕಾದಶಿ ವ್ರತವನ್ನು ಮಾಡುವುದರಿಂದ ಪಾಪಗಳೆಲ್ಲವೂ ತೊಲಗಿ ಹೋಗಿ, ಪುಣ್ಯವು ಪ್ರಾಪ್ತಿಯಾಗುತ್ತದೆ. ಈ ವ್ರತವನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗಲಿವೆ.ಕಾಮದ ಎಂದು ಹೆಸರೇ ಸೂಚಿಸುವಂತೆ ಕಾಮನೆಗಳನ್ನು (ನಿಮ್ಮ ಮನಸ್ಸಿನ ಆಸೆಗಳನ್ನು) ಈಡೇರಿಸಿಕೊಳ್ಳಲು ಈ  ಏಕಾದಶಿಯು ಸಹಕಾರಿಯಾಗಿದೆ. ಆದ್ದರಿಂದ ಈ ಏಕಾದಶಿಯನ್ನು ಕಾಮದ ಏಕಾದಶಿ ಎಂದೂ ಕರೆಯಲಾಗುತ್ತದೆ.

 ಏಕಾದಶಿಯ ದಿನ ಕೆಲವು ವಿಶೇಷವಾದ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಕಷ್ಟಗಳು ಬಗೆಹರಿಯುತ್ತವೆ.

1.ಭಗವಂತನಾದ  ವಿಷ್ಣುವನ್ನು ಪೀತಾಂಬರಧಾರಿ ಎಂದು ಕರೆಯುತ್ತಾರೆ. ಆದ್ದರಿಂದ ಈ ದಿನ ವಿಷ್ಣುವಿಗೆ ಹಳದಿ ವಸ್ತ್ರವನ್ನು  ಅರ್ಪಿಸಬೇಕು.

 

 

2.ಏಕಾದಶಿಯ ದಿನ ಭಗವಂತನಾದ ವಿಷ್ಣುವಿಗೆ ಕೀರ್  ಪ್ರಸಾದವನ್ನು ನೈವೇದ್ಯವಾಗಿ ಅರ್ಪಿಸಿ ಅದರಲ್ಲಿ ತುಳಸಿಯ ದಳವನ್ನು  ಹಾಕಿ ಅರ್ಪಿಸಿದರೆ ಅದು ವಿಷ್ಣುವಿಗೆ ಶ್ರೇಷ್ಠವಾದ ಪ್ರಸಾದವಾಗಲಿದೆ.

 

3.ಏಕಾದಶಿಯ ದಿನ ಭಗವಂತನಾದ ವಿಷ್ಣುವಿಗೆ ಹಳದಿ ಬಣ್ಣದ ಹಣ್ಣುಗಳನ್ನು ಅದರಲ್ಲೂ ಬಾಳೆಹಣ್ಣನ್ನು ವಿಶೇಷವಾಗಿ ಅರ್ಪಿಸಬೇಕು.

4.ಈ ದಿನ ಭಗವಂತನಾದ  ವಿಷ್ಣುವಿಗೆ ತುಳಸಿ ಮಾಲೆಯನ್ನು ಅರ್ಪಿಸಿ. ಇದರಿಂದ ವಿಷ್ಣುವು ಪ್ರಸನ್ನನಾಗುತ್ತಾನೆ.

 

 

5.ಏಕಾದಶಿಯ ದಿನ ಭಗವಂತನಾದ ವಿಷ್ಣುವಿಗೆ ಪ್ರಸಾದದ ರೂಪದಲ್ಲಿ ಹಳದಿ ಬಣ್ಣದ ಸಿಹಿ ಮಿಠಾಯಿ ಅಥವಾ ಸಿಹಿಯಾದ ಲಡ್ಡುವನ್ನು ಅರ್ಪಿಸಬೇಕು.

6.ಭಗವಂತನಾದ ವಿಷ್ಣುವಿಗೆ ಕಮಲದ ಹೂವನ್ನು ಮತ್ತು ಇದರ ಜೊತೆಗೆ  ಹಳದಿ ಬಣ್ಣಗಳ ಹೂವನ್ನು  ಅರ್ಪಿಸಿದರೆ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

 

 

7.ಈ ಏಕಾದಶಿಯ ದಿನ ಭಗವಂತನಾದ ವಿಷ್ಣುವಿಗೆ ಸುಗಂಧ ದ್ರವ್ಯಗಳನ್ನು ಅರ್ಪಿಸಿ ಇದರಿಂದ ನಮ್ಮ ಆಸೆಗಳು ಪೂರ್ಣಗೊಳ್ಳುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top