ಅರೋಗ್ಯ

ದಪ್ಪ ಆಗ್ತೀರಾ ಅಂತ ತುಪ್ಪ ತಿಂತಾ ಇಲ್ವಾ ,ಅದರ ಆರೋಗ್ಯಕರ ಗುಣಗಳು ಗೊತ್ತಾದ್ರೆ ದಿನ ಮಿಸ್ ಮಾಡ್ದೆ ತುಪ್ಪ ತಿಂತೀರಾ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತುಪ್ಪ ಸೇವಿಸಿದರೆ ಬುದ್ದಿ ಚುರುಕು.

 

ತುಪ್ಪ ಎಂದರೆ ಯಾರಿಗೆ ಇಷ್ಟವಿಲ್ಲ? ಎಲ್ಲರಿಗೂ ಇಷ್ಟ.ಅದರಲ್ಲೂ ಹಸುವಿನಿಂದ ಮಾಡಿದ ತುಪ್ಪ ಇನ್ನು ಅತ್ಯಂತ ರುಚಿಯಾಗಿರುತ್ತದೆ. ನಾವು ಊಟ, ತಿಂಡಿ ತಿನ್ನುವಾಗ ತುಪ್ಪವನ್ನು ಹಾಕಿಕೊಂಡು ತಿನ್ನಬೇಕೆನಿಸುತ್ತದೆ ಯಾಕೆಂದರೆ ತುಪ್ಪ ನಾಲಿಗೆಗೆ ರುಚಿ ಕೊಡುತ್ತದೆ.ಇದರಲ್ಲಿ ಔಷದೀಯ ಗುಣಗಳು ಇವೆ.

 

 

1.ಹಸುವಿನ ತುಪ್ಪವನ್ನು ನಿಯಮಿತವಾಗಿ ಸೇವಿಸಿದರೆ ಬುದ್ದಿ ಚುರುಕಾಗುತ್ತದೆ.

 

2.ತುಪ್ಪವು  ನಮ್ಮ ಚರ್ಮದ  ಕಾಂತಿಯನ್ನು ಹೆಚ್ಚುತ್ತದೆ.

 

3.ಎಲ್ಲಾ ಇಂದ್ರಿಯಗಳು ಚೆನ್ನಾಗಿ ಕೆಲಸ ಮಾಡುತ್ತವೆ.

 

4.ಜಠರದ ಕಾರ್ಯ ,ವ್ಯಾಧಿಕ್ಷಮತೆ ಹೆಚ್ಚುತ್ತದೆ.

 

5.ಇದಲ್ಲದೆ ಹಲವಾರು ನೋವುಗಳನ್ನು ಕಡಿಮೆ ಮಾಡುವ ಶಕ್ತಿ ತುಪ್ಪದಲ್ಲಿ ಇದೆ.

 

 

6.ಚರ್ಮ ರೋಗ,ಮಾನಸಿಕ ರೋಗಗಳನ್ನು ವಾಸಿಮಾಡುತ್ತದೆ.

 

7.ನಮ್ಮ ಭಾರತೀಯ ಆಯುರ್ವೇದ ಪದ್ದತ್ತಿಯಲ್ಲಿ ಹಸುವಿನ ತುಪ್ಪವನ್ನು  ಔಷಧಿಯಾಗಿ ಬಳಸುತ್ತಾರೆ. ಇದರಿಂದ ಪಂಚಗವ್ಯ ವನ್ನು ತಯಾರಿಸುತ್ತಾರೆ.

 

8.ಜಠರ ಅಂದರೆ ಹೊಟ್ಟೆಯ ಕಾರ್ಯವನ್ನು ಹೆಚ್ಚಿಸಿ  ಜೀರ್ಣಶಕ್ತಿಯನ್ನು ಉತ್ತಮ ಗೊಳಿಸಲು ಮೊದಲು ಅನ್ನಕ್ಕೆ ಒಂದು ಚಮಚ ತುಪ್ಪ ಮತ್ತು ಉಪ್ಪು ಸೇರಿಸಿ ಸೇವಿಸಬೇಕು.

 

 

9.ಐದು ಗ್ರಾಂ ಕರಿಮೆಣಸಿನ ಪುಡಿಯನ್ನು ಒಂದು ಚಮಚ ತುಪ್ಪದಲ್ಲಿ ಕಲೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.

 

 

10.ಮಕ್ಕಳಲ್ಲಿ ಹಸಿವು ಹೆಚ್ಚಿಸಲು 5 ರಿಂದ 10  ಎಲೆ ಕರಿಬೇವಿನ ಸೊಪ್ಪು ಹಾಗೂ 2 ಅಥವಾ 3 ಕಾಳುಮೆಣಸನ್ನು ಎರಡು ಚಮಚ ತುಪ್ಪದಲ್ಲಿ ಹುರಿದು ಪುಡಿಮಾಡಿ. ಪುಡಿಯನ್ನು ಕಾಲು (1/4) ಚಮಚ ಬೆಚ್ಚಗಿನ ನೀರಿನಲ್ಲಿ ಸೇರಿಸಿ ಪ್ರತಿನಿತ್ಯ ಸ್ನಾನ ಆದ ನಂತರ ಸೇವಿಸಿದರೆ ಹಸಿವು ಹೆಚ್ಚುತ್ತದೆ.

 

 

11.ದಾಸವಾಳದ ಹೂವನ್ನು ತುಪ್ಪದಲ್ಲಿ ಹುರಿದು ಸೇವಿಸಿದರೆ ರಕ್ತಸ್ರಾವ. ಆಗುವುದನ್ನು ನಿಲ್ಲಿಸುತ್ತದೆ. ½  ಚಮಚ ಮೆಂತ್ಯವನ್ನು  ತುಪ್ಪದಲ್ಲಿ ಉರಿದು  ಪುಡಿಮಾಡಿ. ಇದನ್ನು ಮಜ್ಜಿಗೆ ಜೊತೆ ಸೇರಿಸಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆನೋವು ಕಡಿಮೆಯಾಗುತ್ತದೆ.

 

 

12. ಒಂದು ತಾಮ್ರದ ಪಾತ್ರೆಯಲ್ಲಿ ಹಸುವಿನ ಒಣಗಿದ ಸಗಣಿಗೆ ಸ್ವಲ್ಪ ಹಸುವಿನ ತುಪ್ಪ ಹಾಕಿ ಬೆಂಕಿ ಸ್ಪಶ ಮಾಡಿದರೆ ನಮ್ಮ ದೇಹದಲ್ಲಿರುವ ಖಾಯಿಲೆಗಳನ್ನು ಹೋಗಲಾಡಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದನ್ನು ಮನೆಯಲ್ಲಿ ಸೂರ್ಯೋದಯಕ್ಕೂ ಮುಂಚೆ ಮತ್ತು ಸೂರ್ಯಾಸ್ತದ ನಂತರ ದಿನಕ್ಕೆ ಎರಡು ಬಾರಿ ಮಾಡಬಹುದು.ಇದಕ್ಕೆ ಅಗ್ನಿಹೋತ್ರಎಂದು ಕರೆಯುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top