ಭವಿಷ್ಯ

ನಿಮ್ಮ ರಾಶಿಗೆ ಅನುಗುಣವಾಗಿ ಈ ಬಣ್ಣದ ಬಟ್ಟೆ ,ವಾಹನ ಮತ್ತು ಇತರ ವಸ್ತುಗಳನ್ನ ಕೊಂಡ್ಕೊಂಡ್ರೆ ಒಳ್ಳೆಯದು

ರಾಶಿ ಚಕ್ರದ ಬಣ್ಣಗಳಿಂದ ಯಶಸ್ಸು.

 

ಪ್ರತಿ ರಾಶಿಯೂ ಒಂದೊಂದು ಬಣ್ಣವನ್ನು ಆಳುತ್ತದೆ. ಬಟ್ಟೆ ಮಾತ್ರವಲ್ಲ ವಾಹನವನ್ನು ಕೂಡ ರಾಶಿ ಚಕ್ರಕ್ಕೆ ಅನ್ವಯಿಸುವ ಬಣ್ಣವನ್ನು ಬಳಸಿದರೆ ಅದೃಷ್ಟ ಒಲಿದು ಬರುತ್ತದೆ.

 

ಪ್ರತಿ ರಾಶಿಚಕ್ರಕ್ಕೂ ಅದರದೇ ಆದ ಬಣ್ಣ ಕೂಡ ಇರುತ್ತದೆ.ಹೀಗಾಗಿ ನೀವು ಧರಿಸುವ ಬಟ್ಟೆ ಮಾತ್ರವಲ್ಲ, ಕಾರು,ಅಥವಾ ಯಾವುದೇ ವಾಹನ ವಾಗಿರಬಹುದು ಅದರ ಬಣ್ಣದ ಆಯ್ಕೆ ಕೂಡ ಮಹತ್ವವಾದುದು.ರಾಶಿಚಕ್ರಕ್ಕೆ ಅನ್ವಯಿಸಿದ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಯಾವ ರಾಶಿಯವರು ಯಾವ ಬಣ್ಣವನ್ನು ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

 

ಮೇಷ (Mesha)


ಮಂಗಳ ಗ್ರಹದ ಮೊದಲ ರಾಶಿ.ಇವರ ಅದೃಷ್ಟದ ಬಣ್ಣ ಕೆಂಪು,ಇವರು ತುಂಬಾ ಶಕ್ತಿ ಶಾಲಿಗಳು ಮತ್ತು ಕ್ರಿಯಾ ಶೀಲತೆ ಉಳ್ಳವರು.

 

ವೃಷಭ (Vrushabha)

 

ಇವರಿಗೆ ತಮ್ಮದೇ ಆದ ರೀತಿಯಲ್ಲಿ ಅಂದರೆ ಸಮಯಕ್ಕೆ ತಕ್ಕಂತೆ ಕೆಲಸ ಮಾಡಲು ಇಷ್ಟ ಪಡುತ್ತಾರೆ. ಇವರಿಗೆ ಬಿಳಿ ಬಣ್ಣ  ಒಳ್ಳೆಯದು ಇವರನ್ನು ಯಾರು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೋ ಅಂತವರಿಂದ ದೂರ ಉಳಿಯುತ್ತಾರೆ.ಬಿಳಿ ಬಣ್ಣ ಸತ್ಯ ಮತ್ತು ಶುದ್ಧತೆಯ ಸಂಕೇತ,ಇವರು ಶಾಂತವಾಗಿರಲು ಬಯಸುತ್ತಾರೆ.

 

ಮಿಥುನ (Mithuna)

 ತಿಳಿ ಹಸಿರು ಬಣ್ಣ  ಇವರಿಗೆ ಅದೃಷ್ಟ ತಂದುಕೊಡುತ್ತದೆ. ಇವರು ಅಧಿಕ ಮಾತುಗಾರರು ಮತ್ತು ದ್ವಂದ್ವ ಲಕ್ಷಣವನ್ನು ಹೊಂದಿದವರು.ಇವರ ಬುದ್ಧಿಶಕ್ತಿಗೆ,ಮನಸ್ಸಿನ ಸಾಮರ್ಥ್ಯವನ್ನು ಸಮತೋಲನ ದಲ್ಲಿ ಇಡಲು ತಿಳಿ ಹಸಿರು ನೆರವಾಗುತ್ತದೆ.

 

ಕರ್ಕ (Karka)

ಇವರಿಗೆ ಬಿಳಿ ಅದೃಷ್ಟದ ಬಣ್ಣ.ಬಿಳಿಯ ಜೊತೆಗೆ ಬೆಳ್ಳಿಯ ಬಣ್ಣವೂ ಚೆನ್ನಾಗಿ ವಗ್ಗುತ್ತದೆ.ಈ ರಾಶಿಯ ಅಧಿಪತಿ ಚಂದ್ರ.ಬಿಳಿಯ ಬಣ್ಣವೂ ಇವರ ಸೂಕ್ಷ್ಮ ಭಾವನೆಗಳನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.

 

ಸಿಂಹ (Simha)

ಈ ರಾಶಿಯ ಅಧಿಪತಿ ಸೂರ್ಯ .ಸಿಂಹ ರಾಶಿಯವರಿಗೆ ಚಿನ್ನದ ಬಣ್ಣ ಒಗ್ಗುತ್ತವೆ. ಇದು ರಾಯಲ್ ಬಣ್ಣ ಎಂದು ಕೂಡ ಹೇಳಲಾಗುತ್ತದೆ.ಉತ್ತಮ ಆಡಳಿತ ನೆಡೆಸಲು ಸಹಾಯಕಾರಿಯಾಗಿದೆ.

 

ಕನ್ಯಾರಾಶಿ (Kanya)

ಗಾಢ ಕಾಫಿ ಬಣ್ಣ,ಹಸಿರು,ಮತ್ತು ಆಕಾಶ ನೀಲಿ ಬಣ್ಣವು ಕನ್ಯಾ ರಾಶಿಗೆ ಹಿಡಿಸುತ್ತದೆ.ಆಕಾಶ ನೀಲಿ ಬಣ್ಣವು ತಂಪು ಬಣ್ಣವಾಗಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನರಗಳು ಸ್ಥಿರವಾಗಿರಲು ನೆರವಾಗುತ್ತದೆ, ಆತಂಕ ಮತ್ತು ಭಯವನ್ನು. ನಿವಾರಿಸುತ್ತದೆ.

 

ತುಲಾ (Tula)

ಬಿಳಿ ಮತ್ತು ವ್ಯೆಡೂರ್ಯದ ಬಣ್ಣ  ಈ ರಾಶಿಗೆ ಒಳ್ಳೆಯದು.ಈ ರಾಶಿಯವರು ಸಭ್ಯರು,ಒಳ್ಳೆಯ  ಕಲಾವಿದರು ಮತ್ತು ಸ್ವಭಾವತಃ ರೋಮಾಂಚನ ವಾಗಿರುವವರು.

 

ವೃಶ್ಚಿಕ (Vrushchika)

  ರಾಶಿಯ ಅಧಿಪತಿ  ಮಂಗಳ.ಕಡು ಕಿತ್ತಳೆ ಬಣ್ಣ  ಅವರಿಗೆ ಅದೃಷ್ಟದ ಬಣ್ಣ .ಹಾಗಾಗಿ ಕಿತ್ತಳೆ ಬಣ್ಣವೂ  ಆರೋಗ್ಯ ಮತ್ತು ಉಲ್ಲಾಸವನ್ನು ಸೂಚಿಸುತ್ತದೆ.

 

ಧನು ರಾಶಿ (Dhanu)

ಈ ರಾಶಿಯನ್ನು ಗುರು ಗ್ರಹವು ಆಳುತ್ತದೆ.ಇವರಿಗೆ ಹಳದಿ ಬಣ್ಣವೂ ಒಳ್ಳೆಯದನ್ನು ಮಾಡುತ್ತದೆ. ಈ ರಾಶಿಯಲ್ಲಿ ಜನಿಸಿದವರು  ಯಶಸ್ಸು ಮತ್ತು ಬೆಳವಣಿಗೆಯನ್ನು ಜೊತೆಯಲ್ಲಿಯೇ ಹೊತ್ತುಕೊಂಡು ಬರುತ್ತಾರೆ.ಇವರನ್ನು ತಿಳಿ  ಮತ್ತು ನೇರಳೆ ಬಣ್ಣವು  ಇವರ ಮನಸ್ಸನ್ನು ಶಾಂತವಾಗಿಡುವುದಕ್ಕೆ  ಸಹಕಾರಿಯಾಗಿದೆ.

 

ಮಕರ (Makara)

ಸಭ್ಯ ಮತ್ತು ಆಧ್ಯಾತ್ಮದ ಬಗ್ಗೆ ಒಲವು ಉಳ್ಳವರು.ಇವರು ಆಧ್ಯಾತ್ಮ ಮತ್ತು ಶಾಂತ ಸ್ವಭಾವಕ್ಕೆ ನೀಲಿ ಮತ್ತು ನೇರಳೆ ಬಣ್ಣ  ಶುದ್ಧ ಆಧ್ಯಾತ್ಮ ಭಾವನೆ ಮತ್ತು ಪ್ರಜ್ಞೆಯನ್ನು ಮೂಡಿಸುತ್ತದೆ.

 

ಕುಂಭರಾಶಿ (Kumbha)

ಈ ರಾಶಿಯನ್ನು ಶನಿ ಆಳುತ್ತದೆ.ಇವರು ಆಧ್ಯಾತ್ಮದ  ಬಗ್ಗೆ ಚಿಂತನೆ ಮಾಡುತ್ತಾರೆ ಮತ್ತು ಪ್ರಬಲರು ಕೂಡ.ಕಪ್ಪು,ಬೂದು ಬಣ್ಣ,ಕಡು ನೀಲಿ ಮತ್ತು ಕಂದು  ಬಣ್ಣವು ಇವರಿಗೆ ಅದೃಷ್ಟ ಕೊಡುತ್ತದೆ. ಈ ಬಣ್ಣಗಳು ಕಲಾತ್ಮಕ ಮತ್ತು ಸಾಮರಸ್ಯವನ್ನು ಸೂಚಿಸುತ್ತದೆ.

 

ಮೀನರಾಶಿ (Meena)

ಈ ರಾಶಿಯನ್ನು ಗುರು ಗ್ರಹ ಆಳುತ್ತಾನೆ. ಹಳದಿ ಅದೃಷ್ಟದ ಬಣ್ಣ.ಈ ಬಣ್ಣವು ಆತ್ಮದ ಗುಣಗಳನ್ನು ಪಡೆಯಲು ನೆರವಾಗುತ್ತದೆ. ಮೀನ ರಾಶಿಯವರಿಗೆ ಇದು ಮಾನಸಿಕವಾಗಿ ಹೇರಳ ಶಕ್ತಿಯನ್ನು ಕೊಡುತ್ತದೆ.ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ  ಹಾಗೂ ಕೆಲವು ಬಾರಿ ಇವರ ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top