ಸಮಾಚಾರ

ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

ಮಹಿಳೆಯರು ಉದ್ಯಮ ಕ್ಶೆತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಅವರ ಸಹಭಾಗಿತ್ವ ಕುಸಿಯುತ್ತ ಬರುತ್ತಿದೆ. ಎಂದು ಅನೇಕೆ ಸಮೀಕ್ಷೆಗಳು ಹೇಳುತ್ತಿವೆ. ಈ ಮಧ್ಯೆ, ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಪರಿವರ್ಥನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ‘ಉದ್ಯೋಗಿನಿ’ ಎನ್ನುವ ಯೋಜನೆಯನ್ನು ಇನ್ನಷ್ಟು ಬಲಗೊಳಿಸುವ ನಿರ್ಧಾರ ಮಾಡಿದೆ.

 

ಮಹಿಳೆಯರ ಸಬಲೀಕರಣಕ್ಕೆ ‘ಉದ್ಯೋಗಿನಿ’ ಯೋಜನೆಯಲ್ಲಿ ಮಹತ್ತರ ಬದಲಾವಣೆ ತಂದಿರುವ ರಾಜ್ಯ ಸರ್ಕಾರ 3 ಲಕ್ಷ ರೂ. ಸಾಲವನ್ನು ನೀಡಲಿದೆ. ಇದರಲ್ಲಿ 90,000 ರೂ. ಸಬ್ಸಿಡಿ ಕೂಡ ನೀಡುತ್ತಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಉದ್ಯೋಗಿನಿ ಯೋಜನೆಯಡಿ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ರೂಪಿಸಲಾಗುತ್ತದೆ. ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದ್ದು, ವಾರ್ಷಿಕವಾಗಿ 1.5 ಲಕ್ಷ ರೂ. ಆದಾಯ ಹೊಂದಿರುವ 55 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಸಾಲವನ್ನು ನೀಡುತ್ತದೆ.

 

 

ಮಹಿಳಾ ಸಬಲೀಕರಣದ ಧ್ಯೇಯ:
ಉದ್ಯೋಗಿನಿ ಬ್ಯಾಂಕುಗಳು ಹಾಗು ಇತರ ಹಣಕಾಸು ಸಂಸ್ಥೆಗಳ ಮೂಲಕ ಸ್ಲ ಕೊಡುವ ಮುಖೇನ ಮಹಿಳಾ ಸಬಲೀಕರಣಕ್ಕೆ ಸಹಕಾರ ಮಾಡುತ್ತದೆ. ಇದು ವ್ಯಾಪಾರ ಚಟುವಟಿಕೆಗಳನ್ನು/ಸೂಕ್ಷ್ಮ ಉದ್ಯಮಗಳನ್ನು ಕೈಗೊಳ್ಳಲು ಸಬ್ಸಿಡಿಯನ್ನೂ ಸಹ ಒದಗಿಸುತ್ತದೆ. ‘ಉದ್ಯೋಗಿನಿ’ ಯೋಜನೆ ವಿಶೇಷವಾಗಿ ವ್ಯಾಪಾರ ಹಾಗು ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಸ್ವಯಂ ಅವಲಂಬನೆ ಪಡೆಯಲು ನೆರವಾಗುತ್ತದೆ. ಸಣ್ಣ ಬಂಡವಾಳದಲ್ಲಿ ನಡೆಸಬಹುದಾದ ಟಾಪ್ 10 ಬಿಸಿನೆಸ್ ಐಡಿಯಾ ಇದಾಗಿದೆ.

 

 

ಸಾಲವನ್ನು ಹೇಗೆ ಪಡೆಯುವುದು?

1987ರಲ್ಲಿ ಪ್ರಾರಂಭವಾದ ಮಹಿಳಾ ಅಭಿವೃದ್ಧಿ ನಿಗಮ, ಈಗ ಎಲ್ಲ ಜಿಲ್ಲೆಯಲ್ಲಿ ಇದೆ. ಜಿಲ್ಲಾ ಕೇಂದ್ರದ ಮಹಿಳಾ ಹಾಗು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿಗಮದ ಜಿಲ್ಲಾ ನಿರೀಕ್ಷಕರು ಇರುತ್ತಾರೆ. ಜಿಲ್ಲಾ ನಿಗಮಗಳು ಅರ್ಜಿ ಸಂಗ್ರಹಿಸುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top